ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಫ್ಯಾನ್‌ ಫಾಲೋವರ್ಸ್‌ ಹೊಂದಿರುವ ತಂಡ ಯಾವುದು ಗೊತ್ತಾ? RCBಯಂತೂ ಖಂಡಿತ ಅಲ್ಲ... ಈ ತಂಡಕ್ಕಿದೆ 40.9 ಮಿಲಿಯನ್‌ ಫ್ಯಾನ್ಸ್

Which IPL team has the most fans in 2024: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಅಥವಾ ಐಪಿಎಲ್‌ ಅಸ್ತಿತ್ವಕ್ಕೆ ಬಂದಿದ್ದು 2008ರಲ್ಲಿ. ಅಂದಿನಿಂದ ಈ ಟೂರ್ನಿಯನ್ನು ಯಾವೊಂದು ಲೀಗ್‌ ಪಂದ್ಯಗಳಿಗೂ ಬೀಟ್‌ ಮಾಡಲು ಸಾಧ್ಯವಾಗಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /11

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಅಥವಾ ಐಪಿಎಲ್‌ ಅಸ್ತಿತ್ವಕ್ಕೆ ಬಂದಿದ್ದು 2008ರಲ್ಲಿ. ಅಂದಿನಿಂದ ಈ ಟೂರ್ನಿಯನ್ನು ಯಾವೊಂದು ಲೀಗ್‌ ಪಂದ್ಯಗಳಿಗೂ ಬೀಟ್‌ ಮಾಡಲು ಸಾಧ್ಯವಾಗಿಲ್ಲ. ಅಂತೆಯೇ ಈ ಟೂರ್ನಿಯಲ್ಲಿ ಆಡುತ್ತಿರುವ ಕೆಲವೊಂದು ತಂಡಗಳಿಗೂ ಭಾರೀ ಫ್ಯಾನ್‌ ಫಾಲೋವಿಂಗ್‌ ಇದೆ. ಅಂತಹ ತಂಡಗಳು ಯಾವುವು? ಯಾವ ತಂಡಕ್ಕೆ ಎಷ್ಟರಮಟ್ಟಿಗೆ ಫ್ಯಾನ್‌ ಫಾಲೋವರ್ಸ್‌ ಇದ್ದಾರೆ ಎಂಬುದನ್ನು ಈ ವರದಿಯಲ್ಲಿ ತಿಳಿಯೋಣ.

2 /11

ಚೆನ್ನೈ ಸೂಪರ್ ಕಿಂಗ್ಸ್: ಐಪಿಎಲ್‌ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಅನುಸರಿಸುವ ಟಾಪ್ 10 ತಂಡಗಳ ಪಟ್ಟಿ ಇಲ್ಲಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರೋದು ಚೆನ್ನೈ ಸೂಪರ್ ಕಿಂಗ್ಸ್. ಐದು ಐಪಿಎಲ್ ಪ್ರಶಸ್ತಿಗಳು ಮತ್ತು ಎರಡು ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳನ್ನು ಗೆದ್ದಿರುವ ತಂಡ ಇದಾಗಿದ್ದು, ಐಪಿಎಲ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟು 40.9 ಮಿಲಿಯನ್ ಅಭಿಮಾನಿಗಳನ್ನು ಹೊಂದಿರುವ ಸಿಎಸ್‌ಕೆಗೆ ಹೆಚ್ಚಿನ ಅಭಿಮಾನಿ ಬಳಗ ಇರಲು ಕಾರಣ, ಕ್ಯಾಪ್ಟನ್‌ ಕೂಲ್‌ ಖ್ಯಾತಿಯ ಎಂಎಸ್‌ ಧೋನಿ. 

3 /11

ಮುಂಬೈ ಇಂಡಿಯನ್ಸ್‌: ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವುದು ಮುಂಬೈ ಇಂಡಿಯನ್ಸ್‌ ತಂಡ. ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ಸೂರ್ಯಕುಮಾರ್‌ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾರಂತಹ ದಿಗ್ಗಜರು ಆಡಿರುವ ಮತ್ತು ಆಡುತ್ತಿರುವ ತಂಡ ಇದಾಗಿದೆ. ಇನ್ನೊಂದೆಡೆ ಮುಂಬೈ ಇಂಡಿಯನ್ಸ್‌ ಕೂಡ ಐದು ಐಪಿಎಲ್‌ ಟ್ರೋಫಿಗಳನ್ನು ಗೆದ್ದಿದೆ. ಇನ್ನು ಪ್ರಸ್ತುತ ದತ್ತಾಂಶದ ಪ್ರಕಾರ, ಮುಂಬೈ ಇಂಡಿಯನ್ಸ್‌ ಒಟ್ಟು 36.5 ಮಿಲಿಯನ್‌ಗಿಂತಲೂ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದೆ.

