ಚತುರ್ಗ್ರಾಹಿ ಯೋಗದಿಂದ 12 ವರ್ಷದ ಬಳಿಕ ಈ ರಾಶಿಯವರ ಜೀವನದಲ್ಲಿ ತೆರೆಯುವುದು ಅದೃಷ್ಟದ ಬಾಗಿಲು

Chaturgrahi Yoga Effect : 12 ವರ್ಷಗಳ ನಂತರ ಚತುರ್ಗ್ರಾಹಿ ಯೋಗವು ರೂಪುಗೊಳ್ಳುತ್ತಿದೆ.  ಏಪ್ರಿಲ್ 22 ರಂದು  4 ಪ್ರಮುಖ ಗ್ರಹಗಳಾದ ರಾಹು, ಬುಧ, ಸೂರ್ಯ ಮತ್ತು ಗುರು ಮೇಷ ರಾಶಿಯಲ್ಲಿ   ಸಂಯೋಗವಾಗಲಿದೆ. 

Written by - Ranjitha R K | Last Updated : Apr 13, 2023, 12:39 PM IST
  • ಏಪ್ರಿಲ್ 22 ರಂದು, ಮೇಷ ರಾಶಿಯಲ್ಲಿ ಸಂಕ್ರಮಿಸಲಿದ್ದಾನೆ ಗುರು.
  • ಏಪ್ರಿಲ್ 22 ರಿಂದ ರೂಪುಗೊಳ್ಳುವುದು ಚತುರ್ಗ್ರಾಹಿ ಯೋಗ
  • 12 ವರ್ಷಗಳ ನಂತರ ರೂಪುಗೊಳ್ಳುವ ಯೋಗದಿಂದ ಶುಭ ಫಲ
ಚತುರ್ಗ್ರಾಹಿ ಯೋಗದಿಂದ 12 ವರ್ಷದ ಬಳಿಕ ಈ ರಾಶಿಯವರ ಜೀವನದಲ್ಲಿ ತೆರೆಯುವುದು ಅದೃಷ್ಟದ ಬಾಗಿಲು   title=

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಏಪ್ರಿಲ್ 22 ರಂದು, ಅದೃಷ್ಟ ಮತ್ತು ಸಂತೋಷವನ್ನು ನೀಡುವ ಗುರು, ಮೇಷ ರಾಶಿಯಲ್ಲಿ  ಸಂಕ್ರಮಿಸಲಿದ್ದಾನೆ. ರಾಹು ಮತ್ತು ಬುಧ ಈಗಾಗಲೇ  ಮೇಷ ರಾಶಿಯಲ್ಲಿಇದ್ದಾರೆ. ಇದರ ನಡುವೆ ನಾಳೆ ಅಂದರೆ ಏಪ್ರಿಲ್ 14, 2023 ರಂದು, ಸೂರ್ಯನು ಕೂಡಾ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಮೂಲಕ 12 ವರ್ಷಗಳ ನಂತರ, ಏಪ್ರಿಲ್ 22 ರಂದು, ಗುರು ಮೇಷ ರಾಶಿಗೆ ಕಾಲಿಡುತ್ತಿದ್ದಾನೆ. ಈ ರೀತಿಯಾಗಿ, ಏಪ್ರಿಲ್ 22 ರಿಂದ, 4 ಪ್ರಮುಖ ಗ್ರಹಗಳಾದ ರಾಹು, ಬುಧ, ಸೂರ್ಯ ಮತ್ತು ಗುರು ಮೇಷ ರಾಶಿಯಲ್ಲಿ  ಒಟ್ಟಾಗಲಿವೆ. ಇದು ಚತುರ್ಗ್ರಾಹಿ ಯೋಗವನ್ನು ರೂಪಿಸುತ್ತದೆ. ಮೇಷ ರಾಶಿಯಲ್ಲಿ 4 ಗ್ರಹಗಳ ಸಂಯೋಜನೆಯಿಂದ 12 ವರ್ಷಗಳ ನಂತರ ಚತುರ್ಗ್ರಾಹಿ ಯೋಗವು ರೂಪುಗೊಳ್ಳುತ್ತಿದೆ.  

