ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವೊಂದು ವಸ್ತುಗಳು ಇದ್ದರೆ ಅಲ್ಲಿ ಸಂಪತ್ತು ಹರಿದು ಬರುತ್ತದೆ. ಅಷ್ಟೇ ಅಲ್ಲದೆ, ಸಂಪತ್ತಿನ ಅಧಿಪತಿ ಮಾತೆ ಲಕ್ಷ್ಮೀ ದೇವಿ ಮತ್ತು ಕುಬೇರನ ಆಶೀರ್ವಾದ ಎಂದಿಗೂ ಇರುತ್ತದೆ. ಇನ್ನು ಲಕ್ಷ್ಮೀ ದೇವಿ ಸಂತೋಷಕ್ಕೆ ಮನೆಯನ್ನು ಎಂದಿಗೂ ಸ್ವಚ್ಛವಾಗಿಟ್ಟುಕೊಳ್ಳಬೇಕು ಎನ್ನುತ್ತಾರೆ ಜೋತಿಷ್ಯರು.
ಅರಿಶಿಣವು ರಾಶಿಯಲ್ಲಿ ಗುರುವನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಅಡುಗೆ ಮನೆಯಲ್ಲಿ ಅರಶಿಣ ಖಾಲಿಯಾಗದಂತೆ ನೋಡಿಕೊಳ್ಳಿ. ಇನ್ನೊಂದು ವಿಚಾರವೆಂದರೆ ಅರಶಿಣ ವಿಷ್ಣು ದೇವರಿಗೆ ಬಹಳ ಪ್ರಿಯ. ಒಂದು ವೇಳೆ ಅರಿಶಿಣ ಖಾಲಿಯಾದರೆ ಮಕ್ಕಳ ಅಧ್ಯಯನದ ಮೇಲೆ ದುಷ್ಪರಿಣಾಮ ಬೀಳುತ್ತದೆ.
ಇನ್ನು ಅಕ್ಕಿಯೂ ಸಂಪೂರ್ಣವಾಗಿ ಖಾಲಿಯಾದರೆ ಶುಕ್ರದೋಷ ಬರುವ ಸಾಧ್ಯತೆ ಇದೆ. ಮನೆಯಲ್ಲಿ ಅನ್ನವಿದ್ದರೆ ಲಕ್ಷ್ಮಿ ದೇವಿಯಿದ್ದಾಳೆ ಎಂದು ಹೇಳಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆಯಲ್ಲಿ ಹಿಟ್ಟು ಖಾಲಿಯಾಗಬಾರದು. ಇದರಿಂದ ಮನೆಯಲ್ಲಿ ಬಡತನ ಮತ್ತು ಸಮಾಜದಲ್ಲಿ ಅಗೌರವ ಸೃಷ್ಟಿಯಾಗುತ್ತದೆ.
ಉಪ್ಪನ್ನು ಕದಿಯಬಾರದು ಎಂದು ಹೇಳಲಾಗುತ್ತದೆ. ಜೊತೆಗೆ ಮನೆಯಲ್ಲಿ ಉಪ್ಪು ಖಾಲಿಯಾದರೆ ನಕಾರಾತ್ಮಕ ಶಕ್ತಿಗಳು ಹೆಚ್ಚುತ್ತವೆ ಎಂದು ಹೇಳಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಸಾಸಿವೆ ಎಣ್ಣೆಯು ಶನಿ ದೇವರಿಗೆ ಬಹಳ ಪ್ರಿಯ. ಹೀಗಿರುವಾಗ ಎಣ್ಣೆ ಖಾಲಿಯಾದರೆ ಶನಿಯು ಕೋಪಗೊಳ್ಳುತ್ತಾನೆ ಎನ್ನಲಾಗುತ್ತದೆ. ಸಾಧ್ಯವಾದರೆ ಪ್ರತಿ ಶನಿವಾರ ಈ ಎಣ್ಣೆಯನ್ನು ದಾನ ಮಾಡಿ. ಮಂಗಳ ಪ್ರಾಪ್ತವಾಗುತ್ತದೆ.