Magh Purnima 2024: ಮಾಘ ಹುಣ್ಣಿಮೆಯಂದು ಬೆಳಿಗ್ಗೆ ಈ ಕೆಲಸ ಮಾಡಿದರೆ ತುಂಬುತ್ತೆ ಖಜಾನೆ

Magh Purnima 2024: ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಮಾಘ ಮಾಸವನ್ನು ಪವಿತ್ರ ಮಾಸಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಮಾಘ ಮಾಸದ ಹುಣ್ಣಿಮೆಯಲ್ಲಿ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಆರ್ಥಿಕ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Feb 23, 2024, 09:05 AM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾಘ ಮಾಸದ ಹುಣ್ಣಿಮೆಯಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡಿ ನಿಮ್ಮ ಕೈಲಾದಷ್ಟೂ ಬಡಬಗ್ಗರಿಗೆ ದಾನ ಮಾಡಿ.
  • ಇದರಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗಿ ಹಣದ ಹರಿವು ಹೆಚ್ಚಾಗಲಿದೆ
  • ನಿಮ್ಮ ಜೀವನದಲ್ಲಿ ಎದುರಾಗಿರುವ ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ ಎಂದು ಹೇಳಲಾಗುತ್ತದೆ.
Magh Purnima 2024: ಮಾಘ ಹುಣ್ಣಿಮೆಯಂದು ಬೆಳಿಗ್ಗೆ ಈ ಕೆಲಸ ಮಾಡಿದರೆ ತುಂಬುತ್ತೆ ಖಜಾನೆ  title=

Magh Purnima 2024: ಹಿಂದೂ ಕ್ಯಾಲೆಂಡರ್ ಪ್ರಕಾರ,  ಪ್ರತಿ ತಿಂಗಳು ಹುಣ್ಣಿಮೆಯ ತಿಥಿ ಬರುತ್ತದೆ. ಈ ರೀತಿಯಾಗಿ ಒಂದು ವರ್ಷದಲ್ಲಿ ಒಟ್ಟು 12 ಹುಣ್ಣಿಮೆಗಳು ಬರುತ್ತವೆ. ಪ್ರತಿ ಹುಣ್ಣಿಮೆಗೂ ಅದರದೇ ಆದ ಮಹತ್ವವಿದೆ. ಆದಾಗ್ಯೂ, ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ,  ಕಾರ್ತಿಕ, ವೈಶಾಖ, ಶ್ರಾವಣ ಮತ್ತು ಮಾಘ ಮಾಸದ ಹುಣ್ಣಿಮೆಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಅದರಲ್ಲೂ ಮಾಘ ಮಾಸದಲ್ಲಿ ಬರುವ ಮಾಘಿ ಹುಣ್ಣಿಮೆಗೆ ವಿಶೇಷ ಮಹತ್ವವಿವೆ. 

ಈ ವರ್ಷ ಫೆಬ್ರವರಿ 24 ರಂದು ಮಾಘ ಹುಣ್ಣಿಮೆಯನ್ನು ಆಚರಿಸಲಾಗುತ್ತಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮಾಘ ಮಾಸದ ಹುಣ್ಣಿಮೆಯಂದು ದೇವ-ದೇವತೆಗಳು ಸ್ವತಃ ಭೂಮಿಗೆ ಬರುತ್ತಾರೆ ಎಂದು ಹೇಳಲಾಗುತ್ತದೆ. ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಿ, ಕೆಲವು ಪರಿಹಾರಗಳನ್ನು ಕೈಗೊಳುವುದರಿಂದ ಸಂಪತ್ತಿನ ದೇವತೆ ತಾಯಿ ಲಕ್ಷ್ಮಿ ದೇವಿಯನ್ನು ಮೆಚ್ಚಿಸಿ ಆರ್ಥಿಕ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ. ಇದಕ್ಕಾಗಿ ಮಾಘಿ ಹುಣ್ಣಿಮೆಯಲ್ಲಿ ಏನು ಮಾಡಬೇಕು? ಏನು ಮಾಡಬಾರದು ಎಂದು ತಿಳಿದಿರುವುದು ಅಗತ್ಯವಾಗಿದೆ. 

ಮಾಘಿ ಹುಣ್ಣಿಮೆಯಲ್ಲಿ ಏನು ಮಾಡಬೇಕು? 
ಧಾರ್ಮಿಕ ನಂಬಿಕೆಗಳ ಪ್ರಕಾರ, ಮಾಘಿ ಹುಣ್ಣಿಮೆಯ ದಿನದಂದು ಸ್ನಾನ, ದಾನ ಮತ್ತು ಜಪ ಮಾಡುವುದರಿಂದ ವಿಶೇಷ ಫಲ ಪ್ರಾಪ್ತಿಯಾಗುತ್ತದೆ. ಅದರಲ್ಲೂ, ಮಾಘ ಮಾಸದ ಹುಣ್ಣಿಮೆಯ ದಿನ ಮುಂಜಾನೆ ಕೆಲವು ಕೆಲಸಗಳನ್ನು ಮಾಡುವುದರಿಂದ ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ದೊರೆತು, ಸಂಪತ್ತಿನಿಂದ ಖಜಾನೆ ತುಂಬಲಿದೆ ಎಂದು ನಂಬಲಾಗಿದೆ. 

