ದೀಪಾವಳಿ ಹಬ್ಬದಂದು ಮನೆಯನ್ನು ಹೂವು, ದೀಪಗಳಿಂದ ಅಲಂಕರಿಸಿ ಸುಂದರವಾಗಿ ಕಾಣುವಂತೆ ಮಾಡಲಾಗುತ್ತದೆ. ಹಾಗೆಯೇ ಆ ಅಲಂಕಾರಕ್ಕೆ ಮತ್ತಷ್ಟು ಮೆರಗು ನೀಡುವುದು ಬಣ್ಣಬಣ್ಣದ ರಂಗೋಲಿ. ಇದುವರೆಗೂ ಒಂದೇ ರೀತಿಯ ರಂಗೋಲಿ ಬಿಡಿಸಿ ಬೇಜಾರಾಗಿದ್ದರೆ, ಇಲ್ಲಿವೆ ಕೆಲವು ಸುಂದರವಾದ ಡಿಸೈನ್ಸ್...
ದೀಪಾವಳಿ ಕೆಲವರಿಗೆ ಪಂಚ ದಿನಗಳ ಹಬ್ಬ. ಕೆಲವರಿಗೆ ನಾಲ್ಕಾದರೆ, ಉಳಿದವರಿಗೆ ಮೂರು ದಿನದ ವೈಭವ. ಧನ ತ್ರಯೋದಶಿಯಿಂದ ಆರಂಭಿಸಿ ಅಮಾವಾಸ್ಯೆ ದಾಟಿ ಬಿದಿಗೆವರೆಗೂ ಸಡಗರ ವಿಸ್ತರಿಸುತ್ತದೆ. ಹಳೆ ನೆನಪು, ನೋವುಗಳ ಕೊಳೆಯೂ ಗುಡಿಸಿ, ಹೊಸ ಬಣ್ಣ, ಹೊಸ ಬೆಳಕು, ಹೊಸ ಬಟ್ಟೆಗಳ ಮಿರಿಮಿರಿ ಮಿಂಚು ಹಿತವಾಗುತ್ತದೆ. ಮನೆಯನ್ನೂ ಕೂಡ ಹೂವು, ದೀಪ, ರಂಗೋಲಿಯಿಂದ ಅಲಂಕರಿಸಿ ಸಂಭ್ರಮದಿಂದ ದೀಪಾವಳಿ ಆಚರಿಸಲಾಗುತ್ತದೆ. ಹೀಗೆ ಮನೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಸುಂದರವಾದ ರಂಗೋಲಿ ಡಿಸೈನ್ಗಳು ಇಲ್ಲಿವೆ...