ನವದೆಹಲಿ: ಭಾರತದ ವಿರಾಟ್ ಕೊಹ್ಲಿ ಆಟಕ್ಕೆ ಮಾರು ಹೋಗದವರು ಯಾರಿಲ್ಲ ಹೇಳಿ, ಇಡೀ ವಿಶ್ವವೇ ಈ ದೆಹಲಿ ಮೂಲಕದ ಆಟಗಾರನಿಗೆ ಬೆಕ್ಕಸ ಬೆರಗಾಗಿದೆ.
ಆದಾಗ್ಯೂ, ವಿರಾಟ್ ಕೊಹ್ಲಿಯನ್ನು ಇತರ ಜಾಗತಿಕ ಆಟಗಾರರಾದ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ನ್ಯೂಜಿಲ್ಯಾಂಡಿನ ಕೆನ್ ವಿಲಿಯಮ್ಸನ್ ರೊಂದಿಗೆ ಹೋಲಿಕೆ ಮಾಡುತ್ತಾರೆ.
ಆದರೆ ಈಗ ವಿಷಯ ಏನಪ್ಪಾ ಅಂದ್ರೆ, ಕೊಹ್ಲಿ ಆಟಕ್ಕೆ ಮನಸೋತಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಯಿಸಿರುವ ಅವರು "ಜಗತ್ತಿನಾದ್ಯಂತ ಕೆಲವು ಅತ್ಯುತ್ತಮ ಆಟಗಾರರನ್ನು ನೋಡಿ ಅವರಂತೆ ಆಡಲು ಪ್ರಯತ್ನಿಸುತ್ತೇನೆ. ಅದರಲ್ಲೂ ವಿರಾಟ್ ಕೊಹ್ಲಿ ಸ್ಪಿನ್ ದಾಳಿಯನ್ನು ಎದುರಿಸುವ ರೀತಿ ಮತ್ತು ಚೆಂಡನ್ನು ಅವರು ಆಫ್ ಸೈಡ್ ಗೆ ತಳ್ಳುವ ರೀತಿಯನ್ನು ನಾನು ಹಲವಾರು ಸಾರಿ ಪ್ರಯತ್ನಿಸಿದ್ದೇನೆ. ಇವರು ಎಲ್ಲಾ ರೀತಿಯಿಂದಲೂ ಜಗತ್ತಿನಲ್ಲಿನ ಶ್ರೇಷ್ಟ ಆಟಗಾರರು ಎಂದು ಅವರು ಪ್ರತಿಕ್ರಯಿಸಿದ್ದಾರೆ.