Health & Fitness: ನೀವು ಒಂದೇ ಒಂದು ತಿಂಗಳು ಅನ್ನ ತಿನ್ನದಿದ್ದರೆ ಏನಾಗುತ್ತೆ ಗೊತ್ತಾ?

What happens if you don't eat rice for a month?: ಅನ್ನದಲ್ಲಿ ನಮ್ಮ ಶರೀರಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು, ವಿಟಮಿನ್‌ಗಳು ಮತ್ತು ಖನಿಜಗಳು ಇರುತ್ತವೆ. ನೀವು ಒಂದೇ ಒಂದು ತಿಂಗಳು ಅನ್ನ ತಿನ್ನದಿದ್ದರೆ ಏನಾಗುತ್ತದೆ ಎಂದು ತಿಳಿದಿದೆಯೇ? 

Health & Fitness: ಇಂದು ಅನೇಕರು ದಿನಕ್ಕೆ ಮೂರು ಹೊತ್ತು ಅನ್ನವನ್ನೇ ಸೇವಿಸುತ್ತಾರೆ. ಏಕೆಂದರೆ ಅನ್ನ ತಿಂದರೆ ಮಾತ್ರ ಹೊಟ್ಟೆ ತುಂಬಿದ ಅನುಭವವಾಗುತ್ತದೆ ಮತ್ತು ಶರೀರಕ್ಕೆ ಶಕ್ತಿ ದೊರೆಯುತ್ತದೆ. ಆದರೆ ಕೆಲವರು ಮಾತ್ರ ದಿನಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಅನ್ನ ತಿನ್ನುತ್ತಾರೆ. ತೂಕ ಇಳಿಸಿಕೊಳ್ಳಲು ಬಯಸುವವರು ಹೆಚ್ಚಾಗಿ ಈ ರೀತಿಯ ನಿಯಮವನ್ನ ಪಾಲಿಸುತ್ತಾರೆ. ಇನ್ನು ಕೆಲವರು ಅನ್ನದಿಂದ ಯಾವುದೇ ರೀತಿ ಪ್ರಯೋಜನವಿಲ್ಲವೆಂದು ಬೆಳಗ್ಗೆ ಮತ್ತು ರಾತ್ರಿ ಅನ್ನದ ಬದಲು ಬೇರೆ ಆಹಾರವನ್ನ ಸೇವಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /7

ನಾವು ಸೇವಿಸುವ ಬಿಳಿ ಅನ್ನದಲ್ಲಿ ನಮ್ಮ ಶರೀರಕ್ಕೆ ಉಪಯುಕ್ತವಾದ ಪೋಷಕಾಂಶಗಳು ಹೆಚ್ಚಾಗಿರುವುದಿಲ್ಲ. ಹೆಚ್ಚಾಗಿ ಅನ್ನ ತಿಂದರೆ ನಿಮ್ಮ ತೂಕ ಹೆಚ್ಚಾಗುತ್ತದೆ. ಅನ್ನವು ಮಧುಮೇಹಿಗಳಿಗೆ ಒಳ್ಳೆಯದಲ್ಲ. ಏಕೆಂದರೆ ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಅನ್ನ ತಿಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಆದ್ದರಿಂದ ಮಧುಮೇಹಿಗಳು ಬಿಳಿ ಅನ್ನವನ್ನು ತಿನ್ನಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ. ನೀವು ಒಂದು ತಿಂಗಳು ಅನ್ನ ತಿನ್ನದಿದ್ದರೆ ಏನಾಗುತ್ತದೆ? ದೇಹದಲ್ಲಿ ಯಾವ ರೀತಿಯ ಬದಲಾವಣೆಯಾಗುತ್ತವೆ ಅನ್ನೋದರ ಬಗ್ಗೆ ತಿಳಿಯಿರಿ...  

2 /7

ಅನ್ನದಲ್ಲಿ ಕಾರ್ಬೋಹೈಡ್ರೇಟ್‌ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಹೀಗಾಗಿ ಹೆಚ್ಚು ಅನ್ನ ತಿಂದರೆ ತೂಕ ಹೆಚ್ಚಾಗುತ್ತದೆ. ಅನ್ನ ತಿನ್ನುವುದನ್ನು ನಿಲ್ಲಿಸಿದರೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ತೂಕ ಇಳಿಸಿಕೊಳ್ಳಲು ಬಯಸುವವರು ದಿನಕ್ಕೆ ಒಂದು ಅಥವಾ ಎರಡು ಬಾರಿ ಅನ್ನ ತಿಂದರೆ ತೂಕ ಇಳಿಸಿಕೊಳ್ಳಬಹುದು. ಒಂದು ತಿಂಗಳು ಅನ್ನ ತಿನ್ನದಿದ್ದರೂ ತೂಕ ಇಳಿಕೆಯಾಗುತ್ತದೆ. 

