ಬೆಂಗಳೂರು: ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ವರ್ಷ, 18 ಫೆಬ್ರವರಿ 2023, ಶನಿವಾರದಂದುಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಸನಾತನ ಧರ್ಮದಲ್ಲಿ ಮಹಾ ಶಿವರಾತ್ರಿಯ ದಿನವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಇದು ಶಿವ ಮತ್ತು ತಾಯಿ ಪಾರ್ವತಿಯ ವಿವಾಹದ ದಿನವಾಗಿದೆ. ಈ ಬಾರಿಯ ಶಿವರಾತ್ರಿ ಇನ್ನೂ ವಿಶೇಷವಾಗಿದೆ. ಏಕೆಂದರೆ, ಈ ದಿನ ಅಪರೂಪದ ಯೋಗಗಳು ರೂಪುಗೊಳ್ಳುತ್ತಿವೆ. ಸುಮಾರು ಮೂರು ದಶಕಗಳ ಬಳಿಕ ಇಂತಹ ಯೋಗ ರೂಪುಗೊಳ್ಳುತ್ತಿದ್ದು, ಶಿವರಾತ್ರಿಯಂದು ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಶನಿ ಸಾಡೇ ಸಾತಿ, ಶನಿ ಧೈಯಾದಿಂದ ಮುಕ್ತಿ ದೊರೆಯುತ್ತದೆ ಎಂದು ಹೇಳಲಾಗುತ್ತಿದೆ.
ವಾಸ್ತವವಾಗಿ, ಮಹಾಶಿವರಾತ್ರಿಯ ದಿನದಂದು ಶನಿಯು ತನ್ನ ರಾಶಿಚಕ್ರ ಕುಂಭದಲ್ಲಿ ಇರುತ್ತಾನೆ. ಈ ದಿನ ಶನಿ ಪ್ರದೋಷ ಕೂಡ ಇದೆ. ಇಂತಹ ಪರಿಸ್ಥಿತಿಯಲ್ಲಿ ಶನಿ ಪ್ರದೋಷ ಮತ್ತು ಮಹಾಶಿವರಾತ್ರಿಯ ಅದ್ಭುತ ಸಂಯೋಜನೆ ಇರಲಿದೆ. ಈ ಸಮಯದಲ್ಲಿ ಕೈಗೊಳ್ಳುವ ಕೆಲವು ಪರಿಹಾರಗಳು ನಿಮಗೆ ಶನಿ ಸಾಡೇ ಸಾತಿ, ಶನಿ ಧೈಯಾ, ಶನಿ ದೋಷದಿಂದ ಮುಕ್ತಿಯನ್ನು ನೀಡಬಲ್ಲವು ಎಂಬ ನಂಬಿಕೆ ಇದೆ. ಹಾಗಿದ್ದರೆ, ಮಹಾ ಶಿವರಾತ್ರಿಯ ದಿನ ಶನಿ ದೋಷ ಪರಿಹಾರಕ್ಕೆ ಏನು ಮಾಡಬೇಕು ಎಂದು ತಿಳಿಯಿರಿ...
ಶನಿ ದೋಷದಿಂದ ಪರಿಹಾರ ಪಡೆಯಲು ಶಿವರಾತ್ರಿಯಂದು ಈ ರೀತಿ ಶಿವನನ್ನು ಆರಾಧಿಸಿ:
* ಮಹಾಶಿವರಾತ್ರಿಯಂದು ಶನಿ ದೋಷ ನಿವಾರಣೆಗೆ ಕಪ್ಪು ಎಳ್ಳನ್ನು ಗಂಗಾಜಲದಲ್ಲಿ ಹಾಕಿ ಶಿವಲಿಂಗಕ್ಕೆ ಅರ್ಪಿಸಿ. ಅಭಿಷೇಕ ಮಾಡುವಾಗ ಶಿವ ಸಹಸ್ರನಾಮವನ್ನು ಪಠಿಸಿ. ಹೀಗೆ ಮಾಡುವುದರಿಂದ ಶನಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
ಇದನ್ನೂ ಓದಿ- ಈ ತಿಂಗಳಾಂತ್ಯದಿಂದ ಕೆಲವು ರಾಶಿಯವರ ಜೀವನದಲ್ಲಿ ಭಾಗ್ಯೋದಯ ಉಂಟುಮಾಡಲಿದ್ದಾನೆ ಬುಧ
* ಶನಿಯ ವಕ್ರದೃಷ್ಟಿಯಿಂದ ಪಾರಾಗಲು ಮಹಾಶಿವರಾತ್ರಿಯಂದು ಬೆಳಿಗ್ಗೆ ಶುಭ ಲಗ್ನದಲ್ಲಿ ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸಿ. ಶಿವ ಚಾಲೀಸಾವನ್ನು ಪಠಿಸಿ.
* ಶನಿ ದೇವನು ಶಿವನ ಭಕ್ತ. ಹಾಗಾಗಿ, ಮಹಾ ಶಿವರಾತ್ರಿಯಂದು ಶಿವಲಿಂಗದ ಮೇಲೆ ಶನಿಯ ಪ್ರಿಯವಾದ ಶಮಿಯ ಹೂಗಳನ್ನು ಅರ್ಪಿಸುವುದರಿಂದ ಅರ್ಪಿಸುವುದರಿಂದ ಸಾಡೇ ಸಾತಿ ಶನಿ ಕಾಟದಿಂದ ಮುಕ್ತಿ ದೊರೆಯುತ್ತದೆ.
ಇದನ್ನೂ ಓದಿ- ಹಣಕಾಸಿನ ಮುಗ್ಗಟ್ಟಿನಿಂದ ಬೇಸತ್ತಿದ್ದೀರಾ? ಶಿವರಾತ್ರಿಯಂದು ಈ ಪರಿಹಾರ ಕೈಗೊಳ್ಳುವುದರಿಂದ ಸಿಗುತ್ತೆ ಖಚಿತ ಪರಿಹಾರ
* ಮಹಾಶಿವರಾತ್ರಿಯಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ಈ ದಿನ ನಿಮ್ಮ ಕೈಲಾದದ್ದನ್ನು ಅಗತ್ಯವಿರುವವರಿಗೆ ದಾನ ಮಾಡುವುದರಿಂದಲೂ ಶನಿ ದೋಷದಿಂದ ಪರಿಹಾರ ದೊರೆಯಲಿದೆ ಎಂಬ ನಂಬಿಕೆ ಇದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