ಟೀಂ ಇಂಡಿಯಾ ಸ್ಟಾರ್‌ ಯುವ ಆಟಗಾರನ ಕೆರಿಯರ್‌ ಅಂತ್ಯ.. ಬಾಲ್‌ ಟ್ಯಾಂಪರಿಂಗ್‌ ಕಾರಣದಿಂದ ಆಟಗಾರ ತಂಡದಿಂದ ನಿಷೇಧ..?!

Ishan Kishan Ball Tampering: ಭಾರತದ ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಪ್ರಸ್ತುತ ಆಸ್ಟ್ರೇಲಿಯಾದಲ್ಲಿದ್ದು ಭಾರತ-ಎ ಪ್ರತಿನಿಧಿಸುತ್ತಿದ್ದು, ಯುವ ಆಟಗಾರ ಸದ್ಯ ದೊಡ್ಡ ವಿವಾದ ಒಂದರಲ್ಲಿ ಸಿಲುಕಿದ್ದಾರೆ. 
 

1 /9

Ishan Kishan Ball Tampering: ಭಾರತದ ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಪ್ರಸ್ತುತ ಆಸ್ಟ್ರೇಲಿಯಾದಲ್ಲಿದ್ದು ಭಾರತ-ಎ ಪ್ರತಿನಿಧಿಸುತ್ತಿದ್ದು, ಯುವ ಆಟಗಾರ ಸದ್ಯ ದೊಡ್ಡ ವಿವಾದ ಒಂದರಲ್ಲಿ ಸಿಲುಕಿದ್ದಾರೆ.   

2 /9

ಭಾರತ-ಎ ಮತ್ತು ಆಸ್ಟ್ರೇಲಿಯ-ಎ ನಡುವಿನ ಪಂದ್ಯದ ವೇಳೆ ಇಶಾನ್ ಅವರು ಅಂಪೈರ್‌ಗಳೊಂದಿಗೆ ವಾಗ್ವಾದ ನಡೆಸಿದ್ದು, ಇದರಿಂದಾಗಿ ಅವರು ನಿಷೇಧದ ಭೀತಿಯಲ್ಲಿದ್ದಾರೆ.   

3 /9

ಭಾರತ-ಎ ಮತ್ತು ಆಸ್ಟ್ರೇಲಿಯಾ-ಎ ನಡುವಿನ ಅನಧಿಕೃತ ಟೆಸ್ಟ್ ಪಂದ್ಯದ ಕೊನೆಯ ದಿನದಂದು ಭಾರತದ ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ.   

4 /9

ಸ್ಥಳೀಯ ಮಾಧ್ಯಮಗಳ ಪ್ರಕಾರ, ಇಶಾನ್ ಕಿಶನ್ ಅವರು ಚೆಂಡನ್ನು ಬದಲಾಯಿಸುವ ಬಗ್ಗೆ ಮೈದಾನದ ಅಂಪೈರ್‌ಗಳೊಂದಿಗೆ ವಾದಿಸಿದ್ದರು, ಈ ಕಾರಣದಿಂದಾಗಿ ಅವರನ್ನು ನಿಷೇಧಿಸಬಹುದು ಎಂದು ವರದಿಯಾಗಿದೆ.  

5 /9

ಅಂಪೈರ್‌ಗಳು ಚೆಂಡನ್ನು ಬದಲಾಯಿಸಿದ್ದರಿಂದ ಪಂದ್ಯದ ನಾಲ್ಕನೇ ದಿನದಾಟ ತಡವಾಗಿ ಆರಂಭವಾಯಿತು. ಚೆಂಡಿನ ಮೇಲೆ ಗೀರುಗಳ ಗುರುತುಗಳಿವೆ ಎಂದು ಅವರು ದೂರಿದ್ದು, ಅಂಪೈರ್‌ಗಳೊಂದಿಗೆ ಈ ಕಾರಣದಿಂದಾಗಿ ಅವರು ವಾಗ್ವಾದ ನಡೆಸಿದರು.   

6 /9

ಈ ಕುರಿತು ಭಾರತ ಎ ತಂಡದ ಆಟಗಾರರು ಅಂಪೈರ್‌ಗಳ ಜತೆ ವಾಗ್ವಾದಕ್ಕಿಳಿದಿರುವುದು ಕಂಡುಬಂದಿತು. ಏತನ್ಮಧ್ಯೆ, ಮೈದಾನದ ಅಂಪೈರ್ ಶಾನ್ ಕ್ರೇಗ್ ಅವರು ಚೆಂಡಿನ ಮೇಲಿನ ಗೆರೆಗಳಿಗೆ ಕಾರನ ಭಾರತ ತಂಡವೇ ಎಂದು ದೂರಿದರು.   

7 /9

ವರದಿಗಳ ಪ್ರಕಾರ ಅಂಪೈರ್‌ " ನೀವು ಚೆಂಡನ್ನು ಸ್ಕ್ರ್ಯಾಚ್ ಮಾಡಿದ್ದೀರಿ. ನಾವು ಚೆಂಡನ್ನು ಬದಲಾಯಿಸಿದ್ದೇವೆ. ಈ ಬಗ್ಗೆ ಹೆಚ್ಚಿನ ಚರ್ಚೆ ಬೇಕಿಲ್ಲ.  ಪಂದ್ಯವನ್ನು ಪ್ರಾರಂಭಿಸೋಣ, ಇದು ಚರ್ಚೆಯ ವಿಷಯವಲ್ಲ". ಎಂದಿದ್ದಾರೆ.   

8 /9

ಇದಕ್ಕೆ ಇಶಾನ್‌ ಕಿಶನ್‌ ನೀಡಿದ ಉತ್ತರದಿಂದ ಕಾರಣದಿಂದ, ಅಂಪೈರ್‌ ಕೋಪಗೊಂಡಿದ್ದು, " ನೀವು ಮಾಡಿದ ತಪ್ಪಿಗಾಗಿ ನಾವು ಚೆಂಡನ್ನು ಬದಲಾಯಿಸಿದ್ದೇವೆ, ಅದ್ದರಿಂದ ನIೌು ಇದರ ವಿಷಯವಾಗಿ ದಂಡ ಕಟ್ಟಾಗಬೇಕಾಗುತ್ತದೆ" ಎಂದಿದ್ದಾರೆ.   

9 /9

ಬಾಲ್ ಟ್ಯಾಂಪರಿಂಗ್ ಬಗ್ಗೆ ಅಂಪೈರ್‌ಗಳು ಎಷ್ಟು ಗಂಭೀರವಾಗಿದ್ದಾರೆ ಎಂಬುದು ಪಂದ್ಯದ ನಂತರ ತಿಳಿಯಲಿದೆ. ಇದರಲ್ಲಿ ಭಾರತೀಯ ಆಟಗಾರರು ತಪ್ಪಿತಸ್ಥರು ಎಂದು ಕಂಡುಬಂದರೆ, ಕ್ರಿಕೆಟ್ ಆಸ್ಟ್ರೇಲಿಯಾದ ನೀತಿ ಸಂಹಿತೆಯ ಪ್ರಕಾರ ಅವರನ್ನೂ ನಿಷೇಧಿಸಬಹುದು.