ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿ ದೇವನು ಎರಡೂವರೆ ವರ್ಷಗಳಲ್ಲಿ ರಾಶಿಯನ್ನು ಬದಲಾಯಿಸುತ್ತಾನೆ. 2023ರಲ್ಲಿ, ಶನಿಯು ತನ್ನ ರಾಶಿಯನ್ನು ಬದಲಿಸಿ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. 2024 ರಲ್ಲಿಯೂ ಶನಿಯು ಕುಂಭ ರಾಶಿಯಲ್ಲಿಯೇ ಸಂಚರಿಸುತ್ತಾನೆ. ತನ್ನ ಮೂಲ ತ್ರಿಕೋನ ರಾಶಿ ಕುಂಭದಲ್ಲಿ ಸಂಚರಿಸುವಾಗ ಶನಿಯು ತನ್ನ ಪಾದಗಳನ್ನು ಬದಲಾಯಿಸುತ್ತಾನೆ. ಬೆಳ್ಳಿಯ ಪಾದಗಳ ಮೇಲೆ ನಡೆಯಲು ಪ್ರಾರಂಭಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಶನಿಯ ಬೆಳ್ಳಿ ಪಾದವನ್ನು ಮಂಗಳಕರ ಎಂದು ಹೇಳಲಾಗುತ್ತದೆ. ಶನಿಯ ಸ್ಥಾನ ಬದಲಾವಣೆ ಮತ್ತು ಬೆಳ್ಳಿಯ ಪಾದದ ಮೇಲಿನ ನಡಿಗೆಯು ರಾಶಿ ಜಾತಕದ ಮೇಲೆ ಬಹಳವಾಗಿ ಪರಿಣಾಮ ಬೀರುತ್ತದೆ. ಅದರಲ್ಲಿಯೂ ಶನಿಯ ಬೆಳ್ಳಿ ಪಾದವು 3 ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ರಾಶಿಯವರು ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಸಾಕಷ್ಟು ಸಂಪತ್ತನ್ನು ಗಳಿಸುತ್ತಾರೆ.
ಶನಿಯಿಂದ ಮಂಗಳಕರ ಫಲಿತಾಂಶಗಳನ್ನು ಪಡೆಯುವ ರಾಶಿಯವರು :
ಕರ್ಕಾಟಕ ರಾಶಿ: ಶನಿದೇವನ ಬೆಳ್ಳಿಯ ಪಾದದ ಮೇಲಿನ ನಡಿಗೆಯು ಕರ್ಕಾಟಕ ರಾಶಿಯವರಿಗೆ ಮಂಗಳಕರವಾಗಿ ಪರಿಣಮಿಸಲಿದೆ. ಕೆಲಸ ಮಾಡುವವರಿಗೆ ಬಡ್ತಿ ಸಿಗಬಹುದು. ದೊಡ್ಡ ಸ್ಥಾನಕ್ಕೆ ಏರುವ ಎಲ್ಲಾ ಅವಕಾಶವಿದೆ. ಖ್ಯಾತಿ ಮತ್ತು ಆದಾಯವೂ ಹೆಚ್ಚಾಗುತ್ತದೆ. ಇದಲ್ಲದೆ, ಕಾಲಕಾಲಕ್ಕೆ ಅನಿರೀಕ್ಷಿತ ಹಣದ ಲಾಭವಾಗುವುದು. ವ್ಯಾಪಾರ ವರ್ಗದವರು ಸಾಕಷ್ಟು ಲಾಭ ಗಳಿಸುತ್ತಾರೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ಯಾವುದೇ ದೊಡ್ಡ ಆಸೆ ಈಡೇರಬಹುದು.
ಇದನ್ನೂ ಓದಿ : ಉಚ್ಛ ರಾಜಯೋಗದಿಂದ ಈ ರಾಶಿಯವರಿಗೆ ಸುವರ್ಣಯುಗ ! ಹೊಸ ವರ್ಷ ಇವರ ಪಾಲಿಗೆ ಹರಿಸುವುದು ಸಂತಸದ ಹೊನಲು
ತುಲಾ ರಾಶಿ : ಬೆಳ್ಳಿಯ ಪಾದದ ಮೇಲೆ ಶನಿಯು ಸಂಚರಿಸುವುದರಿಂದ ತುಲಾ ರಾಶಿಯವರಿಗೆ ಹೆಚ್ಚಿನ ಲಾಭ ದೊರೆಯಲಿದೆ. ಈ ಜನರು ಹೊಸ ಉದ್ಯೋಗವನ್ನು ಪಡೆಯುತ್ತಾರೆ. ಹೊಸ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಅವಕಾಶವಿದೆ. ಹೂಡಿಕೆಯಿಂದ ಲಾಭವಾಗಲಿದೆ. ನಿಮ್ಮ ಜೀವನ ಸಂಗಾತಿಯಿಂದ ಸಾಕಷ್ಟು ಪ್ರೀತಿ ಮತ್ತು ಗೌರವ ಸಿಗುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಪ್ರತಿಯೊಂದು ಕ್ಷೇತ್ರದಲ್ಲೂ ಲಾಭ ಇರುವುದು.
ಮೀನ ರಾಶಿ : 2024ರಲ್ಲಿ ಬೆಳ್ಳಿ ಪಾದದ ಮೇಲೆ ಶನಿಯ ಸಂಚಾರವು ಮೀನ ರಾಶಿಯವರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಇವರಿಗೆ ಬಡ್ತಿಯೊಂದಿಗೆ ಹೊಸ ಉದ್ಯೋಗ ಸಿಗಲಿದೆ. ವೇತನದಲ್ಲಿ ದೊಡ್ಡ ಮಟ್ಟದ ಹೆಚ್ಚಳವಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಆರ್ಥಿಕ ಲಾಭವಿರುತ್ತದೆ. ಹೂಡಿಕೆಯಿಂದ ಲಾಭವಾಗಲಿದೆ. ವಿದೇಶಕ್ಕೆ ಹೋಗುವ ಕನಸು ನನಸಾಗಬಹುದು.
ಇದನ್ನೂ ಓದಿ : Dhanu Sankranti: ಜಾತಕದಲ್ಲಿ ಸೂರ್ಯನನ್ನು ಬಲಪಡಿಸಲು ಧನು ಸಂಕ್ರಾಂತಿಯಂದು ತಪ್ಪದೇ ಮಾಡಿ ಈ ಕೆಲಸ
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.