Diabetic Tips: ಅಡುಗೆ ಮನೆಯನ್ನು ವೈದ್ಯಕೀಯ ಚಿಕಿತ್ಸಾಲಯ ಎಂದು ಹಿರಿಯರು ಸುಮ್ಮನೆ ಹೇಳಿಲ್ಲ. ನಮ್ಮ ಅಡುಗೆಮನೆಯಲ್ಲಿ ಲಭ್ಯವಿರುವ ವಸ್ತುಗಳಿಂದ ನಾವು ಅನೇಕ ರೋಗಗಳನ್ನು ಕಡಿಮೆ ಮಾಡಬಹುದು. ಅದೇ ರೀತಿ, ನಮಗೆ ಸುಲಭವಾಗಿ ಲಭ್ಯವಿರುವ ಜೀರಿಗೆಯಿಂದಲೂ ಮಧುಮೇಹವನ್ನು ನಿಯಂತ್ರಿಸಬಹುದು. ಮಧುಮೇಹವನ್ನು ನಿಯಂತ್ರಿಸದಿದ್ದರೆ ಜೀವಕ್ಕೆ ಅಪಾಯಕಾರಿ.
Diabetic Tips: ಅಡುಗೆ ಮನೆಯನ್ನು ವೈದ್ಯಕೀಯ ಚಿಕಿತ್ಸಾಲಯ ಎಂದು ಹಿರಿಯರು ಸುಮ್ಮನೆ ಹೇಳಿಲ್ಲ. ನಮ್ಮ ಅಡುಗೆಮನೆಯಲ್ಲಿ ಲಭ್ಯವಿರುವ ವಸ್ತುಗಳಿಂದ ನಾವು ಅನೇಕ ರೋಗಗಳನ್ನು ಕಡಿಮೆ ಮಾಡಬಹುದು. ಅದೇ ರೀತಿ, ನಮಗೆ ಸುಲಭವಾಗಿ ಲಭ್ಯವಿರುವ ಜೀರಿಗೆಯಿಂದಲೂ ಮಧುಮೇಹವನ್ನು ನಿಯಂತ್ರಿಸಬಹುದು. ಮಧುಮೇಹವನ್ನು ನಿಯಂತ್ರಿಸದಿದ್ದರೆ ಜೀವಕ್ಕೆ ಅಪಾಯಕಾರಿ.
ಮಧುಮೇಹ ಬಂದರೆ ಜೀವನಪರ್ಯಂತ ಬಳಲಬೇಕಾಗುತ್ತದೆ. ಒಮ್ಮೆ ಬಂದರೆ, ಅದು ಎಂದಿಗೂ ಹೋಗುವುದಿಲ್ಲ. ಜೀವನಪರ್ಯಂತ ಮಾತ್ರೆಗಳನ್ನು ಮುಂದುವರಿಸಬೇಕು. ಅದೇ ರೀತಿ, ಆಹಾರವನ್ನು ಸಹ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.
ಬದಲಾದ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ಮಧುಮೇಹ ವಕ್ಕರಿಸುತ್ತಿದೆ. ನಮ್ಮ ಮನೆಯಲ್ಲಿ ಸುಲಭವಾಗಿ ಸಿಗುವ ವಸ್ತುಗಳಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಮಧುಮೇಹವನ್ನು ನಿಯಂತ್ರಿಸುವ ವಸ್ತುಗಳಲ್ಲಿ ಜೀರಿಗೆ ಕೂಡ ಒಂದು.
ಸಾಮಾನ್ಯವಾಗಿ ಎಲ್ಲರಿಗೂ ಮಜ್ಜಿಗೆ ಕುಡಿಯುವ ಅಭ್ಯಾಸ ಇರುತ್ತದೆ. ಮಜ್ಜಿಗೆ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದ್ದೋ, ಜೀರಿಗೆ ಕೂಡ ನಮ್ಮ ಆರೋಗ್ಯಕ್ಕೆ ಬೇಕಾದ ಹಲವಾರು ಪ್ರಯೋಜನೆಗಳನ್ನು ಒಳಗೊಂಡಿದೆ.
ಜೀರಿಗೆ ನಮ್ಮ ಹಲವಾರು ರೋಗಗಳನ್ನು ಗುನ ಪಡಿಸುವ ಸಾಮಾರ್ಥ್ಯವ್ನನು ಹೊಂದಿದ್ದು, ಹಲವಾರು ರೋಗಗಳ ವಿರುದ್ಧ ಹೋರಾಡಿ ನಮ್ಮನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.