4 /11

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸಾಮಾನ್ಯವಾಗಿ ಐಪಿಎಲ್‌ ಸಂದರ್ಭದಲ್ಲಿ ಆರ್‌ಸಿಬಿ ಫ್ಯಾನ್ಸ್‌ ಹವಾ ಜೋರಾಗಿಯೇ ಇರುತ್ತದೆ. ಇದೇ ಕಾರಣದಿಂದ ಈ ತಂಡಕ್ಕೆ ಅತಿ ಹೆಚ್ಚಿನ ಫ್ಯಾನ್‌ ಫಾಲೋವಿಂಗ್‌ ಇರೋದು ಅಂತ ಭಾವಿಸಲಾಗುತ್ತದೆ. ಆದರೆ ಆರ್‌ಸಿಬಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ವಿರಾಟ್ ಕೊಹ್ಲಿ ವಿಶ್ವದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದು, ಅವರಿಂದಲೇ ಈ ತಂಡಕ್ಕೆ ವಿಶೇಷ ಸ್ಥಾನಮಾನ ಲಭಿಸುತ್ತಿದೆ ಎಂದರೂ ತಪ್ಪಾಗಲ್ಲ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 32.5 ಮಿಲಿಯನ್‌ಗಿಂತಲೂ ಹೆಚ್ಚು ಅಭಿಮಾನಿಗಳಿದ್ದಾರೆ.

5 /11

ಕೋಲ್ಕತ್ತಾ ನೈಟ್ ರೈಡರ್ಸ್:  ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್ ಖಾನ್ ಮುಂದಾಳತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅಂದಹಾಗೆ ಕಳೆದ ಋತುವಿನಲ್ಲಿ ಈ ತಂಡ ಚಾಂಪಿಯನ್‌ ಆಗಿತ್ತು. ಈ ತಂಡಕ್ಕೆ ಒಟ್ಟು 28.6 ಮಿಲಿಯನ್ ಫ್ಯಾನ್‌ ಫಾಲೋವರ್ಸ್‌ ಇದ್ದಾರೆ ಎಂದು ವರದಿಯಾಗಿದೆ.

6 /11

ಡೆಲ್ಲಿ ಕ್ಯಾಪಿಟಲ್ಸ್: JSW ಮತ್ತು GMR ಸ್ಪೋರ್ಟ್ಸ್ ಸಮಾನವಾಗಿ ಒಡೆತನ ಹೊಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಏಕಾಂಗಿಯಾಗಿ ಜಿಎಂಆರ್‌ ಮುಂದಾಳತ್ವದಲ್ಲಿ ಮೆಗಾ ಹರಾಜಿಗೆ ಲಗ್ಗೆ ಇಟ್ಟಿದೆ. ಐಪಿಎಲ್‌ನ ಅತ್ಯಂತ ಹಳೆಯ ಫ್ರಾಂಚೈಸಿಗಳಲ್ಲಿ ಒಂದಾಗಿರುವ ಈ ತಂಡ, 2008ರಲ್ಲೇ ಚೊಚ್ಚಲ ಪ್ರವೇಶ ಮಾಡಿತ್ತು. ವೀರೇಂದ್ರ ಸೆಹ್ವಾಗ್‌, ಶಿಖರ್ ಧವನ್, ಕೆವಿನ್ ಪೀಟರ್ಸನ್‌, ಡೇವಿಡ್ ವಾರ್ನರ್, ಯುವರಾಜ್ ಸಿಂಗ್‌, ರಿಷಬ್ ಪಂತ್ ಸೇರಿದಂತೆ ಹಲವು ದಿಗ್ಗಜರನ್ನು ಹೊಂದಿದ್ದ ಈ ತಂಡ 15.4 ಮಿಲಿಯನ್ ಅಭಿಮಾನಿಗಳನ್ನು ಹೊಂದಿದೆ.

7 /11

ಪಂಜಾಬ್ ಕಿಂಗ್ಸ್: ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ಕಿಂಗ್ಸ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ ತಂಡ ಎಂದು ಇತಿಹಾಸ ಹೇಳುತ್ತದೆ. ಮೋಹಿತ್ ಬರ್ಮನ್, ನೆಸ್ ವಾಡಿಯಾ, ಪ್ರೀತಿ ಜಿಂಟಾ ಮತ್ತು ಕರಣ್ ಪಾಲ್ ಅವರ ಮಾಲೀಕತ್ವದ ಫ್ರಾಂಚೈಸ್ 17 ವರ್ಷಗಳಲ್ಲಿ ಕೇವಲ ಎರಡು ಬಾರಿಯಷ್ಟೇ ಪ್ಲೇಆಫ್‌ ಪ್ರವೇಶ ಮಾಡಿದೆ. ಈ ತಂಡ 15.3 ಮಿಲಿಯನ್ ಅಭಿಮಾನಿಗಳನ್ನು ಹೊಂದಿದೆ.