ಇದನ್ನೂ ಓದಿ- Mangal-Shukra Yuti: ಮಂಗಳ ಶುಕ್ರ ಯುತಿಯಿಂದ ಮೂರು ರಾಶಿಯವರಿಗೆ ಬಂಗಾರದ ಸಮಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾಘ ಮಾಸದ ಹುಣ್ಣಿಮೆಯಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡಿ ನಿಮ್ಮ ಕೈಲಾದಷ್ಟೂ ಬಡಬಗ್ಗರಿಗೆ ದಾನ ಮಾಡಿ. ಇದರಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗಿ ಹಣದ ಹರಿವು ಹೆಚ್ಚಾಗಲಿದ್ದು  ನಿಮ್ಮ ಜೀವನದಲ್ಲಿ ಎದುರಾಗಿರುವ ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ ಎಂದು ಹೇಳಲಾಗುತ್ತದೆ. 

ಇದಲ್ಲದೆ, ಮಾಘಿ ಹುಣ್ಣಿಮೆಯ ದಿನ ಪುಣ್ಯ ಸ್ನಾನದ ಬಳಿಕ ಪೂರ್ವಜರ ಹೆಸರಿನಲ್ಲಿ ಪೂಜೆ ಸಲ್ಲಿಸುವುದರಿಂದ ಲಕ್ಷ್ಮೀನಾರಾಯಣನ ಆಶೀರ್ವಾದದಿಂದ ಸುಖ-ಸಮೃದ್ಧಿ ಹೆಚ್ಚಾಗಲಿದೆ. ಅಂತಹ ಮನೆಯಲ್ಲಿ ಹಣಕಾಸಿನ ಸಮಸ್ಯೆಯೇ ಇರುವುದಿಲ್ಲ ಎಂದು ನಂಬಲಾಗಿದೆ. 

ಮಾಘಿ ಹುಣ್ಣಿಮೆಯಲ್ಲಿ ಮರೆತೂ ಈ ತಪ್ಪುಗಳನ್ನು ಮಾಡಬಾರದು!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾಘ ಮಾಸದ ಹುಣ್ಣಿಮೆ ದಿನದಂದು ಕೆಲವು ಕಾರ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಈ ಕೆಲಸಗಳನ್ನು ಮಾಡುವುದರಿಂದ ಇದು ಜನರ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. ಅವುಗಳೆಂದರೆ... 

ಈ ಸಸ್ಯಗಳ ಎಲೆಗಳನ್ನು ಕೀಳಬಾರದು: 
ಹುಣ್ಣಿಮೆಯ ದಿನದಂದು ತುಳಸಿ, ಅಮಲ, ಬಾಳೆ, ಪೀಪಲ್ ಎಲೆಗಳನ್ನು ಕೀಳಬಾರದು. ಈ ಸಸ್ಯಗಳಲ್ಲಿ ಭಗವಾನ್ ವಿಷ್ಣು ನೆಲೆಸಿರುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ, ಹುಣ್ಣಿಮೆಯಲ್ಲಿ ಈ ಸಸ್ಯಗಳ ಎಲೆಗಳನ್ನು ಕೀಳುವುದರಿಂದ ವಿಷ್ಣುವಿನ ಕೋಪಕ್ಕೆ ತುತ್ತಾಗಬಹುದು ಎನ್ನಲಾಗುತ್ತದೆ. 

ಇದನ್ನೂ ಓದಿ- Surya Shani Yuti: ಕುಂಭ ರಾಶಿಯಲ್ಲಿ ಒಟ್ಟಿಗೆ ಸೇರಲಿದ್ದಾರೆ ಸೂರ್ಯ-ಶನಿ, ನಿಮ್ಮ ಮೇಲೆ ಏನು ಪರಿಣಾಮ

ಕಪ್ಪು ಬಟ್ಟೆ: 
ಹುಣ್ಣಿಮೆಯ ದಿನ ಕಪ್ಪು ಬಣ್ಣದ ವಸ್ತ್ರ ಧರಿಸಬೇಡಿ. ಇದರಿಂದ ಜೀವನದ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಬಹುದು. 

ಕೂದಲು, ಉಗುರು ಕತ್ತರಿಸಬೇಡಿ: 
ಹುಣ್ಣಿಮೆ ದಿನ ಅಪ್ಪಿತಪ್ಪಿಯೂ ಕೂದಲು, ಉಗುರುಗಳನ್ನು ಕತ್ತರಿಸಬಾರದು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಹಣಕಾಸಿನ ಮುಗ್ಗಟ್ಟುಗಳು ಹೆಚ್ಚಾಗಬಹುದು ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News