ಜೀರಿಗೆ ಹೆಚ್ಚಿನ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತವೆ. ಇದರಲ್ಲಿರುವ ಅಂಶಗಳು ಮಧುಮೇಹವನ್ನು ನಿಯಂತ್ರನದಲ್ಲಿಡಲು ಸಹಾಯ ಮಾಡುತ್ತದೆ.
ಜೀರಿಗೆಯನ್ನು ಹಾಗೆಯೇ ತಿನ್ನದೆ ಅದನ್ನು ಮಜ್ಜಿಗೆಯಲ್ಲಿ ಬೆರಸಿ ಕುಡಿಯುವುದರಿಂದ ನಮ್ಮ ಮಧುಮೇಹವನ್ನು ನಿಯಂತ್ರಣದಲ್ಲಿಡುವಲ್ಲಿ ಇದು ಸಹಾಯ ಮಾಡುತ್ತದೆ.
ಕೆಲರಿಗೆ ಔಷಧಿ ತೆಗೆದುಕೊಂಡ ನಂತರವೂ ಕೂಡ ಮಧುಮೇಹ ನಿಯಂತ್ರಣಕ್ಕೆ ಬರುವುದಿಲ್ಲ. ಆದರೆ, ನೀವು ಮಜ್ಜಿಗೆಯನ್ನು ಈ ರೀತಿ ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರನದಲ್ಲಿಡಬಹುದು.
ಮಧುಮೇಹಿಗಳು ಮಜ್ಜಿಗೆಯನ್ನು ಕುಡಿಯುವುದು ಉತ್ತಮ, ಅದರಲ್ಲೂ ಮಜ್ಜಿಗೆಯಲ್ಲಿ ಜೀರಿಗೆ ಬೆರಸಿ ಕುಡಿಯುವುದರಿಂದ ನೀವು ಮಧುಮೇಹವನ್ನು ನಿಯಂತ್ರಣದಲ್ಲಿಟ್ಟು, ಶುಗರ್ ಹೆಚ್ಚಾಗದಂತೆ ತಡೆಯಬಹುದು.
ಮಜ್ಜೆಗೆಯಲ್ಲಿ ಜೀರಿಗೆ ಪುಡಿ ಅಥವಾ ಜೀರಿಗೆ ಕಾಳಯ ಬೆರಸಿ ಕುಡಿಯುವುದರಿಂದ ನೀವು ಮಧುಮೇಹವನ್ನು ನಿಯಂತ್ರಣದಲ್ಲಿಡಬಹದು.
ಈ ರೀತಿ ಮಜ್ಜಿಗೆಯಲ್ಲಿ ಜೀರಿಗೆ ಕಾಳನ್ನು ಬೆರಸಿ ಕುಡಿಯುವುದರಿಂದ ನೀವು ಬೊಜ್ಜು, ಜೀರ್ಣಕಾರಿ ಸಮಸ್ಯೆಯನ್ನು ಸಹ ನಿವಾರಿಸಬಹುದು.
ಜೀರಿಗೆಯನ್ನು ಮಜ್ಜಿಗೆಯಲ್ಲಿ ನೆನೆಸಿ ಒಂಎರೆಡು ಗಂಟೆ ನೆನೆಸಿ ಕುಡಿಯುವುದರಿಂದ ನಿಮ್ಮ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ನೆನೆಸಿಡಲು ಆಗದೇ ಇದ್ದರೆ, ನೀವು ಮಜ್ಜೆಗೆಗೆ ಸ್ವಲ್ಪ ಜೀರಿಗೆ ಪುಡಿಯನ್ನು ಬೆರಸಿ ಕುಡಿಯಬಹುದು.
ಮಧುಮೇಹವನ್ನು ಸಾಮಾನ್ಯ ಎಂದು ಪರಿಗಣಿಸದೆ, ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಇದು ಕಿಡ್ನಿ ವೈಫಲ್ಯ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ದಾರಿ ಮಾಡಿ ಕೊಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ಇದನ್ನು ZEE KANNADA NEWS ಖಚಿತ ಪಡಿಸುವುದಿಲ್ಲ.