ಈ ರಾಶಿಯವರ ಮೇಲೆ ಶನಿಯ ಕೃಪಾ ದೃಷ್ಟಿ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ.
ಬೆಂಗಳೂರು : ಶನಿದೇವನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. ರಾಶಿಗೆ ಅನುಗುಣವಾಗಿ ಪ್ರತಿಯೊಬ್ಬನು ತನ್ನ ಜೀವನದಲ್ಲಿ ಒಮ್ಮೆ ಶನಿಯ ಕೋಪಕ್ಕೆ ಗುರಿಯಾಗಲೇ ಬೇಕು. ಅದರಲ್ಲೂ ಕೆಲವು ರಾಶಿಯವರೆಂದರೆ ಶನಿದೇವನಿಗೂ ಬಹಳ ಪ್ರೀತಿಯಂತೆ. ಈ ರಾಶಿಯವರ ಮೇಲೆ ಶನಿಯ ಕೃಪಾ ದೃಷ್ಟಿ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮೀನ ರಾಶಿಯ ಅಧಿಪತಿ ಗುರು. ಶನಿ ಮತ್ತು ಗುರುವಿನ ಸಂಬಂಧವು ಈ ರಾಶಿಯವರಿಗೆ ಶುಭ ಫಲಿತಾಂಶಗಳನ್ನೇ ನೀಡುತ್ತದೆ. ಶನಿದೇವನ ವಿಶೇಷ ಆಶೀರ್ವಾದ ಈ ರಾಶಿಯ ಜನರ ಮೇಲೆ ಜೀವನ ಪೂರ್ತಿ ಇರುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯ ಅಧಿಪತಿ ಬುಧ. ಈ ರಾಶಿಯ ಮೂರು ಅಂಶಗಳ ಅಧಿಪತಿಗಳೆಂದರೆ ಬುಧ, ಶುಕ್ರ ಮತ್ತು ಶನಿ. ಅಂತಹ ಪರಿಸ್ಥಿತಿಯಲ್ಲಿ, ಶನಿ ಮತ್ತು ಚಂದ್ರನು ತ್ರಿಕೋನ ಮನೆಯಲ್ಲಿ ಬಂದಾಗ, ಈ ರಾಶಿಯವರ ಮೇಲೆ ಏಳೂವರೆ ಶನಿಯ ಅಶುಭ ಪರಿಣಾಮ ಕಡಿಮೆಯಾಗುತ್ತದೆ ಅಥವಾ ಕೊನೆಗೊಳ್ಳುತ್ತದೆ.
ಶುಕ್ರನನ್ನು ತುಲಾ ರಾಶಿಯ ಅಧಿಪತಿ ಎಂದು ಕರೆಯಲಾಗುತ್ತದೆ. ಈ ರಾಶಿಯಲ್ಲಿ ಶನಿದೇವನು ಉತ್ಕೃಷ್ಟನಾಗಿರುತ್ತಾನೆ. ಹಾಗಾಗಿ ಎರಡೂವರೆ ಶನಿ ದೆಸೆಯಾಗಲಿ, ಸಾಡೇ ಸಾತಿಯಾಗಲಿ ಈ ರಾಶಿಯವರ ಮೇಲೆ ಯಾವುದೇ ರೀತಿಯ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ.
ಕಟಕ ರಾಶಿಯ ಅಧಿಪತಿ ಚಂದ್ರ. ಇದನ್ನು ನೀರಿನ ಅಂಶದ ಅಧಿಪತಿ ಎಂದು ಕೂಡಾ ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದ ಯಾವುದೇ ಮನೆಯಲ್ಲಿ ಮಹಾದಶಾ ನಡೆಯುತ್ತಿದ್ದರೆ ಮತ್ತು ಶನಿಯ ಸಾಡೇ ಸತಿ ಪ್ರಾರಂಭವಾದರೆ, ಈ ರಾಶಿಯವರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದರೂ ಎಲ್ಲರನ್ನು ಕಾಡುವಂತೆ ಶನಿದೇವ ಇವರನ್ನು ಕಾಡುವುದಿಲ್ಲ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಶನಿದೇವನ ವಿಶೇಷ ಆಶೀರ್ವಾದವಿರುತ್ತದೆ. ಈ ರಾಶಿಯ ಅಧಿಪತಿ ಕೂಡಾ ಶುಕ್ರ. ಶನಿ ದೇವನನ್ನು ಅದೃಷ್ಟದ ಸ್ಥಳ ಮತ್ತು ಕಾರ್ಯಸ್ಥಳದ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಶನಿದೇವನು ಈ ರಾಶಿಯವರ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಶನಿ ಸಾಡೇ ಸಾತಿ ಸಮಯದಲ್ಲಿಯೂ ಇವರ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. (ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)