Smartphones Tricks and Tips: ಸ್ಮಾರ್ಟ್ಫೋನ್ಗಳಲ್ಲಿರುವ ಕೆಲವು ಅಪ್ಲಿಕೇಶನ್ಗಳು ನಮ್ಮ ಸ್ಥಳದ ಬಗ್ಗೆ ಬೇಹುಗಾರಿಕೆ ನಡೆಸುವ ಬಗ್ಗೆ ಆಗಾಗ್ಗ ವರದಿ ಆಗುತ್ತಲೇ ಇರುತ್ತದೆ. ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಅಪ್ಲಿಕೇಶನ್ಗಳು ಲೋಕೇಶನ್ ಟ್ರ್ಯಾಕ್ ಮಾಡುವುದನ್ನು ತಡೆಯಲು ನೀವು ಬಯಸಿದರೆ, ಈಗಲೇ ಈ ಕೆಲಸ ಮಾಡಿ.
Smartphones Tricks and Tips: ಇದು ಸ್ಮಾರ್ಟ್ಫೋನ್ಗಳ ಯುಗ. ಇದರಿಂದ ಹಲವು ಅನುಕೂಲತೆಗಳಿವೆ ಎಂಬುದನ್ನು ಯಾರೂ ಸಹ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ಅತಿಯಾದರೆ ಅಮೃತ ಕೂಡ ವಿಷವಿದ್ದಂತೆ ಎಂಬಂತೆ ಇದರಲ್ಲಿ ಕೆಲವು ಅನಾನುಕೂಲತೆಗಳೂ ಇವೆ. ವಾಸ್ತವವಾಗಿ, ಕಾಲ್ ರೆಕಾರ್ಡಿಂಗ್ ಸೇರಿದಂತೆ ಕೆಲವು ಕೆಲಸಗಳಿಗಾಗಿ ನಮ್ಮ ಸ್ಮಾರ್ಟ್ಫೋನ್ಗಳಲ್ಲಿ ನಾವು ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳನ್ನು ಸ್ಥಾಪಿಸುತ್ತೇವೆ. ಆದರೆ, ಕೆಲವು ಅಪ್ಲಿಕೇಶನ್ಗಳುನಮ್ಮ ಕೆಲವು ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸಬಹುದು. ಇವುಗಳಲ್ಲಿ ಲೋಕೇಶನ್ ಟ್ರ್ಯಾಕ್ ಮಾಡುವುದು ಕೂಡ ಒಂದು. ಇಂತಹ ಅಪ್ಲಿಕೇಶನ್ಗಳಿಂದ ದೂರವಿರಲು ಕೆಲವು ವಿಷಯಗಳ ಬಗ್ಗೆ ನಿಗಾವಹಿಸುವುದು ಬಹಳ ಮುಖ್ಯ. ಜೊತೆಗೆ ಈ ಅಪ್ಲಿಕೇಶನ್ಗಳು ನಿಮ್ಮನ್ನು ಟ್ರ್ಯಾಕ್ ಮಾಡುವುದನ್ನು ನೀವು ನಿಲ್ಲಿಸಬಹುದು. ಅಂತಹ ಕೆಲವು ಟ್ರಿಕ್ಸ್ ಬಗ್ಗೆ ಇಲ್ಲಿ ಮಾಹೀತ್ ನೀಡಲಿದ್ದೇವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮೊದಲಿಗೆ ನಿಮ್ಮ ಲೋಕೇಶನ್ ಟ್ರ್ಯಾಕ್ ಮಾಡುತ್ತಿರುವ ಅಪ್ಲಿಕೇಶನ್ ಯಾವುದು ಎಂಬುದನ್ನು ಕಂಡು ಹಿಡಿಯಿರಿ.
