ಯಾರಿಗಾದರೂ ನಿಫಾ ವೈರಸ್ ವಕ್ಕರಿಸಿದರೆ ಅವರ ಪ್ರಾಣಕ್ಕೆ ಕುತ್ತು ಗ್ಯಾರಂಟಿ ಅಂತಾ ಎಚ್ಚರಿಸಲಾಗಿದೆ.
ಈಗಾಗಲೇ ಕೊರೊನಾ 3ನೇ ಅಲೆಯ ಭೀತಿಯಿಂದ ತತ್ತರಿಸಿರುವ ಕೇರಳದಲ್ಲಿ ನಿಫಾ ವೈರಸ್ ರಣಕೇಕೆ ಹಾಕುತ್ತಿದೆ. ಭಾನುವಾರ (ಸೆ.5) ಕೋಚಿಕ್ಕೋಡ್ ನಲ್ಲಿ ನಿಫಾ ವೈರಸ್ (NiV) ನಿಂದ 12 ವರ್ಷದ ಬಾಲಕನ ಸಾವನ್ನಪ್ಪಿದ್ದಾನೆ. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿದ್ದ ಈ ಬಾಲಕನ ಮಾದರಿಗಳು ನಿಫಾ ವೈರಸ್ ಇರುವುದನ್ನು ದೃಢಪಡಿಸಿದೆ. ದಕ್ಷಿಣ ಭಾರತದಲ್ಲಿಯೇ ದಾಖಲಾದ ಮೊದಲ ನಿಫಾ ವೈರಸ್ ಪ್ರಕರಣ ಇದಾಗಿದೆ. ಯಾರಿಗಾದರೂ ನಿಫಾ ವೈರಸ್ ವಕ್ಕರಿಸಿದರೆ ಅವರ ಪ್ರಾಣಕ್ಕೆ ಕುತ್ತು ಗ್ಯಾರಂಟಿ ಅಂತಾ ಎಚ್ಚರಿಸಲಾಗಿದೆ. ರಕ್ಕಸ ನಿಫಾ ವೈರಸ್ ಲಕ್ಷಣಗಳು(Nipah Virus Symptoms) ಏನೇನು..? ಇದಕ್ಕೆ ಔಷಧಿ ಇಲ್ವಾ..? ಅಂತಾ ಜನರು ತಲೆಕೆಡಿಸಿಕೊಂಡಿದ್ದಾರೆ. ಈ ಡೆಡ್ಲಿ ವೈರಸ್ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ನಿಫಾ ವೈರಸ್ ಮೊದಲು 1999ರಲ್ಲಿ ಹಂದಿಗಳಲ್ಲಿ ಮತ್ತು ಮಲೇಷಿಯಾ, ಸಿಂಗಾಪುರದ ಜನರಲ್ಲಿ ಕಾಣಿಸಿಕೊಂಡಿತು ಎಂದು ಹೇಳಲಾಗಿದೆ. ಈ ಸೋಂಕು ತಗುಲಿದ್ದರಿಂದ ಏಕಾಏಕಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಸುಮಾರು 300 ಜನರಿಗೆ ಸೋಂಕು ತಗುಲಿತ್ತು ಎಂದು ವರದಿಯಾಗಿದೆ. ಇದನ್ನು ನಿಯಂತ್ರಿಸಲು 10 ಲಕ್ಷಕ್ಕೂ ಹೆಚ್ಚು ಹಂದಿಗಳನ್ನು ಕೊಂದಿದ್ದರಿಂದ ದೊಡ್ಡ ಆರ್ಥಿಕ ಪರಿಣಾಮ ಉಂಟಾಗಿತ್ತು. ಸಿಡಿಸಿಯ ಪ್ರಕಾರ, 1999ರಲ್ಲಿ ಮಲೇಷ್ಯಾ ಮತ್ತು ಸಿಂಗಾಪುರದಲ್ಲಿ ನಿಫಾ ವೈರಸ್ ಪತ್ತೆಯಾದ ಬಳಿಕ ಅಲ್ಲಿ ಇದು ಕಾಣಿಸಿಕೊಂಡಿಲ್ಲವಂತೆ. ನಂತರದ ದಿನಗಳಲ್ಲಿ ಏಷ್ಯಾದ ಕೆಲವು ಭಾಗಗಳಲ್ಲಿ ಮುಖ್ಯವಾಗಿ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.
ನಿಫಾ ಸೋಂಕಿತ ವ್ಯಕ್ತಿಗೆ ಜ್ವರ, ತಲೆನೋವು, ಕೆಮ್ಮು, ಗಂಟಲು ನೋವು, ಉಸಿರಾಟದ ತೊಂದರೆ ಮತ್ತು ವಾಂತಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ತೀವ್ರ ರೋಗಲಕ್ಷಣಗಳಿರುವ ವ್ಯಕ್ತಿಗಳಿಗೆ ದಿಗ್ಭ್ರಮೆಯಾಗುವುದು, ಅರೆನಿದ್ರಾವಸ್ಥೆ, ಗೊಂದಲ, ರೋಗಗ್ರಸ್ತ ಲಕ್ಷಣಗಳು, ಕೋಮಾ ಮತ್ತು ಮೆದುಳಿನ ಊತ (ಎನ್ಸೆಫಾಲಿಟಿಸ್) ಕಾಣಿಸಿಕೊಳ್ಳುತ್ತವೆ.
