Garuda Purana: ಈ 5 ಕೆಲಸ ಮಾಡಿದ್ರೆ ಆಯಸ್ಸು ಕಮ್ಮಿಯಾಗುತ್ತದೆ, ಗರುಡ ಪುರಾಣ ಈ ಕುರಿತು ಹೇಳುವುದೇನು?

Garuda Purana Lessons - ಗರುಡ ಪುರಾಣದಲ್ಲಿ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳ ಕುರಿತು ಉಲ್ಲೇಖಿಸಲಾಗಿದೆ. ಅವುಗಳನ್ನು ಅನುಸರಿಸಿದರೆ ಇಡೀ ಜೀವನವೇ ಸುಖಮಯವಾಗುತ್ತದೆ. 

Garuda Purana Lessons - ಗರುಡ ಪುರಾಣದಲ್ಲಿ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳ ಕುರಿತು ಉಲ್ಲೇಖಿಸಲಾಗಿದೆ. ಅವುಗಳನ್ನು ಅನುಸರಿಸಿದರೆ ಇಡೀ ಜೀವನವೇ ಸುಖಮಯವಾಗುತ್ತದೆ. ಇದಲ್ಲದೇ ಕೆಲವು ಕೆಲಸಗಳನ್ನು ಗರುಡ ಪುರಾಣದಲ್ಲಿ (Garuda Purana Teachings) ಉಲ್ಲೇಖಿಸಲಾಗಿದ್ದು, ಅವುಗಳನ್ನು ಮಾಡಬಾರದು ಎಂದು ಹೇಳಲಾಗಿದೆ. ವಾಸ್ತವದಲ್ಲಿ ಈ ಕೆಲಸಗಳು ವ್ಯಕ್ತಿಯ ವಯಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ಹೇಳಲಾಗಿದೆ. ಗರುಡ ಪುರಾಣದ (Garuda Purana In Kannada) ಪ್ರಕಾರ, ಯಾವ 5 ಕೆಲಸಗಳನ್ನು ಮಾಡಬಾರದು ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Weekly Horoscope: ಬಡ್ತಿ ಸಿಗಲಿದೆಯಾ ಅಥವಾ ಕೆಲಸ ಬಿಗಡಾಯಿಸಲಿದೆಯಾ? ಇಲ್ಲಿದೆ ವಾರದ ರಾಶಿಫಲ

 

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ತಡವಾಗಿ ಏಳುವುದರಿಂದ ಆಯಸ್ಸು ಕಮ್ಮಿಯಾಗುತ್ತದೆ - ಗರುಡ ಪುರಾಣದ ಪ್ರಕಾರ ಬೆಳಗ್ಗೆ ತಡವಾಗಿ ಏಳುವುದರಿಂದ ಆಯಸ್ಸು ಕಡಿಮೆಯಾಗುತ್ತದೆ. ಗರುಡ ಪುರಾಣದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ಬ್ರಹ್ಮ ಮುಹೂರ್ತದಲ್ಲಿ ಏಳಬೇಕು. ವಾಸ್ತವದಲ್ಲಿ ಬೆಳಗ್ಗೆ  ಗಾಳಿಯು ಶುದ್ಧವಾಗಿರುತ್ತದೆ. ಅದು ಹಲವು ರೋಗಗಳನ್ನು ಗುಣಪಡಿಸುತ್ತದೆ. ತಡವಾಗಿ ಎದ್ದ ನಂತರ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಲು ಪ್ರಾರಂಭಿಸುತ್ತದೆ.

