Dhana Trayodashi 2024: ಧನತ್ರಯೋದಶಿ ದಿನಂದು ಖರೀದಿಸಿದ ವಸ್ತುಗಳು ಮೌಲ್ಯವು ಹದಿಮೂರು ಪಟ್ಟು ಹೆಚ್ಚಾಗುತ್ತದೆ. ಅಂದು ಖರೀದಿಸಿದ ವಸ್ತುಗಳಿಂದ ನಿಮ್ಮ ಜೀವನದಲ್ಲಿ ಸುಖ-ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
Dhantrayodashi 2024: ಪ್ರತಿವರ್ಷವೂ ಆಶ್ವಯುಜ ಮಾಸದ ತ್ರಯೋದಶಿಯಂದು ಧನತ್ರಯೋದಶಿ ಹಬ್ಬವನ್ನು ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ ಈ ವರ್ಷ ಧನತ್ರಯೋದಶಿಯನ್ನು ಅಕ್ಟೋಬರ್ 29ರ ಮಂಗಳವಾರ ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಧನತ್ರಯೋದಶಿಯಂದು ಚಿನ್ನ, ಬೆಳ್ಳಿ, ಹಿತ್ತಾಳೆ-ತಾಮ್ರದ ಪಾತ್ರೆಗಳ ಜೊತೆಗೆ ಕೆಲವು ವಸ್ತುಗಳನ್ನು ಖರೀದಿಸುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಧನತ್ರಯೋದಶಿ ದಿನಂದು ಖರೀದಿಸಿದ ವಸ್ತುಗಳು ಮೌಲ್ಯವು ಹದಿಮೂರು ಪಟ್ಟು ಹೆಚ್ಚಾಗುತ್ತದೆ. ಅಂದು ಖರೀದಿಸಿದ ವಸ್ತುಗಳಿಂದ ನಿಮ್ಮ ಜೀವನದಲ್ಲಿ ಸುಖ-ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಆದರೆ ಈ ನಿರ್ದಿಷ್ಟ ಸಂದರ್ಭದಲ್ಲಿ ಕೆಲವು ವಸ್ತುಗಳನ್ನು ಖರೀದಿಸುವುದು ಶುಭವಲ್ಲ. ಧನತ್ರಯೋದಶಿಯಂದು ಕೆಲವು ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ದುರಾದೃಷ್ಟವು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಹಾಗಾದ್ರೆ ಧನ ತ್ರಯೋದಶಿಯಂದು ಯಾವ ವಸ್ತುಗಳನ್ನು ಖರೀದಿಸಬಾರದು ಎಂದು ತಿಳಿಯಿರಿ.
ಕಬ್ಬಿಣವು ಶನಿಯೊಂದಿಗೆ ಸಂಬಂಧಿಸಿದೆ. ಮಂಗಳಕರ ದಿನವೆಂದು ಪರಿಗಣಿಸಲಾದ ಧನತ್ರಯೋದಶಿಯ ದಿನ ಕಬ್ಬಿಣವನ್ನು ಖರೀದಿಸಬಾರದು. ಈ ದಿನ ಪಾತ್ರೆಗಳನ್ನು ಖರೀದಿಸುವಾಗ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಖರೀದಿಸಬಾರದು. ಸ್ಟೀಲ್ ಅಥವಾ ಅಲ್ಯೂಮಿನಿಯಂ ಪಾತ್ರೆಗಳನ್ನು ಖರೀದಿಸಬೇಡಿ. ಇವುಗಳ ಬದಲಿಗೆ ಮಣ್ಣಿನ ಪಾತ್ರೆಗಳನ್ನು ಖರೀದಿಸಿ ಮನೆಗೆ ತರುವುದು ಶುಭಕರ.
ಕಪ್ಪು ಬಣ್ಣ ಮಂಗಳಕರವಲ್ಲ. ಹೀಗಾಗಿ ಧನತ್ರಯೋದಶಿಯ ಶುಭ ದಿನದಂದು ಕಪ್ಪು ಬಣ್ಣದ ಚೀಲಗಳು, ಬಟ್ಟೆಗಳು, ಶೂಗಳು, ಕಪ್ಪು ಕಂಬಳಿ ಮುಂತಾದವುಗಳನ್ನು ಖರೀದಿಸುವುದು ಶುಭವಲ್ಲ. ಇದಲ್ಲದೆ ಚರ್ಮ ಮತ್ತು ಪ್ರಾಣಿಗಳ ಚರ್ಮದ ಉತ್ಪನ್ನಗಳನ್ನು ಖರೀದಿಸಬಾರದು.
