₹7,660 ಕೋಟಿ ಮೌಲ್ಯದ 91 ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ, ಸುಮಾರು 18,000 ಉದ್ಯೋಗ ಸೃಷ್ಟಿ
ರಾಜ್ಯದ ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕೆಂಬ ಉದ್ದೇಶದೊಂದಿಗೆ ಶುಕ್ರವಾರ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯನ್ನು ಸಚಿವ ಎಂ.ಬಿ ಪಾಟೀಲ್ ನಡೆಸಿದರು .91 ಯೋಜನೆಗಳ ಒಟ್ಟು ರೂ. 7,660 ಕೋಟಿ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಲಾಗಿದ್ದು, ಸುಮಾರು 18,146 ಉದ್ಯೋಗ ಸೃಷ್ಟಿಯಾಗಲಿದೆ.