ಎನ್‌ಬಿಟಿಯ ಪ್ರಕಾರ, ಖಾತೆಗೆ ಅಪರಿಚಿತರಿಂದ ಹಣ ಸಂದಾಯವಾದರೆ ಅದನ್ನು ಖರ್ಚು ಮಾಡುವಂತಿಲ್ಲ. ಒಂದು ವೇಳೆ ಖರ್ಚು ಮಾಡಿದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ
ನವದೆಹಲಿ : Banking Alert: ನಿಮ್ಮ ಖಾತೆಗೆ ಇದ್ದಕ್ಕಿದ್ದಂತೆ ದೊಡ್ಡ ಮೊತ್ತದ ಹಣ ಕ್ರೆಡಿಟ್ ಆದರೆ ಹುಷಾರಾಗಿರಿ. ಆ ಹಣ ಕಳುಹಿಸಿದವರು ಯಾರು ಎನ್ನುವುದನ್ನು ಮೊದಲು ತಿಳಿದುಕೊಳ್ಳಿ. ಅದು ಬಿಟ್ಟು ನನ್ನ ಖಾತೆಗೆ ಹಣ ಬಂದಿದೆ ಎಂದು ಹೇಳಿ ಖರ್ಚು ಮಾಡಲು ಹೋಗಬೇಡಿ. ಹಾಗೆ ಮಾಡುವುದು ತಪ್ಪು. ಹಾಗಿದ್ದರೆ ನಿಮ್ಮ ಖಾತೆಗೆ ನಿಮ್ಮದಲ್ಲದ ಹಣ ಕ್ರೆಡಿಟ್ ಆದರೆ ಏನು ಮಾಡಬೇಕು ನೋಡೋಣ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನಿಮ್ಮ ಖಾತೆಗೆ ನಿಮಗೆ ಗೊತ್ತಿಲ್ಲದೆ ನಿಮ್ಮದಲ್ಲದ, ದೊಡ್ಡ ಮೊತ್ತದ ಹಣ ಕ್ರೆಡಿಟ್ ಆದರೆ ನೀವು ಮೊದಲು ಮಾಡಬೇಕಾಗಿರುವ ಕೆಲಸ ಅಂದರೆ ಬ್ಯಾಂಕಿಗೆ ತಿಳಿಸುವುದು. ಒಂದು ವೇಳೆ ನೀವು ಬ್ಯಾಂಕಿಗೆ ತಿಳಿಸದೇ ಹೋದರೆ ಅದು ನೀವು ಮಾಡುವ ದೊಡ್ಡ ತಪ್ಪು. ಯಾಕಂದರೆ ಇಂದಲ್ಲ ನಾಳೆ, ಬ್ಯಾಂಕಿಗೆ ಈ ವಿಚಾರ ತಿಳಿದೇ ತಿಳಿಯುತ್ತದೆ.
ಎನ್‌ಬಿಟಿಯ ಪ್ರಕಾರ, ಖಾತೆಗೆ ಅಪರಿಚಿತರಿಂದ ಹಣ ಸಂದಾಯವಾದರೆ ಅದನ್ನು ಖರ್ಚು ಮಾಡುವಂತಿಲ್ಲ. ಒಂದು ವೇಳೆ ಖರ್ಚು ಮಾಡಿದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ. ಖಾತೆಗೆ ಬಂದಿರುವ ಹಣ ನಿಮ್ಮದಲ್ಲದ ಕಾರಣ, ಅದನ್ನು ಹಿಂದುರಿಗಿಸಬೇಕಾಗುತ್ತದೆ. ಇನ್ನು ಹಣ ಹಿಂದಿರುಗಿಸಲು ನಿರಾಕರಿಸಿದರೆ ನಿಮ್ಮ ವಿರುದ್ಧ ಪ್ರಕರಣ ಕೂಡಾ ದಾಖಲಿಸಬಹುದು.
ನಿಮ್ಮ ಖಾತೆಗೆ ಯಾರು ಹಣ ಕಳುಹಿಸಿದ್ದಾರೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ. ಖಾತೆ ಸಂಖ್ಯೆ ಅಥವಾ ಯುಪಿಐ ಐಡಿ ತಿಳಿದಿದ್ದರೆ ಹಣ ಕಳುಹಿಸಿರುವ ವ್ಯಕ್ತಿಯನ್ನು ಕಂಡುಹಿಡಿಯುವುದು ಕೂಡಾ ಸುಲಭ. ಆದರೆ ಆವ್ಯಕ್ತಿ ಯಾರು ಎಂದು ನಿಮಗೆ ಗೊತ್ತಿಲ್ಲದೆ ಹೋದರೆ ಹಣದ ಬಗ್ಗೆ ತಪ್ಪದೆ ಬ್ಯಾಂಕಿಗೆ ಮಾಹಿತಿ ನೀಡಬೇಕು.
ಫಂಡ್ ಟ್ರಾನ್ಸ್ಫರ್ ಮಾಡುವಾಗ ಆಗುವ ಸಣ್ಣ ತಪ್ಪಿನಿಂದ ಯಾರದ್ದೋ ದುಡ್ಡು, ಯಾರದ್ದೋ ಖಾತೆಗೆ ಸೇರುವ ಸಂಭವವೂ ಹೆಚ್ಚಿರುತ್ತದೆ. ಇಂಟರ್ನೆಟ್ ಬ್ಯಾಂಕಿಂಗ್ ಬಳಕೆ ಹೆಚ್ಚಾದಂತೆ ಈ ತಪ್ಪುಗಳ ಸಂಖ್ಯೆಯೂ ಹೆಚ್ಚುತ್ತಿದೆ.
ಅಪರಾಧಿ ಚಟುವಟಿಕೆಗಳಲ್ಲಿ ಭಾಗವಹಿಸಿರುವವರು ಉದ್ದೇಶಪೂರ್ವಕವಾಗಿಯೇ ಹಣವನ್ನು ಅಲ್ಲಿ ಇಲ್ಲಿ ಟ್ರಾನ್ಸಫರ್ ಮಾಡುತ್ತಾರೆ. ನಂತರ ಅಕೌಂಟ್ ಹ್ಯಾಕ್ ಮಾಡಿ ಹಣವನ್ನು ಮತ್ತೆ ಬಳಸಿಕೊಳ್ಳುತ್ತಾರೆ. ಹಾಗಾಗಿ ನಿಮಗೆ ಅಪರಿಚಿತರಾಗಿರುವವರಿಂದ ನಿಮ್ಮದಲ್ಲದ ಹಣ ಖಾತೆಗೆ ಕ್ರೆಡಿಟ್ ಆದರೆ ಕೂಡಲೇ ಎಚ್ಚೆತ್ತುಕೊಳ್ಳಿ..