2 /5

2, ರಾತ್ರಿ ಹೊತ್ತು ಮೊಸರನ್ನು ಸೇವಿಸಬಾರದು - ಗರುಡ ಪುರಾಣದ ಪ್ರಕಾರ ರಾತ್ರಿ ವೇಳೆ ಮೊಸರನ್ನು ಸೇವಿಸಬಾರದು. ಮೊಸರು ತಂಪು ಗುಣಧರ್ಮ ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ರಾತ್ರಿಯಲ್ಲಿ ಇದನ್ನು ಸೇವಿಸುವುದರಿಂದ ಹಲವಾರು ರೋಗಗಳು ಬರುವ ಸಾಧ್ಯತೆ ಇರುತ್ತದೆ. ಇದು ವಯಸ್ಸಿನ ಮೇಲೂ ಕೂಡ ಪರಿಣಾಮ ಬೀರುತ್ತದೆ.

3 /5

3. ಸ್ಮಶಾನದ ಹೊಗೆಯಿಂದ ದೂರವಿರಿ - ಶವಸಂಸ್ಕಾರದ ಸಮಯದಲ್ಲಿ, ಸತ್ತವರ ದೇಹದಿಂದ ಅನೇಕ ರೀತಿಯ ಹಾನಿಕಾರಕ ವಸ್ತುಗಳು ಹೊರಬರುತ್ತವೆ. ಸತ್ತ ವ್ಯಕ್ತಿಯ ದೇಹವನ್ನು ಸುಟ್ಟಾಗ, ಕೆಲವು ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳು ಮೃತದೇಹದೊಂದಿಗೆ ನಾಶವಾಗುತ್ತವೆ ಮತ್ತು ಕೆಲವು ಹೊಗೆಯೊಂದಿಗೆ ವಾತಾವರಣದಲ್ಲಿ ಹರಡುತ್ತವೆ. ಒಬ್ಬ ವ್ಯಕ್ತಿಯು ಆ ಹೊಗೆಯ ಸಂಪರ್ಕಕ್ಕೆ ಬಂದಾಗ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಅವನ ದೇಹಕ್ಕೆ ಅಂಟಿಕೊಳ್ಳುತ್ತವೆ ಮತ್ತು ಅನೇಕ ರೀತಿಯ ರೋಗಗಳನ್ನು ಹರಡುತ್ತವೆ. ಆ ಕಾಯಿಲೆಗಳಿಂದಾಗಿ ವ್ಯಕ್ತಿಯ ವಯಸ್ಸು ಕಡಿಮೆಯಾಗಬಹುದು.

4 /5

4. ಬೆಳಗ್ಗೆ  ಶಾರೀರಿಕ ಸಂಬಂಧ ಬೆಳೆಸಬಾರರು - ಗರುಡ ಪುರಾಣದ ಪ್ರಕಾರ, ಬೆಳಗ್ಗೆ ದೈಹಿಕ ಸಂಬಂಧ ಬೆಸೆಯಬಾರದು. ಅದರಲ್ಲೂ ಬ್ರಹ್ಮ ಮುಹೂರ್ತದಲ್ಲಿ ಶಾರೀರಿಕ ಸಂಬಂಧ ಬೆಳೆಸುವುದರಿಂದ ಆಯಸ್ಸು ಕಡಿಮೆಯಾಗುತ್ತದೆ.

5 /5

5. ಒಣ ಮತ್ತು ಹಳಸಿದ ಮಾಂಸ ಸೇವಿಸಬಾರದು - ಒಣ ಮತ್ತು ಹಳಸಿದ ಮಾಂಸವು ಯಾವುದೇ ಮನುಷ್ಯನಿಗೆ ಹಾನಿಕಾರಕವಾಗಿದೆ. ಒಣ ಮತ್ತು ಹಳಸಿದ ಮಾಂಸವನ್ನು ತಿನ್ನುವುದರಿಂದ ಕ್ಯಾನ್ಸರ್ ನಂತಹ ಕಾಯಿಲೆಗಳು ಬರುತ್ತವೆ. ಹಳಸಿದ ಮಾಂಸದಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳು ಹೊಟ್ಟೆ ಸೇರುತ್ತವೆ ಮತ್ತು ಅವು ಅನೇಕ ರೀತಿಯ ಕಾಯಿಲೆಗಳಿಗೆ ಕಾರಣವಾಗಬಹುದು.