Ashadha Maas 2024: ಈಗಾಗಲೇ ಆಷಾಢ ಮಾಸ ಶುರುವಾಗಿದ್ದು, ಇದು ಆಗಸ್ಟ್ ಮೊದಲ ವಾರದವರೆಗೆ ಇರಲಿದೆ. ಶಾಸ್ತ್ರಗಳ ಪ್ರಕಾರ ಆಷಾಢ ಮಾಸದಲ್ಲಿ ಕೆಲವೊಂದು ಕೆಲಸಗಳು ನಿಷಿದ್ಧವಾಗಿವೆ. ಅವುಗಳು ಯಾವವು ಅನ್ನೋದ ಬಗ್ಗೆ ತಿಳಿಯಿರಿ. ಆಷಾಢ ಮಾಸದಲ್ಲಿ ಹೆಣ್ಣು-ಗಂಡು ಸಮಾಗಮವಾಗಬಾರದು ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಕೆಲವರು ಹೊಸದಾಗಿ ಮದುವೆಯಾದ ದಂಪತಿಯನ್ನು ಈ ಸಂದರ್ಭದಲ್ಲಿ ಪ್ರತ್ಯೇಕವಾಗಿರಿಸುತ್ತಾರೆ.
ಆಷಾಢ ಮಾಸದಲ್ಲಿ ತಾಮಸ ಆಹಾರಗಳಾದ ಈರುಳ್ಳಿ, ಬದನೆಕಾಯಿ, ಬೆಳ್ಳುಳ್ಳಿ, ಹೂಕೋಸು, ಉದ್ದಿನಬೇಳೆ ಮುಂತಾದ ಅಹಾರ ವಸ್ತುಗಳನ್ನು ಸೇವಿಸಬಾರದು ಎಂದು ಹೇಳಲಾಗಿದೆ. ಇದಲ್ಲದೆ ಮೀನು, ಮಾಂಸ, ಮದ್ಯಪಾನದಂತಹ ಅಭ್ಯಾಸಗಳಿಂದಲೂ ದೂರವಿರಬೇಕು ಎಂದು ಹೇಳಲಾಗಿದೆ.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರೋ ಮಹಿಳೆಯರು ಹೂವು ಮೂಡಿದ್ರೆ ಏನಾಗುತ್ತೆ!! ಶುಭನಾ? ಅಶುಭನಾ?
ಆಷಾಢ ಮಾಸದಲ್ಲಿ ಸೊಪ್ಪು ತರಕಾರಿಗಳು, ಎಣ್ಣೆ ಪದಾರ್ಥಗಳನ್ನು ಕಡಿಮೆ ಸೇವಿಸಬೇಕಂತೆ. ಮದುವೆ-ಮುಂಜಿಯಂತಹ ಶುಭ ಕಾರ್ಯಗಳನ್ನು ನಡೆಸಲು ಇದು ಯೋಗ್ಯ ಸಮಯವಲ್ಲ. ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಇನ್ನೊಬ್ಬರನ್ನು ನಿಂದಿಸುವುದು, ಜಗಳ ಮಾಡುವುದು ಖಂಡಿತ ಒಳ್ಳೆಯದಲ್ಲ. ಅದೇ ರೀತಿ ಮನೆಗೆ ಬಂದ ಅತಿಥಿಗಳನ್ನು ಬರಿಗೈಯಲ್ಲಿ ಕಳುಹಿಸಬಾರದಂತೆ.
ಆಷಾಢ ಮಾಸದಲ್ಲಿ ಏನು ಮಾಡಬೇಕು?
ಆಷಾಢ ಮಾಸದಲ್ಲಿ ಮಹಾವಿಷ್ಣು, ದುರ್ಗಾದೇವಿಯ ಆರಾಧನೆ, ಪಿತೃಗಳ ಪೂಜೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ನಿಮಗೆ ಪುಣ್ಯವು ಪ್ರಾಪ್ತಿಯಾಗುತ್ತದೆ. ಆಷಾಢ ಮಾಸ ತೀರ್ಥಯಾತ್ರೆಗೆ ಹೇಳಿ ಮಾಡಿಸಿದ ಸಮಯ. ಅದೇ ರೀತಿ ನಿಮ್ಮ ಬಳಿ ಬೇಡಿಕೊಂಡು ಬಂದವರಿಗೆ ದಾನ ಮಾಡಿದರೆ ಅತ್ಯಂತ ಫಲಪ್ರದವಾಗಿರುತ್ತದೆ. ಈ ಸಮಯದಲ್ಲಿ ಪ್ರತಿನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ತುಳಸಿ ಪೂಜೆ ಮಾಡಿದರೆ ಶ್ರೇಷ್ಠವೆಂದು ಹೇಳಲಾಗಿದೆ.
ಇದನ್ನೂ ಓದಿ: ದಿನನಿತ್ಯ ಬಳಕೆಯ ಸಾಸಿವೆಯಿಂದಾಗುವ ಪ್ರಯೋಜನಗಳೇನು ಗೊತ್ತಾ ?!! ತಿಳಿಯಿರಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.