3 /7

ಅನ್ನವು ಮಧುಮೇಹಿಗಳಿಗೆ ಒಳ್ಳೆಯದಲ್ಲ. ಏಕೆಂದರೆ ಅನ್ನ ತಿಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಇದು ಅವರ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಅವರು ಅನ್ನ ತಿನ್ನುವುದನ್ನು ನಿಲ್ಲಿಸಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. 

4 /7

ಅನ್ನದಲ್ಲಿ ನಾರಿನಂಶ ಕಡಿಮೆ ಇರುತ್ತದೆ. ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಅನ್ನ ತಿನ್ನುವುದನ್ನ ನಿಲ್ಲಿಸಿದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದರಿಂದ ಮಲಬದ್ಧತೆ, ಅಜೀರ್ಣ ಮುಂತಾದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ.

5 /7

ಅನ್ನದಲ್ಲಿ ಕಾರ್ಬೋಹೈಡ್ರೇಟ್‌ಗಳು ಹೇರಳವಾಗಿದ್ದು, ಇವು ನಮ್ಮ ಶರೀರಕ್ಕೆ ಪ್ರಮುಖ ಶಕ್ತಿಯ ಮೂಲ. ಅನ್ನ ತಿಂದರೆ ದಿನವಿಡೀ ಚೈತನ್ಯದಿಂದಿರುತ್ತೇವೆ. ಅನ್ನ ತಿನ್ನುವುದನ್ನ ನಿಲ್ಲಿಸಿದರೆ ಶಕ್ತಿಯ ಮಟ್ಟ ಕಡಿಮೆಯಾಗುತ್ತದೆ. ಯಾವಾಗಲೂ ಆಯಾಸ ಮತ್ತು ದೌರ್ಬಲ್ಯದ ಅನುಭವವಾಗುತ್ತದೆ. ಅನ್ನ ತಿನ್ನದಿರುವುದರಿಂದ ಉಂಟಾಗುವ ಪ್ರಮುಖ ಸಮಸ್ಯೆ ಇದು. 

6 /7

ಅನ್ನದಲ್ಲಿ ಪ್ರೋಟೀನ್‌ಗಳು ಕಡಿಮೆ ಇರುತ್ತವೆ. ಆದರೆ ಅನ್ನ ತಿನ್ನುವುದನ್ನ ನಿಲ್ಲಿಸಿದರೆ ಪ್ರೋಟೀನ್ ಕೊರತೆ ಉಂಟಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. 

7 /7

ಅನ್ನದಲ್ಲಿ ನಮ್ಮ ಶರೀರಕ್ಕೆ ಅಗತ್ಯವಾದ ವಿಟಮಿನ್‌ ಮತ್ತು ಖನಿಜಗಳು ಹೆಚ್ಚಾಗಿರುತ್ತವೆ. ಅನ್ನ ತಿನ್ನುವುದನ್ನ ನಿಲ್ಲಿಸಿದ್ರೆ ಶರೀರದಲ್ಲಿ ವಿಟಮಿನ್‌ ಮತ್ತು ಖನಿಜಗಳ ಕೊರತೆ ಉಂಟಾಗುತ್ತದೆ. ಹೀಗಾಗಿ ಅನ್ನ ತಿನ್ನುವುದನ್ನ ನಿಲ್ಲಿಸುವ ಮೊದಲು ವೈದ್ಯರು ಅಥವಾ ಪೌಷ್ಟಿಕತಜ್ಞರನ್ನು ಸಂಪರ್ಕಿಸುವುದು ಉತ್ತಮ. ಅನ್ನ ತಿನ್ನುವುದನ್ನ ನಿಲ್ಲಿಸಿದ್ರೆ ಶರೀರದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ಅವರು ನಿಮಗೆ ತಿಳಿಸುತ್ತಾರೆ.