ಬ್ಯಾಂಕಾಕ್ : ಭಾರತದ ಬ್ಯಾಡ್ಮಿಂಟನ್ ಸೆನ್ಸೇಷನ್ ಸೈನಾ ನೆಹ್ವಾಲ್ ಕೊವಿಡ್ ಪಾಸಿಟಿವ್ ಆಗಿರುವ ಸುದ್ದಿ ಮತ್ತೊಂದು ತಿರುವು ಪಡೆದುಕೊಂಡಿದೆ. ಈ ಸಂಬಂಧ ಸೃಷ್ಟಿಯಾಗಿದ್ದ ಗೊಂದಲ ಇದೀಗ ತಿಳಿಗೊಂಡಿದೆ. ಭಾರತದ ಬ್ಯಾಡ್ಮಿಂಟನ್ ಆಟಗಾರರು ಕೊವಿಡ್ ಪಾಸಿಟಿವ್ ಆಗಿರುವ ಸುದ್ದಿ ಮಂಗಳವಾರ ಸಂಜೆ ಪ್ರಕಟಗೊಂಡಿತ್ತು.
ಥೈಲ್ಯಾಂಡ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಬ್ಯಾಂಕಾಕ್ ಗೆ ಆಗಮಿಸಿದ್ದ ಸೈನಾ ನೆಹ್ವಾಲ್ (Saina Nehwal) ಮತ್ತು ಹೆಚ್ ಎಸ್ ಪ್ರಣಯ್ ಅವರ ಮೂರನೇ ಪರೀಕ್ಷೆ ವೇಳೆ ಕೊವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂಬುದು ಸುದ್ದಿಯಾಗಿತ್ತು. ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ (BWF)ಈ ಸುದ್ದಿಯನ್ನು ಮೊದಲು ಪ್ರಕಟಿಸಿತ್ತು. ಈ ಕಾರಣದಿಂದ ಸೈನಾ ಅವರ ಪತಿ ಪಾರುಪಳ್ಳಿ ಕಶ್ಯಪ್ ಅವರನ್ನೂ ಟೂರ್ನಿಯಿಂದ ಹೊರಗಿರಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ಆಟಗಾರರು ಬ್ಯಾಂಕಾಕ್ ಆಸ್ಪತ್ರೆಯಲ್ಲಿ ಕ್ವಾರಂಟೇನ್ ನಲ್ಲಿ ಕಳೆಯಬೇಕಾದ ಸನ್ನಿವೇಶ ಸೃಷ್ಟಿಯಾಗಿತ್ತು.
ಇದನ್ನೂಓದಿ : ಥೈಲ್ಯಾಂಡ್ ಓಪನ್ ಆಡಲು ಹೋದ ಸೈನಾ ನೆಹ್ವಾಲ್ Corona Positive
ಇದೀಗ ಈ ಸುದ್ದಿ ಮತ್ತೊಂದು ತಿರುವು ಪಡೆದುಕೊಂಡಿದೆ. ಭಾರತೀಯ ಬ್ಯಾಡ್ಮಿಂಟನ್ ಫೆಡರೇಶನ್ (BAI) ಈ ವಿಚಾರದಲ್ಲಿ ಮತ್ತೊಂದು ಸುದ್ದಿ ನೀಡಿದ್ದು, ಸೈನಾ ಮತ್ತು ಹೆಚ್ ಎಸ್ ಪ್ರಣಯ್ ಅವರಿಗೆ ಕರೋನಾ ಸೋಂಕು (Coronavirus) ಬಂದಿಲ್ಲ. ಆ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದೆ. ಸೈನಾ ಬುಧವಾರ ಕಣಕ್ಕಿಳಿಯಲಿದ್ದಾರೆ ಎಂಬುದನ್ನೂ ತಿಳಿಸಿದೆ. ಸೈನಾ ನೆಹ್ವಾಲ್ ಪತಿ ಕಶ್ಯಪ್ ಕೂಡಾ ಬುಧವಾರ ಸ್ಪರ್ಧೆ ಆರಂಭಿಸಲಿದ್ದಾರೆ ಎಂಬುದೂ ದೃಢ ಪಟ್ಟಿದೆ.
Shuttlers @NSaina and @PRANNOYHSPRI have tested negative in the final test and have been given green flag to participate in the tournament. Timely intervention of BAI ensured with all support from BWF and other stakeholders have made this possible.
Detailed statement below pic.twitter.com/tMzB3BmvRm
— BAI Media (@BAI_Media) January 12, 2021
ಸೈನಾ ಅವರಿಗೆ ಮೊದಲ ಸುತ್ತಿನಲ್ಲಿ ವಾಕೋವರ್ ಸಿಕ್ಕಿತ್ತು. ಕಶ್ಯಪ್ ಅವರಿಗೂ ಮೊದಲ ಸುತ್ತಿನ ವಾಕೋವರ್ ಲಭಿಸಿದೆ. ಸೈನಾ ನೆಹ್ವಾಲ್ ಮತ್ತು ಹೆಚ್ ಎಸ್ ಪ್ರಣಯ್ (H S Prannoy) ಅವರು ಎರಡನೇ ಸಲ ಕೊವಿಡ್ (COVID-19) ಪಾಸಿಟಿವ್ ಗೆ ತುತ್ತಾಗಿದ್ದು ಆತಂಕ ಸೃಷ್ಟಿಸಿತ್ತು. ಕಳೆದ ತಿಂಗಳು ಶಟ್ಲರ್ ಗುರುಸಾಯಿದತ್ ಮದುವೆಯಲ್ಲಿ ಪಾಲ್ಗೊಂಡ ವೇಳೆ ಪಾಸಿಟಿವ್ ದೃಢಪಟ್ಟಿತ್ತು.
ಇದನ್ನೂಓದಿ : BJP ಸೇರಿದ ಖ್ಯಾತ ಬ್ಯಾಡ್ಮಿಂಟನ್ ತಾರೆ
ಇದೇ ವೇಳೆ ಭಾರತೀಯ ಬ್ಯಾಡ್ಮಿಂಟನ್ ಸ್ಟಾರ್ ಆಟಗಾರರಾದ ಕೆ ಶ್ರೀಕಾಂತ್ (K Srikanth) ಥೈಲ್ಯಾಂಡ್ ಕೊವಿಡ್ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇಲ್ಲಿ ವ್ಯವಸ್ಥೆಯೇ ಸರಿ ಇಲ್ಲ ಎಂದು ಟೀಕಿಸಿದ್ದಾರೆ. ನನಗೆ ನಾಲ್ಕು ಸಲ ಕೊವಿಡ್ ಟೆಸ್ಟ್ ಮಾಡಲಾಗಿದೆ. ಯಾವುದನ್ನೂ ಸ್ಪಷ್ಟವಾಗಿ ತಿಳಿಸಿಲ್ಲ ಎಂದು ಆಸ್ಪತ್ರೆ ಹಾಗೂ ಸಿಬ್ಬಂದಿ ವಿರುದ್ಧ ಹರಿ ಹಾಯ್ದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.