ಮದುವೆ ಪ್ಲಾನ್‌ ಇದ್ಯಾ..? ಹಾಗಿದ್ರೆ, ಭಾರತದ ಈ 10 ಹನಿಮೂನ್‌ ಸ್ಥಳಗಳಿಗೆ ಮರೆಯದೇ ಭೇಟಿ ನೀಡಿ..

Best honeymoon places in india : ಮದುವೆಯ ನಂತರ ಹನಿಮೂನ್‌ಗೆ ಎಲ್ಲಿಗೆ ಹೋಗಬೇಕು ಎಂಬುದು ದಂಪತಿಗಳ ಪ್ರಮುಖ ಸಮಸ್ಯೆ. ಅದಕ್ಕಾಗಿಯೇ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಬನ್ನಿ ಇದೀಗ ನಿಮಗಾಗಿ ಬಜೆಟ್ ಸ್ನೇಹಿ ಭಾರತೀಯ ಹನಿಮೂನ್‌ ಸ್ಥಳಗಳನ್ನು ತಂದಿದ್ದೇವೆ, ಬನ್ನಿ ಅವು ಯಾವುವು ಅಂತ ನೋಡೋಣ.
 

Honeymoon Destinations in India : ಮದುವೆಯ ನಂತರ ಹನಿಮೂನ್ ಹೋಗುವ ಟ್ರೆಂಡ್ ಈಗ ಬಹಳ ಜನಪ್ರಿಯವಾಗಿದೆ. ಸಾಮಾನ್ಯವಾಗಿ ಮದುವೆಗೂ 6-8 ತಿಂಗಳ ಮೊದಲೇ ಜೋಡಿಗಳು ಹನಿಮೂನ್ ಪ್ಲಾನ್‌ ಮಾಡುತ್ತಾರೆ. ಅಷ್ಟೇ ಅಲ್ಲದೆ ಸುಂದರವಾದ ತಾಣ, ಉತ್ತಮ ಪ್ಯಾಕೇಜ್‌ಗಳನ್ನು ಹುಡುಕಾಡುತ್ತಿರುತ್ತಾರೆ.
 

1 /9

ಭಾರತದಲ್ಲಿನ ಈ 10 ಸ್ಥಳಗಳು ಸ್ವಿಟ್ಜರ್ಲೆಂಡ್‌ಗಿಂತ ಕಡಿಮೆಯಿಲ್ಲ. ಇಲ್ಲಿ ನೀವು ಆಹಾರದಿಂದ ಹಿಡಿದು ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದು. ಮದುವೆಯ ನಂತರ ಹನಿಮೂನ್‌ಗಾಗಿ ಎಲ್ಲಿಗೆ ಹೋಗಬೇಕು ಎಂಬ ಗೊಂದಲ ನಿಮಗೂ ಇದ್ದರೆ, ಹನಿಮೂನ್‌ಗಾಗಿ ನಾವು ನಿಮಗೆ ಟಾಪ್ 10 ಭಾರತೀಯ ಸ್ಥಳಗಳನ್ನು ಪರಿಚಯ ಮಾಡಿಸುತ್ತೇವೆ..  

2 /9

ಕಾಶ್ಮೀರ: ನೀವು ಕಾಶ್ಮೀರದ ಶ್ರೀನಗರ, ಗುಲ್ಮಾರ್ಗ್, ಸೋನ್ಮಾರ್ಗ್, ಡ್ರಾಸ್ಗೆ ಪ್ರಯಾಣಿಸಬಹುದು. ಈ ಎಲ್ಲಾ ಸ್ಥಳಗಳು ತುಂಬಾ ಸುಂದರವಾಗಿವೆ. ಶ್ರೀನಗರದಲ್ಲಿರುವ ದಾಲ್ ಸರೋವರಕ್ಕೆ ಭೇಟಿ ನೀಡಬಹುದು.  

3 /9

ಲಕ್ಷದ್ವೀಪ: ಲಕ್ಷದ್ವೀಪ ಭಾರತದ ಅತ್ಯಂತ ಸುಂದರವಾದ ಕೇಂದ್ರಾಡಳಿತ ಪ್ರದೇಶವಾಗಿದೆ. ಇದು ಭಾರತದ ಮುಖ್ಯ ಭೂಭಾಗದಿಂದ ಸುಮಾರು 300 ಕಿಮೀ ದೂರದಲ್ಲಿರುವ ಅಬರ್ ಸಾಗರದಲ್ಲಿದೆ. ಲಕ್ಷದ್ವೀಪವು ಭಾರತದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶ ಮತ್ತು ಆಕರ್ಷಕ ಪ್ರವಾಸಿ ತಾಣವಾಗಿದೆ. ಇದು ಹನಿಮೂನ್‌ಗೆ ಸೂಕ್ತ ತಾಣವಾಗಿದೆ.   

