IND vs AUS, 2nd Test: ದೆಹಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಆಸ್ಟ್ರೇಲಿಯಾಕ್ಕೆ ಅತ್ಯಂತ ಬಿರುಸಿನ ರೀತಿಯಲ್ಲಿ ಆರಂಭಿಕ ಹೊಡೆತ ನೀಡಿದ್ದಾರೆ.
ಆಸ್ಟ್ರೇಲಿಯ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಸೆಷನ್‌ನಲ್ಲಿ ಮೊಹಮ್ಮದ್ ಶಮಿ ಅವರ ಅಬ್ಬರದ ಬೌಲಿಂಗ್ ಮತ್ತೆ ಮರುಕಳಿಸಿದೆ. ಭಾರತ ತಂಡದ ಅಪಾಯಕಾರಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ತಮ್ಮ ‘ಮ್ಯಾಜಿಕ್ ಬಾಲ್’ ಮೂಲಕ ಆಸ್ಟ್ರೇಲಿಯಾದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡಿದ್ದಾರೆ. ಈ ಮೂಲಕ ಸಂಚಲನ ಮೂಡಿಸಿದ್ದಾರೆ.
ಇದನ್ನೂ ಓದಿ: ZEE News Sting Operation Big Impact : ಬಣ್ಣ ಬಯಲಾಗುತ್ತಿದ್ದಂತೆ BCCI ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ರಾಜೀನಾಮೆ
ಡೇವಿಡ್ ವಾರ್ನರ್ ನಂತಹ ಅಪಾಯಕಾರಿ ಬ್ಯಾಟ್ಸ್‌ಮನ್ ಆಸ್ಟ್ರೇಲಿಯಾ ತಂಡದ ಅರ್ಧದಷ್ಟು ಆಟಗಾರನಿಗೆ ಸಮನಾಗಿದ್ದು, ಅವರನ್ನು ಪೆವಿಲಿಯನ್ ಗೆ ಕಳಿಸುವಲ್ಲಿ ಮೊಹಮ್ಮದ್ ಶಮಿ ಯಶಸ್ವಿಯಾಗಿದ್ದಾರೆ. ಡೇವಿಡ್ ವಾರ್ನರ್ ಡೆಲ್ಲಿಯ ಪಿಚ್‌ನಲ್ಲಿ ಉಳಿದುಕೊಂಡಿದ್ದರೆ, ಟೀಂ ಇಂಡಿಯಾಗೆ ಸಂಕಷ್ಟವನ್ನು ಸೃಷ್ಟಿಸುತ್ತಿದ್ದರು. ಡೇವಿಡ್ ವಾರ್ನರ್ ಈ ಮೈದಾನದಲ್ಲಿ ದೆಹಲಿ ತಂಡಕ್ಕಾಗಿ ಹಲವು ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಆಸ್ಟ್ರೇಲಿಯದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡುವ ಮೂಲಕ ಮೊಹಮ್ಮದ್ ಶಮಿ ಅವರ ಈ ಮ್ಯಾಜಿಕ್ ಬಾಲ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
#TeamIndia draw first blood! 👏🏻
That’s a beauty by Shami to get David Warner packing! 💥Tune-in to the action in the Mastercard #INDvAUS Test on Star Sports & Disney+Hotstar! #BelieveInBlue #TestByFire pic.twitter.com/zWUiDpTFzU
— Star Sports (@StarSportsIndia) February 17, 2023
ಮೊಹಮ್ಮದ್ ಶಮಿ ಅವರ ಈ ಬೌಲಿಂಗ್ ಸ್ಟೈಲ್ ನ್ನು ನೋಡಿದಾಗ ಇದು ಅತ್ಯುತ್ತಮ ಬಾಲ್ ಎಂದು ಒಮ್ಮೆ ಅನಿಸುವುದು ಖಂಡಿತ. ಮೊಹಮ್ಮದ್ ಶಮಿ ಅವರ ಈ ಚೆಂಡಿನ ಮುಂದೆ ಡೇವಿಡ್ ವಾರ್ನರ್ ಗೆ ಉತ್ತರವೇ ಇರಲಿಲ್ಲ. ಡೇವಿಡ್ ವಾರ್ನರ್ ಅವರ ಬ್ಯಾಟ್‌ನ ಅಂಚಿನಿಂದ ಹಾದುಹೋದ ಮೊಹಮ್ಮದ್ ಶಮಿ ಎಸೆದ ಮ್ಯಾಜಿಲ್ ಬಾಲ್, ನೇರವಾಗಿ ವಿಕೆಟ್ ಕೀಪರ್ ಕೆಎಸ್ ಭರತ್ ಅವರ ಕೈ ಪಾಲಾಯಿತು. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.