ಕೆಲವು ಅಪ್ಲಿಕೇಶನ್ಗಳು ನ್ಯಾವಿಗೇಷನ್ ಮತ್ತು ಇತರ ಉದ್ದೇಶಗಳಿಗಾಗಿ ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡುತ್ತವೆ. ಇಂತಹ ಅಪ್ಲಿಕೇಶನ್ಗಳು ನಿಮ್ಮ ಸ್ಥಳ ಡೇಟಾಗೆ ಗೂಗಲ್ ನಕ್ಷೆಯನ್ನು ಬಳಸುತ್ತವೆ. ಅಂತಹ ಸಾಮಾನ್ಯ ಅಪ್ಲಿಕೇಶನ್ಗಳ ಪಟ್ಟಿ ಇಲ್ಲಿದೆ. . . ಇವುಗಳು ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡುವ ಕೆಲವು ಕುಖ್ಯಾತ ಅಪ್ಲಿಕೇಶನ್ಗಳಾಗಿವೆ ಮತ್ತು ಅನೇಕ ಸಂದರ್ಭಗಳಲ್ಲಿ, ಸ್ಥಳ ಟ್ರ್ಯಾಕಿಂಗ್ ಸಂಪೂರ್ಣವಾಗಿ ಅನಗತ್ಯವಾಗಿರುತ್ತದೆ. ಆದಾಗ್ಯೂ, ಅವು ನಿಮ್ಮ ಲೋಕೇಶನ್ ಟ್ರ್ಯಾಕ್ ಮಾಡುತ್ತಿರುತ್ತವೆ. ಇಂತಹ ಅಪ್ಲಿಕೇಶನ್ಗಳು ಬಳಕೆಯಲ್ಲಿ ಇಲ್ಲದಿದ್ದಾಗ ನಿಮ್ಮ ಲೋಕೇಶನ್ ಅನ್ನು ನಿಷ್ಕ್ರಿಯಗೊಳಿಸುವುದು ಉತ್ತಮ ಆಯ್ಕೆ ಎಂದು ಸಾಬೀತು ಪಡಿಸಬಹುದು.
ಇತ್ತೀಚಿನ ದಿನಗಳಲ್ಲಿ ನಾವು ಎಲ್ಲಾದರೂ ಪ್ರಯಾಣಿಸಬೇಕಾದರೆ ಪಬ್ಲಿಕ್ ವಾಹನಗಳನ್ನು ಬಳಸುವುದಾದರೆ ಅದರಲ್ಲಿ ಉಬರ್ ಮತ್ತು ಓಲಾ ಸಹ ಸೇರಿವೆ. Uber ಮತ್ತು Ola ನಂತಹ ರೈಡ್ಶೇರಿಂಗ್ ಅಪ್ಲಿಕೇಶನ್ಗಳು ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡಬೇಕಾಗುತ್ತದೆ ಇದರಿಂದ ಚಾಲಕರು ಎಲ್ಲಿಗೆ ಬರಬೇಕೆಂದು ತಿಳಿಯುತ್ತಾರೆ. ಆದರೆ ಅದೇ ಸಮಯದಲ್ಲಿ, ಈ ಅಪ್ಲಿಕೇಶನ್ ನೀವು ಯಾವ ಸ್ಥಳದಲ್ಲಿ ಇದ್ದೀರಿ ಎಂಬುದನ್ನು ನಿರಂತರವಾಗಿ ಟ್ರ್ಯಾಕ್ ಮಾಡುತ್ತದೆ. ಆದ್ದರಿಂದ ನಿಮಗೆ ಈ ಅಪ್ಲಿಕೇಶನ್ಗಳು ಅಗತ್ಯವಿದ್ದಾಗ ಮಾತ್ರ ಸ್ಥಳವನ್ನು ಸಕ್ರಿಯಗೊಳಿಸಿ. ಉಳಿಸ ಸಮಯದಲ್ಲಿ ಅದನ್ನು ನಿಷ್ಕ್ರಿಯಗೊಳಿಸಿ.