ನಿಫಾ ವೈರಸ್ ಸೋಂಕನ್ನು ವ್ಯಕ್ತಿಯ ಅನಾರೋಗ್ಯದ ಸಮಯದಲ್ಲಿ ಮತ್ತು ಚೇತರಿಸಿಕೊಂಡ ನಂತರ ಪತ್ತೆ ಮಾಡಬಹುದು. ಅನಾರೋಗ್ಯದ ಆರಂಭಿಕ ಹಂತದಲ್ಲಿ ಗಂಟಲು ಮತ್ತು ಮೂಗಿನ ಸ್ವ್ಯಾಬ್‌ಗಳು, ಸೆರೆಬ್ರೊಸ್ಪೈನಲ್ ದ್ರವ, ಮೂತ್ರ ಮತ್ತು ರಕ್ತದ ಮಾದರಿ ಬಳಸಿ ಪ್ರಯೋಗಾಲಯ (RT-PCR) ಪರೀಕ್ಷೆಯನ್ನು ನಡೆಸಲಾಗುತ್ತದೆ. ಅನಾರೋಗ್ಯದ ಸಮಯದಲ್ಲಿ ಮತ್ತು ಚೇತರಿಕೆಯ ನಂತರ ಪ್ರತಿಕಾಯಗಳ ಪರೀಕ್ಷೆಯನ್ನು Enzyme-linked immunosorbent assay (ELISA) ಬಳಸಿ ನಡೆಸಲಾಗುತ್ತದೆ.
ಸೋಂಕಿತ ಪ್ರಾಣಿಗಳಾದ ಬಾವಲಿಗಳು, ಹಂದಿಗಳು ಅಥವಾ ಅವುಗಳ ದೇಹದ ದ್ರವಗಳಿಂದ (ರಕ್ತ, ಮೂತ್ರ ಅಥವಾ ಲಾಲಾರಸದ) ನೇರ ಸಂಪರ್ಕದಿಂದಾಗಿ ಒಬ್ಬ ವ್ಯಕ್ತಿಯು ನಿಫಾ ವೈರಸ್ ಸೋಂಕಿಗೆ ಒಳಗಾಗಬಹುದು. ಸೋಂಕಿತ ಪ್ರಾಣಿಗಳ ದೇಹದ ದ್ರವಗಳಿಂದ ಕಲುಷಿತಗೊಂಡ ಆಹಾರ ಉತ್ಪನ್ನಗಳನ್ನು ಸೇವಿಸಿದ ನಂತರವೂ ಒಬ್ಬ ವ್ಯಕ್ತಿಯು ಸೋಂಕಿಗೆ ಒಳಗಾಗಬಹುದು ನಿಫಾ ವೈರಸ್ ಸೋಂಕಿತ ವ್ಯಕ್ತಿಯೊಂದಿಗೆ ಅಥವಾ ಅವರ ದೇಹದ ದ್ರವಗಳ (ಮೂಗಿನ ಅಥವಾ ಉಸಿರಾಟದ ಹನಿಗಳು, ಮೂತ್ರ ಅಥವಾ ರಕ್ತ ಸೇರಿದಂತೆ) ನಿಕಟ ಸಂಪರ್ಕದಿಂದಾಗಿ ನಿಫಾ ವೈರಸ್ ಮತ್ತೊಬ್ಬರಿಗೆ ಹರಡುತ್ತದೆ.
ನಿಫಾ ವೈರಸ್ ಪತ್ತೆಯಾದ ಪ್ರದೇಶಗಳಲ್ಲಿ ಜನರು ನಿಯಮಿತವಾಗಿ ಸೋಪ್ ಮತ್ತು ನೀರಿನಿಂದ ಕೈತೊಳೆಯುವುದನ್ನು ಅಭ್ಯಾಸ ಮಾಡಬೇಕು. ಅನಾರೋಗ್ಯಕ್ಕಿಡಾದ ಬಾವಲಿಗಳು ಅಥವಾ ಹಂದಿಗಳ ಸಂಪರ್ಕವನ್ನು ತಪ್ಪಿಸಬೇಕು. ಬಾವಲಿಗಳು ಓಡಾಡುವ ಪ್ರದೇಶಗಳಲ್ಲಿ ಸಂಚರಿಸಬಾರದು. ಕಚ್ಚಾ ಖರ್ಜೂರದ ರಸ ಸೇವಿಸಬಾರದು ಮತ್ತು ಬಾವಲಿಗಳಿಂದ ಕಲುಷಿತಗೊಳ್ಳುವ ಹಣ್ಣುಗಳ ಸೇವನೆಯನ್ನು ತಪ್ಪಿಸಬೇಕು. ನಿಫಾ ಸೋಂಕಿಗೆ ಒಳಗಾದ ಯಾವುದೇ ವ್ಯಕ್ತಿಯ ರಕ್ತ ಅಥವಾ ದೇಹದ ದ್ರವಗಳ ಸಂಪರ್ಕದಿಂದ ದೂರವಿರಬೇಕು.