ಆಸ್ಟ್ರೇಲಿಯಾದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ 44 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರು. ಆಸ್ಟ್ರೇಲಿಯಾ ಇನ್ನಿಂಗ್ಸ್‌ನ 16 ನೇ ಓವರ್‌ನಲ್ಲಿ ಮೊಹಮ್ಮದ್ ಶಮಿ ಬೌಲಿಂಗ್ ಮಾಡಲು ಆಗಮಿಸಿದ್ದು, ಈ ವೇಳೆ ಡೇವಿಡ್ ವಾರ್ನರ್ ಸ್ಟ್ರೈಕ್‌ನಲ್ಲಿ ಹಾಜರಿದ್ದರು. ಮೊಹಮ್ಮದ್ ಶಮಿ 16ನೇ ಓವರ್‌ನ ಎರಡನೇ ಎಸೆತದಲ್ಲಿ ಡೇವಿಡ್ ವಾರ್ನರ್ ಅವರನ್ನು ಬೌಲ್ಡ್ ಮಾಡಿದರು.
ದೆಹಲಿಯಲ್ಲಿ ಶಮಿ ಅಟ್ಟಹಾಸ:
ಆಸ್ಟ್ರೇಲಿಯಾ ವಿರುದ್ಧದ ದೆಹಲಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಶಮಿ ಇಲ್ಲಿಯವರೆಗೆ ಎರಡು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಶಮಿ ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (15 ರನ್) ಮತ್ತು ಟ್ರಾವಿಸ್ ಹೆಡ್ (12 ರನ್) ಅವರನ್ನು ಪೆವಿಲಿಯನ್‌ಗೆ ಮರಳಿಸಿದ್ದಾರೆ. ಟೀಂ ಇಂಡಿಯಾದ ಮುಂದೆ ಈ ಸರಣಿಯಲ್ಲಿ ಆಸ್ಟ್ರೇಲಿಯಾ ಅತ್ಯಂತ ಕೆಟ್ಟ ಆರಂಭವನ್ನು ಪಡೆದಿದೆ.
ನಾಗ್ಪುರದಲ್ಲಿ ನಡೆದ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಇನಿಂಗ್ಸ್ ಮತ್ತು 132 ರನ್‌ಗಳಿಂದ ಸೋತಿದೆ. ನಾಲ್ಕು ಪಂದ್ಯಗಳ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಆರು ವರ್ಷಗಳ ನಂತರ ಭಾರತದ ನೆಲದಲ್ಲಿ ಉಭಯ ದೇಶಗಳ ನಡುವೆ ಟೆಸ್ಟ್ ಸರಣಿ ನಡೆಯುತ್ತಿದೆ.
ಇದನ್ನೂ ಓದಿ: ಭಾರತೀಯ ಪುಟ್ಬಾಲ್ ದಂತಕಥೆ ಬಲರಾಮ್ ಇನ್ನಿಲ್ಲ
2017 ರಲ್ಲಿ ಭಾರತದಲ್ಲಿ ಆಡಿದ ಕೊನೆಯ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-1 ರಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಆಸ್ಟ್ರೇಲಿಯಾ ಕೊನೆಯದಾಗಿ 2004ರಲ್ಲಿ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.