ರೈಡ್ಶೇರಿಂಗ್ ಅಪ್ಲಿಕೇಶನ್ಗಳು ಮಾತ್ರವಲ್ಲ Netflix ಮತ್ತು Prime Video ನಂತಹ ವೀಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್ಗಳು ಸಹ ನಿಮ್ಮ ಲೊಕೇಶನ್ ಅನ್ನು ಟ್ರ್ಯಾಕ್ ಮಾಡಬಹುದು. ಇದರಿಂದ ಅವರು ನಿಮ್ಮ ಸ್ಥಳದಲ್ಲಿ ಲಭ್ಯವಿಲ್ಲದ ಆ ವಿಷಯವನ್ನು ನಿಮ್ಮ ವ್ಯಾಪ್ತಿಯಿಂದ ತೆಗೆದುಹಾಕಬಹುದು.
ನೀವು ಬಯಸಿದರೆ, ನೀವು ಎಲ್ಲಾ ಅಪ್ಲಿಕೇಶನ್ಗಳಿಗೆ ಸ್ಥಳ ಪ್ರವೇಶವನ್ನು ಆಫ್ ಮಾಡಬಹುದು, ಆದರೆ ಅವುಗಳಲ್ಲಿ ಹಲವು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸಬಹುದು. ಹಾಗಾಗಿ, ನಾವು ಸ್ಥಳ ಡೇಟಾವನ್ನು ಹೇಗೆ ನಿರ್ಬಂಧಿಸಬಹುದು ಎಂಬುದನ್ನು ತಿಳಿಯುವುದು ಬಹಳ ಮುಖ್ಯ. ಇದಕ್ಕಾಗಿ ಮೊದಲಿಗೆ ಸೆಟ್ಟಿಂಗ್ಗಳಿಗೆ ಹೋಗಿ.“ಅಪ್ಲಿಕೇಶನ್ಗಳು ಮತ್ತು ಅಧಿಸೂಚನೆಗಳು” ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. “ಅಪ್ಲಿಕೇಶನ್ ಅನುಮತಿಗಳು” ಮೇಲೆ ಕ್ಲಿಕ್ ಮಾಡಿ. ಕೆಳಗೆ ಸ್ಕ್ರಾಲ್ ಮಾಡಿ ಮತ್ತು “ಸ್ಥಳ” ಆಯ್ಕೆಯನ್ನು ಕ್ಲಿಕ್ ಮಾಡಿ. ಅದರ ನಂತರ ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡುವ ಅಪ್ಲಿಕೇಶನ್ಗಳ ಪಟ್ಟಿಯನ್ನು ನೀವು ನೋಡುತ್ತೀರಿ. ಅಲ್ಲಿ ನೀವು ಅಪ್ಲಿಕೇಶನ್ ಅನ್ನು ಆಫ್ ಮಾಡುವ ಆಯ್ಕೆಯನ್ನು ಕಾಣುತ್ತೀರಿ. ನಿಮಗೆ ಅಗತ್ಯವಿಲ್ಲದಿದ್ದರೆ ಅದನ್ನು ಆಫ್ ಮಾಡಬಹುದು.
ಒಂದೊಮ್ಮೆ ನೀವು iOS ಫೋನ್ ಹಿಂದಿದ್ದರೆ ಇಲ್ಲಿಯೂ ಸಹ ಇದೇ ರೀತಿಯ ಪ್ರಕ್ರಿಯೆ ಹೋಲುತ್ತದೆ. ನಿಮ್ಮ iPhone ನಲ್ಲಿ ಸ್ಥಳ ಟ್ರ್ಯಾಕಿಂಗ್ ಅನ್ನು ಆಫ್ ಮಾಡಲು ಅಥವಾ ಕೆಲವು ಅಪ್ಲಿಕೇಶನ್ಗಳನ್ನು ನಿರ್ಬಂಧಿಸಲು ನೀವು ಬಯಸಿದರೆ, ಸೆಟ್ಟಿಂಗ್ಗಳು > ಗೌಪ್ಯತೆ > ಸ್ಥಳ ಸೇವೆಗಳಿಗೆ ಹೋಗಿ, ಅಲ್ಲಿ ನೀವು ಸ್ಥಳ ಸೇವೆಗಳನ್ನು ಆಫ್ ಮಾಡಲು ಆಯ್ಕೆ ಲಭ್ಯವಿದೆ.