4 /9

ಹಿಮಾಚಲ: ಶಿಮ್ಲಾ ಮತ್ತು ಮನಾಲಿಗೆ ಹೋಗಬಹುದು. ಎರಡೂ ಸ್ಥಳಗಳು ತುಂಬಾ ಸುಂದರವಾಗಿವೆ. ಹೆಚ್ಚಿಗೆ ಜನಸಂದಣಿ ಇರುವುದಿಲ್ಲ, ಪ್ರೈವಸಿ ಬಯಸಿದ್ದರೆ ತಪ್ಪದೇ ಈ ಸ್ಥಳಗಳಿಗೆ ಭೇಟಿ ನೀಡಬಹುದು. ಏನಾದರು ಹೊಸದನ್ನು ನೋಡಬೇಕು ಅಂತ ಬಯಸಿದರೆ, ಸ್ಪಿತಿ ಕಣಿವೆಗೆ ಭೇಟಿ ನೀಡಬಹುದು.  

5 /9

ಅಂಡಮಾನ್: ಅಂಡಮಾನ್ ಹನಿಮೂನ್‌ ಟಾಪ್ ಲಿಸ್ಟ್‌ನಲ್ಲಿರುತ್ತದೆ. ಇಲ್ಲಿ ಅತ್ಯಂತ ರೋಮ್ಯಾಂಟಿಕ್ ಮತ್ತು ಸುಂದರವಾದ ಬೀಚ್ ತಾಣಗಳಿವೆ. ಏಷ್ಯಾದ ಅತ್ಯುತ್ತಮ ಕಡಲತೀರಗಳಲ್ಲಿ ಅಂಡಮಾನ್ ನೀವು ನೋಡಬಹುದು. ಕ್ಯಾಂಡಲ್ ಲೈಟ್ ಡಿನ್ನರ್‌, ಸನ್‌ ಸೆಟ್‌, ಸೇರಿದಂತೆ ಸಂಗಾತಿಯೊಂದಿಗೆ ಆನಂದಿಸಬಹುದಾದ ಇಂತಹ ಅನೇಕ ವಿಷಯಗಳಿವೆ.  

6 /9

ಗೋವಾ: ಸುಂದರವಾದ ಕಡಲತೀರಗಳು, ಅದ್ಭುತವಾದ ಹವಾಮಾನ, ಅಮಲೇರಿದ ಗೋಡಂಬಿ ಫ್ಯಾನಿ ಮತ್ತು ನೈಟ್‌ ಪಾರ್ಟಿಗೆ ಗೋವಾ ಹೆಸರುವಾಸಿ. ಗೋವಾವು ಅನೇಕ ಸುಂದರ ಮತ್ತು ಬೆರಗುಗೊಳಿಸುವ ಕಡಲತೀರಗಳನ್ನು ಹೊಂದಿದೆ.  

7 /9

ವಯನಾಡ್: ಹನಿಮೂನ್ ಪ್ಲಾನ್‌ನಲ್ಲಿ ವಯನಾಡ್‌ ಅನ್ನು ಸೇರಿಸಿಕೊಳ್ಳುವುದು ಉತ್ತಮ. ಇದು ಕೇರಳ ರಾಜ್ಯದಲ್ಲಿದೆ. ಕೇರಳ ತನ್ನ ನೈಸರ್ಗಿಕ ಸೌಂದರ್ಯದಿಂದ ವಿಶ್ವಾದ್ಯಂತ ಪ್ರಸಿದ್ಧವಾಗಿದೆ. ಇದನ್ನು ಹನಿಮೂನ್, ಬೇಬಿಮೂನ್, ಪ್ರಿವೆಡ್ಡಿಂಗ್ ಡೆಸ್ಟಿನೇಶನ್ ಎಂದೂ ಕರೆಯುತ್ತಾರೆ. ಇದಕ್ಕಾಗಿ ನೀವು ವಯನಾಡ್ ಅನ್ನು ಆಯ್ಕೆ ಮಾಡಬಹುದು.   

8 /9

ಡಾರ್ಜಿಲಿಂಗ್: ಡಾರ್ಜಿಲಿಂಗ್ ಅನ್ನು ಹೀಲ್ಸ್ ರಾಣಿ ಎಂದು ಕರೆಯಲಾಗುತ್ತದೆ. ಈ ಗಿರಿಧಾಮದ ವಿಶೇಷವೆಂದರೆ ದೂರದೂರಕ್ಕೆ ಚಹಾ ತೋಟಗಳಿವೆ. ಡಾರ್ಜಿಲಿಂಗ್ ಸಾಂಬಾರ ಪದಾರ್ಥಗಳಿಗೂ ಹೆಸರುವಾಸಿಯಾಗಿದೆ. ಇಲ್ಲಿ ನೀವು ಸುಂದರವಾದ ಪರ್ವತಗಳು, ಜಲಪಾತಗಳು ಇತ್ಯಾದಿಗಳನ್ನು ಕಾಣಬಹುದು.  

9 /9

ಹಂಪಿ: ಹಂಪಿ ಪ್ರವಾಸಿ ಆಕರ್ಷಣೆಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಭೇಟಿ ನೀಡುತ್ತಾರೆ. ನಿಮ್ಮ ಸಂಗಾತಿಯೊಂದಿಗೆ ಹನಿಮೂನ್ ಆಚರಣೆಗೆ ನೀವು ಹಂಪಿಗೆ ಹೋಗಬಹುದು. ವಿಶೇಷವಾಗಿ ಮಾರ್ಚ್ ತಿಂಗಳಲ್ಲಿ ಹಂಪಿಗೆ ನೀವು ಭೇಟಿ ನೀಡಬಹುದು.