ನವದೆಹಲಿ: ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (Sachin Tendulkar) ಹೆಸರು ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರದೇ ಇರುವುದಿಲ್ಲ. ಅವರನ್ನು ಭಾರತದ ಕ್ರಿಕೆಟ್ ದೇವರು ಎಂದೇ ಕರೆಯುತ್ತಾರೆ. ಸಚಿನ್‌ಗೆ ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ.
ತಮ್ಮ 16ನೇ ವಯಸ್ಸಿನಲ್ಲಿ ಕ್ರಿಕೆಟ್ ಪಯಣ ಆರಂಭಿಸಿದ ಸಚಿನ್ ತೆಂಡೂಲ್ಕರ್ ತಮ್ಮ 24 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಹಲವು ಶತಕಗಳನ್ನು ಬಾರಿಸಿದ್ದು, ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಕ್ರಿಕೆಟ್ ದಿಗ್ಗಜ ನಿವೃತ್ತಿಯ ನಂತರ ಇದೀಗ ಅತ್ಯಂತ ಶಾಂತಿಯುತ ಜೀವನ ನಡೆಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಆ್ಯಕ್ಟಿವ್ ಆಗಿರುವುದು ಸೇರಿದಂತೆ ಹಲವು ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ.
Always a treat to witness these magnificent big cats in the wild!
We have to do all that it takes to protect them as the existence of our jungles depends on them.#InternationalTigerDay #throwback pic.twitter.com/ifBhg6A1ll— Sachin Tendulkar (@sachin_rt) July 29, 2021
ಈ ಹಿನ್ನೆಲೆಯಲ್ಲಿ ಸಚಿನ್ ತೆಂಡೂಲ್ಕರ್ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಹುಲಿ ದಿನಾಚರಣೆ (ಜುಲೈ 29)ದಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದರು. ಇದು ಭಾರತದ ತಡೋಬಾ-ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ( Tadoba Andhari Tiger Reserve) ಸಫಾರಿ ಮಾಡುವಾಗ ತೆಗೆದ ಫೋಟೋ. ಈ ಪೋಟೋ ಕ್ಲಿಕ್ಕಿಸುವ ಸಮಯದಲ್ಲಿ ಅನಿರೀಕ್ಷಿತ ಅತಿಥಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ. ಅವರೂ ಸಹ ಚಾಯಾಸಿತ್ರದಲ್ಲಿ ಸೆರೆಯಾಗಿದ್ದಾರೆ.
ಸಚಿನ್ ಶೇರ್ ಮಾಡಿರುವ ಈ ಫೋಟೋವನ್ನು (Sachin Tendulkar) ಸೂಕ್ಷ್ಮವಾಗಿ ಗಮನಿಸಿದರೆ.. ದೂರದ ಹುಲ್ಲಿನಲ್ಲಿ ಹುಲಿಯೊಂದು ಅಡಗಿಕೊಂಡಿದೆ. ಸುಮ್ಮನೆ ನೋಡಿದಾಗ ಅಲ್ಲಿ ಹುಲಿ ಇರುವುದು ಕಾಣುವುದಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ವ್ಯಾಘ್ರನ ದರ್ಶನವಾಗುತ್ತದೆ.
ಇದನ್ನೂ ಓದಿ: Minimum Age For Marriage:ಮಹಿಳೆಯರ ಮದುವೆ ವಯಸ್ಸು18 ರಿಂದ 21 ಕ್ಕೆ ಏರಿಸಲು ಸಂಪುಟ ಅನುಮೋದನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.