ಅನೇಕ ಜನರು ತಮ್ಮ ಮನೆ ಅಲಂಕರಿಸಲು ಗಾಜಿನ ವಸ್ತುಗಳನ್ನು ಬಳಸುತ್ತಾರೆ. ಧನ ತ್ರಯೋದಶಿಯಂದು ಗಾಜಿನ ವಸ್ತುಗಳನ್ನು ಖರೀದಿಸಬಾರದು. ಈ ದಿನ ಗಾಜಿನ ಪಾತ್ರೆಗಳು ಅಥವಾ ಗಾಜಿನ ಆಭರಣಗಳನ್ನು ಖರೀದಿಸಬಾರದು. ಇವು ನಕಾರಾತ್ಮಕ ಶಕ್ತಿಯನ್ನು ಮನೆಗೆ ತರುತ್ತವೆ. ಹೀಗಾಗಿಯೇ ಇವುಗಳನ್ನು ದೂರ ಇಡಬೇಕು. ಈ ವಸ್ತುಗಳನ್ನು ಧನತ್ರಯೋದಶಿ ಹೊರತುಪಡಿಸಿ ಇತರ ದಿನಗಳಲ್ಲಿ ಖರೀದಿಸಬಹುದು.
ಧನತ್ರಯೋದಶಿಯಂದು ಚಾಕು, ಕತ್ತರಿ, ಸೂಜಿ, ಕತ್ತರಿ ಮುಂತಾದ ಹರಿತವಾದ ವಸ್ತುಗಳನ್ನು ಖರೀದಿಸಬಾರದು. ಇವು ಹಾನಿಕಾರಕ ಸಂಕೇತಗಳೆಂದು ಪರಿಗಣಿಸಲಾಗಿದೆ. ಹೀಗಾಗಿ ಧನತ್ರಯೋದಶಿ ದಿನ ಇವುಗಳನ್ನು ಮನೆಗೆ ಯಾವುದೇ ಕಾರಣಕ್ಕೂ ತರಬೇಡಿ.
ಇತ್ತೀಚಿನ ದಿನಗಳಲ್ಲಿ ಜನರು ಚಿನ್ನಾಭರಣಗಳಿಗಿಂತ ಕೃತಕ ಆಭರಣ ಧರಿಸಲು ಹೆಚ್ಚು ಆಸಕ್ತಿ ವಹಿಸುತ್ತಾರೆ. ಕಡಿಮೆ ಬೆಲೆಯಲ್ಲಿ ವಿವಿಧ ಮಾದರಿಗಳ ಆಭರಣ ಸಿಗುತ್ತವೆ ಎಂದು ಖರೀದಿಸುತ್ತಾರೆ. ಆದ್ದರಿಂದ ಇವುಗಳನ್ನು ಹೆಚ್ಚು ಖರೀದಿಸಲಾಗುತ್ತದೆ. ಧನತ್ರಯೋದಶಿಯಂದು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಖರೀದಿಸುವುದು ಶುಭ. ಆದರೆ ಈ ದಿನ ಕೃತಕ ಆಭರಣಗಳನ್ನು ಯಾವುದೇ ಕಾರಣಕ್ಕೂ ಖರೀದಿಸಬಾರದು.
ಧನತ್ರಯೋದಶಿಯಂದು ಪ್ಲಾಸ್ಟಿಕ್ ವಸ್ತುಗಳನ್ನು ಖರೀದಿಸುವುದು ಶುಭವಲ್ಲ. ಇದು ನಕಾರಾತ್ಮಕ ಶಕ್ತಿಯನ್ನು ತರುತ್ತದೆ. ಹೀಗಾಗಿ ಇವುಗಳನ್ನು ಯಾವುದೇ ಕಾರಣಕ್ಕೂ ಖರೀದಿಸಬೇಡಿ.