ಸಾವಿರಾರು ವರ್ಷಗಳ ಹಿಂದೆ ಬರೆದ ವೇದಗಳು ಮತ್ತು ಪುರಾಣಗಳು ವಿಶ್ವದ ಕೋಟ್ಯಂತರ ಜನರಿಗೆ ಅಂತಹ ಅಮೂಲ್ಯವಾದ ನಿಧಿಯಾಗಿದೆ. ಜನರು ಅದನ್ನು ಸರಿಯಾಗಿ ಅನುಸರಿಸಿದರೆ, ಜೀವನದಲ್ಲಿ ಆರೋಗ್ಯ ಮತ್ತು ಸಮೃದ್ಧಿಯ ಯಾವುದೇ ಸಮಸ್ಯೆ ಇರುವುದಿಲ್ಲ.
ನವದೆಹಲಿ : ಉತ್ತಮ ಜೀವನ ನಡೆಸಲು ಭಾರತೀಯ ಧರ್ಮಗ್ರಂಥಗಳಲ್ಲಿ ಅನೇಕ ನಿಯಮಗಳನ್ನು ತಿಳಿಸಲಾಗಿದೆ. ಇವುಗಳಲ್ಲಿ, ಪುರುಷರು ಮತ್ತು ಮಹಿಳೆಯರ 'ಸಂಬಂಧ', ಆಹಾರ ಮತ್ತು ಅಭ್ಯಾಸಗಳಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಹೇಳಲಾಗಿದೆ. ಇವುಗಳನ್ನು ಅನುಸರಿಸದ ಜನರು ಆಗಾಗ್ಗೆ ನಷ್ಟವನ್ನು ಎದುರಿಸಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಶಾಸ್ತ್ರದಲ್ಲಿ ಎಲ್ಲಾ ಕಾರ್ಯಗಳಿಗೂ ಸಮಯವನ್ನು ನಿಗದಿಪಡಿಸಲಾಗಿದೆ. ವೇದ ಪುರಾಣಗಳಲ್ಲಿ ಉಲ್ಲೇಖಿಸಿದಂತೆ, ಸೂರ್ಯಾಸ್ತದ ಸಮಯದಲ್ಲಿ ಕೆಲವೊಂದು ಕೆಲಸವನ್ನು ಮಾಡಲೇ ಬಾರದು. ವ್ಯಕ್ತಿ ಮಾಡುವ ಪ್ರತಿಯೊಂದು ಕೆಲಸವು ಅವನ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಧರ್ಮಗ್ರಂಥಗಳು ಹೇಳುತ್ತವೆ. ಆದ್ದರಿಂದ, ಕೆಲಸದ ಸಮಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಮಹಾಲಕ್ಷ್ಮಿಯನ್ನು ಸಂಜೆಯ ವೇಳೆಗೆ ಪೂಜಿಸಲಾಗುತ್ತದೆ. ಆದ್ದರಿಂದ, ಸಂಜೆ ಅಂದರೆ, ಸೂರ್ಯಾಸ್ತದ ವೇಳೆ ತಪ್ಪಿಯೂ ಸಾಲ ನೀಡಬಾರದು. ಈ ಸಮಯದಲ್ಲಿ ಮನೆಯಿಂದ ಹಣ ಹೊರಗೆ ಹೋದರೆ ಮಹಾಲಕ್ಷ್ಮೀಯೇ ಹೊರ ನಡೆದಂತೆ ಎನ್ನುವುದು ನಂಬಿಕೆ. ಆದರೆ ನೀವು ಯಾರಿಗಾದರೂ ಸಾಲ ನೀಡಿದ್ದರೆ, ಆ ಸಾಲವನ್ನು ಸಂಜೆ ವೇಳೆ ಹಿಂಪಡೆಯಬಹುದು.
ಸೂರ್ಯಾಸ್ತದ ಸಮಯದಲ್ಲಿ ಭೋಜನ ಮಾಡುವುದು ಅಥವಾ ಮಲಗುವುದು ಮಾಡಬಾರದು. ಹೀಗೆ ಮಾಡಿದರೆ ಮುಂದಿನ ಜನ್ಮದಲ್ಲಿ ಪ್ರಾಣಿಯ ಜನ್ಮ ತಾಳಬೇಕಾಗುತ್ತದೆಯಂತೆ. ಒಂದು ವೇಳೆ ಚಿಕ್ಕ ಮಕ್ಕಳಿದ್ದರೆ ಅಥವಾ ಅನಾರೋಗ್ಯದಿಂದ ಬಳಲುತ್ತಿರುವವರಿದ್ದರೆ, ಸಂಜೆ ವೇಳೆ ಮಲಗಬಹುದು.
ಸೂರ್ಯಾಸ್ತವೆಂದರೆ ಹಗಲು ರಾತ್ರಿಯ ನಡುವಿನ ಸಂಧಿಕಾಲವಾಗಿರುತ್ತದೆ. ಇದು ದೇವರ ಧ್ಯಾನ ಮಾಡುವ ಸಮಯ. ಈ ಸಮಯದಲ್ಲಿ 'ಕಾಮ ಭಾವ' ವನ್ನು ನಿಯಂತ್ರಣದಲ್ಲಿಡಬೇಕು. ಪತಿ ಮತ್ತು ಪತ್ನಿ ಸೂರ್ಯಾಸ್ತದ ಸಮಯದಲ್ಲಿ ದೈಹಿಕ ಸಂಬಂಧ ಹೊಂದುವುದನ್ನು ತಪ್ಪಿಸಬೇಕು. ಈ ಸಮಯದ ಸಂಬಂಧದ ಗರ್ಭಧಾರಣೆಯಿಂದ ಹುಟ್ಟಿದ ಮಗು ಸುಸಂಸ್ಕೃತವಾಗುವುದಿಲ್ಲ ಎನ್ನಲಾಗಿದೆ.
ದಿನದ ಕಠಿಣ ಪರಿಶ್ರಮದಿಂದಾಗಿ, ವ್ಯಕ್ತಿಯ ದೇಹ ಮತ್ತು ಮನಸ್ಸು ತುಂಬಾ ದಣಿದಿರುತ್ತದೆ. ಆದ್ದರಿಂದ, ಸೂರ್ಯಾಸ್ತದ ಸಮಯದಲ್ಲಿ ವೇದ ಮತ್ತು ಶಾಸ್ತ್ರಗಳನ್ನು ಅಧ್ಯಯನ ಮಾಡಬಾರದು. ಈ ಸಮಯದಲ್ಲಿ ಧ್ಯಾನದಲ್ಲಿ ಕಳೆಯಬೇಕು. ಇದರಿಂದ ದಿನದ ಒತ್ತಡವು ಕೊನೆಗೊಳ್ಳುತ್ತದೆ ಮತ್ತು ದೇಹ ಹೊಸ ಚೈತನ್ಯ ಪಡೆಯುತ್ತದೆ.