Indore Horror: ಮಧ್ಯಪ್ರದೇಶದ ಇಂದೋರ್ನಲ್ಲಿ ವೇಗವಾಗಿ ಬಂದ ಕಾರೊಂದು ಇಬ್ಬರು ಹುಡುಗಿಯರ ಮೇಲೆ ಹರಿದಿದೆ. ಹುಡುಗಿಯರು ಮನೆಯ ಹೊರಗೆ ರಂಗೋಲಿ ಹಾಕುತ್ತಿದ್ದರು. ಆರೋಪಿ ಚಾಲಕನ ವಯಸ್ಸು 17 ವರ್ಷ ಎನ್ನಲಾಗಿದೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆದರೆ ಇಬ್ಬರು ಬಾಲಕಿಯರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಚಂದ್ರಯಾನ 3 ಯಶಸ್ವಿಯಾಗಲಿ ಎಂದು ರಾಜ್ಯದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದ್ದು, ಚರ್ಚ್ ಹಾಗೂ ಮಸೀದಿಗಳಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಿದರೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಲಾವಿದರೊಬ್ಬರು ರಂಗೋಲಿ ಚಂದ್ರಯಾನ -3 ಅನ್ನು ಚಿತ್ರಿಸಿದ್ದಾರೆ.
Diwali 2021: ದೀಪಾವಳಿಯ 5 ದಿನಗಳಲ್ಲಿ (ದೀಪಾವಳಿ 2021), ಮನೆಯ ಮುಖ್ಯ ದ್ವಾರದಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಅಂತಹ ಮನೆಗೆ ಲಕ್ಷ್ಮೀ ದೇವಿ ಪ್ರವೇಶಿಸುತ್ತಾಳೆ. ವರ್ಷವಿಡೀ ಆ ಮನೆಯಲ್ಲಿ ನೆಲೆಸುತ್ತಾಳೆ. ಮನೆಯ ಜನರಿಗೆ ಸಾಕಷ್ಟು ಪ್ರಗತಿ ಮತ್ತು ಹಣ ಸಿಗುತ್ತದೆ ಎಂದು ಹೇಳಲಾಗುತ್ತದೆ.
ನಿಮ್ಮ ಮನೆ ಪೂರ್ವಮುಖಿಯಾಗಿದ್ದರೆ ನೀವು ಅಂಡಾಕಾರದ ವಿನ್ಯಾಸದಲ್ಲಿ ರಂಗೋಲಿಯನ್ನು ಬಿಡಿಸಬೇಕು. ಏಕೆಂದರೆ ಮನೆಯಲ್ಲಿ ಸೌಹಾರ್ದಯುತ ವಾತಾವರಣದ ಜೊತೆಗೆ ಗೌರವವೂ ಹೆಚ್ಚಾಗುತ್ತದೆ. ಈ ದಿಕ್ಕಿನಲ್ಲಿ ರಂಗೋಲಿ ಮಾಡಲು ಕೆಂಪು, ಹಳದಿ, ಹಸಿರು, ಗುಲಾಬಿ, ಕಿತ್ತಳೆ ಬಣ್ಣಗಳ ಬಳಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ದೀಪಾವಳಿ ಹಬ್ಬದಂದು ಮನೆಯನ್ನು ಹೂವು, ದೀಪಗಳಿಂದ ಅಲಂಕರಿಸಿ ಸುಂದರವಾಗಿ ಕಾಣುವಂತೆ ಮಾಡಲಾಗುತ್ತದೆ. ಹಾಗೆಯೇ ಆ ಅಲಂಕಾರಕ್ಕೆ ಮತ್ತಷ್ಟು ಮೆರಗು ನೀಡುವುದು ಬಣ್ಣಬಣ್ಣದ ರಂಗೋಲಿ. ಇದುವರೆಗೂ ಒಂದೇ ರೀತಿಯ ರಂಗೋಲಿ ಬಿಡಿಸಿ ಬೇಜಾರಾಗಿದ್ದರೆ, ಇಲ್ಲಿವೆ ಕೆಲವು ಸುಂದರವಾದ ಡಿಸೈನ್ಸ್...
ಕರ್ನಾಟಕದಲ್ಲಿ ನಾವು ಯುಗಾದಿ ಹಬ್ಬವನ್ನು ಆಚರಿಸುವಂತೆ, ಚೈತ್ರ ಮಾಸದ ಮೊದಲ ದಿನ ಹಿಂದೂ ಚಂದ್ರನ ಕ್ಯಾಲೆಂಡರ್ನಲ್ಲಿ ಮಹಾರಾಷ್ಟ್ರದ ಜನರು ತಮ್ಮ ಹೊಸ ವರ್ಷವನ್ನು ಆಚರಿಸುತ್ತಾರೆ. ಈ ದಿನವನ್ನು ಗುಡಿ ಪಾಡ್ವಾ ಎಂದು ಕರೆಯಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.