ಚತುರ್ಗ್ರಾಹಿ ಯೋಗವು ಈ ರಾಶಿಯವರ ಅದೃಷ್ಟವನ್ನು ಬೆಳಗಿಸುತ್ತದೆ :  
ಮೇಷ ರಾಶಿ : ಮೇಷ ರಾಶಿಯಲ್ಲಿಯೇ ಚತುರ್ಗ್ರಾಹಿ ಯೋಗವು ರೂಪುಗೊಳ್ಳಲಿದೆ. ಇದು ಈ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಹೊಸ ಅವಕಾಶಗಳನ್ನು  ಕಂಡುಕೊಳ್ಳುತ್ತಾರೆ. ವೃತ್ತಿ ಮತ್ತು ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. 

ಇದನ್ನೂ ಓದಿ :Palmistry: ಅಂಗೈಯಲ್ಲಿ ಈ ರೇಖೆ ಹೊಂದಿದವರ ಸರ್ಕಾರಿ ನೌಕರಿಯ ಭಾಗ್ಯ ಬಲವಾಗಿರುತ್ತದೆ! ನಿಮ್ಮ ಕೈಯಲ್ಲಿದೆಯಾ?

ಮಿಥುನ ರಾಶಿ : ಚತುರ್ಗ್ರಾಹಿ ಯೋಗವು ಮಿಥುನ ರಾಶಿಯವರಿಗೆ ಅಪಾರ ಪ್ರಮಾಣದ ಆರ್ಥಿಕ ಲಾಭವನ್ನು ನೀಡುತ್ತದೆ. ಹೆಚ್ಚುತ್ತಿರುವ ಆದಾಯದಿಂದ ಆರ್ಥಿಕ ಸ್ಥಿತಿ ಸುಧಾರಿಸುವುದು. ಹೂಡಿಕೆಯಿಂದ ಲಾಭವಾಗಲಿದೆ. ಅಪಾಯಕಾರಿ ಹೂಡಿಕೆ ಕೂಡಾ ಈ ಸಮಯದಲ್ಲಿ ಲಾಭವನ್ನು ನೀಡಬಹುದು. 

ಸಿಂಹ ರಾಶಿ : ಸಿಂಹ ರಾಶಿಯವರಿಗೆ ಚತುರ್ಗ್ರಾಹಿ ಯೋಗವು ಯಶಸ್ಸನ್ನು ನೀಡುತ್ತದೆ. ವಿದೇಶ ಪ್ರವಾಸದ ಅವಕಾಶವಿರುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ವೃತ್ತಿ ಜೀವನದಲ್ಲಿ ಅನಿರೀಕ್ಷಿತ ಲಾಭ ದೊರೆಯಲಿದೆ.  

ಕರ್ಕಾಟಕ ರಾಶಿ : ಚತುರ್ಗ್ರಾಹಿ ಯೋಗವು ಕರ್ಕಾಟಕ ರಾಶಿಯವರಿಗೆ ಯಶಸ್ಸನ್ನು ತಂದು ಕೊಡಲಿದೆ. ಉದ್ಯೋಗಸ್ಥರು ಪ್ರಗತಿ ಹೊಂದಬಹುದು. ವ್ಯಾಪಾರಕ್ಕೂ ಇದು ಉತ್ತಮ ಸಮಯ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಗೌರವ ಕೂಡಾ ಹೆಚ್ಚಾಗುತ್ತದೆ.

ಇದನ್ನೂ ಓದಿ : Garud Puran Teachings: ಯಾವ ದಿನಗಳಲ್ಲಿ ಗರ್ಭ ಧರಿಸುವುದು ಉತ್ತಮ, ಗರುಡ ಪುರಾಣ ಈ ಕುರಿತು ಹೇಳುವುದೇನು?

ಧನು ರಾಶಿ : ಚತುರ್ಗ್ರಾಹಿ ಯೋಗವು ಧನು ರಾಶಿಯವರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯವರು  ವೃತ್ತಿ-ವ್ಯಾಪಾರದಲ್ಲಿಯೂ ಲಾಭವನ್ನು ಪಡೆಯುತ್ತಾರೆ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಸಿಗಬಹುದು. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News