8 /11

ಸನ್‌ರೈಸರ್ಸ್ ಹೈದರಾಬಾದ್: ಆರೆಂಜ್ ಆರ್ಮಿ ಎಂದು ಪ್ರಸಿದ್ಧವಾಗಿರುವ ಸನ್ ರೈಸರ್ಸ್ ಹೈದರಾಬಾದ್ ಸನ್ ಗ್ರೂಪ್ ಒಡೆತನದಲ್ಲಿದೆ. 2013 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಈ ತಂಡ ಉದ್ಯಮಿ ಕಾವ್ಯಾ ಮಾರನ್‌ ಅವರಿಂದಲೂ ಕೊಂಚ ಫೇಮಸ್‌ ಆಗಿದೆ. ಐಪಿಎಲ್ 2024ರಲ್ಲಿ ಬ್ಯಾಟಿಂಗ್‌ ಮೂಲಕ ವಿಶೇಷ ದಾಖಲೆಗಳನ್ನೇ ಬರೆದಿದ್ದ ಈ ತಂಡ, ಪ್ರಸ್ತುತ 14.3 ಮಿಲಿಯನ್‌ಗಿಂತಲೂ ಹೆಚ್ಚು ಅಭಿಮಾನಿಗಳನ್ನು ಹೊಂದಿದೆ ಎನ್ನಲಾಗಿದೆ.

9 /11

ರಾಜಸ್ಥಾನ್ ರಾಯಲ್ಸ್: ಈ ತಂಡ 2008ರ ಉದ್ಘಾಟನಾ ಋತುವಿನಿಂದಲೂ ಇಂಡಿಯನ್ ಪ್ರೀಮಿಯರ್ ಲೀಗ್‌ನ ಭಾಗವಾಗಿದೆ. ರಾಯಲ್ಸ್ ತಂಡ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ 12.6 ಮಿಲಿಯನ್‌ಗಿಂತಲೂ ಹೆಚ್ಚು ಅಭಿಮಾನಿಗಳನ್ನು ಹೊಂದಿದೆ. 

10 /11

ಗುಜರಾತ್ ಟೈಟಾನ್ಸ್: ಗುಜರಾತ್ ಟೈಟಾನ್ಸ್ ತಂಡ ಐಪಿಎಲ್‌ ಪ್ರವೇಶಿಸಿದ್ದು 2022 ರಲ್ಲಿ. ಆದರೆ ತಮ್ಮ ಚೊಚ್ಚಲ ಪ್ರವೇಶ ಮಾಡಿದಲ್ಲೇ ಮೋಡಿ ಮಾಡಿದ್ದ ಈ ತಂಡ, ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದಲ್ಲಿ ಟ್ರೋಫಿ ಗೆದ್ದಿತ್ತು. ಇನ್ನು ಈ ತಂಡ 5.6 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದೆ.

11 /11

ಲಕ್ನೋ ಸೂಪರ್ ಜೈಂಟ್ಸ್: RPSG ಗ್ರೂಪ್ ಒಡೆತನದ, ಲಕ್ನೋ ಸೂಪರ್ ಜೈಂಟ್ಸ್ 2022ರಲ್ಲಿ IPLಗೆ ಪಾದಾರ್ಪಣೆ ಮಾಡಿತು. 2024ರಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ ಈ ತಂಡದ ಕ್ಯಾಪ್ಟನ್‌ ಆಗಿದ್ದರು. ಆದರೆ ಈ ಬಾರಿ ಮೆಗಾ ಹರಾಜಿಗೂ ಮುನ್ನ ಅವರನ್ನು ರಿಲೀಸ್‌ ಮಾಡಲಾಗಿದ್ದು, ಈ ಸಲ ಡೆಲ್ಲಿ ಕ್ಯಾಪಿಟಲ್ಸ್‌ ಕಡೆಗೆ ಮುಖ ಹಾಕಿದ್ದಾರೆ. ಇನ್ನು ಈ ತಂಡವು ಒಟ್ಟಾರೆ 5.03 ಮಿಲಿಯನ್‌ ಫಾಲೋವರ್ಸ್‌ಗಳನ್ನು ಹೊಂದಿದೆ.