ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ಶೈಲಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಯಾವುದೇ ಎದುರಾಳಿ ಆಟಗಾರ ಅವರ ಮೇಲೆ ಕಣ್ಣಿಟ್ಟಾಗಲೆಲ್ಲಾ ಅವರು ಸೂಕ್ತ ಉತ್ತರ ನೀಡಲು ಹಿಂಜರಿಯುವುದಿಲ್ಲ. ಆದಾಗ್ಯೂ, ಭಾನುವಾರ ಪಾಕಿಸ್ತಾನ ವಿರುದ್ಧ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಪಂದ್ಯದಲ್ಲಿ ಅವರು ಸಿಡಿಸಿದ ಶತಕಕ್ಕೆ ಅಲ್ಲಿನ ಅಭಿಮಾನಿಗಳು ಸಂಭ್ರಮಾಚರಣೆ ಆಚರಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಬೃಹತ್ ಪರದೆಯಲ್ಲಿ ಇಂಡಿಯಾ-ಪಾಕಿಸ್ತಾನದ ಪಂದ್ಯವನ್ನು ನೋಡುತ್ತಿರುವ ಅಲ್ಲಿನ ಅಭಿಮಾನಿಗಳು ಕೊಹ್ಲಿ ಶತಕ ಸಿಡಿಸುತ್ತಿದ್ದಂತೆ ಅಲ್ಲಿನ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.ಆ ಮೂಲಕ ವಿರಾಟ್ ಕೊಹ್ಲಿ ಕ್ರಿಕೆಟ್ ಆಟದ ನೈಜ ರಾಯಭಾರಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಇದಕ್ಕೂ ಮುನ್ನ ಪಾಕ್ ಬ್ಯಾಟಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಅವರು ಎದುರಾಳಿ ಪಾಕ್ ತಂಡದ ಆಟಗಾರ ನಸೀಮ್ ಶಾ ಅವರ ಶೂಗಳ ಲೇಸ್ ಕಟ್ಟುತ್ತಿರುವುದನ್ನು ನಾವು ಕಾಣಬಹುದು. ಐಸಿಸಿ ತನ್ನ ಸೋಶಿಯಲ್ ಮೀಡಿಯಾ ಹ್ಯಾಂಡಲ್ ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದೆ. ತದನಂತರ ಈ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
This is how Viratians in Pakistan celebrated Virat Kohli's century against their own team! 😛 #ViratKohli𓃵 #INDvsPAK #ChampionsTrophy pic.twitter.com/7W7FByE9Uv
— Prathamesh Avachare (@onlyprathamesh) February 23, 2025
ಪಾಕ್ ಅಭಿಮಾನಿಗಳ ಹೃದಯ ಗೆದ್ದ ಕಿಂಗ್ ಕೊಹ್ಲಿ
ಈಗ ನಸೀಮ್ ಷಾ ಅವರ ಶೂ ಲೇಸ್ ಕಟ್ಟುವ ಮೂಲಕ ವಿರಾಟ್ ಕೊಹ್ಲಿ ಇಡೀ ಜಗತ್ತಿಗೆ ಶ್ರೇಷ್ಠ ಕ್ರೀಡಾ ಮನೋಭಾವವನ್ನು ಮೆರೆದಿದ್ದಾರೆ.ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ನ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದರು 22 ವರ್ಷದ ಪಾಕಿಸ್ತಾನಿ ವೇಗಿ ನಸೀಮ್ ಶಾ ಅವರ ಶೂ ಲೇಸ್ಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಕಟ್ಟಿದರು. ವಿರಾಟ್ ಕೊಹ್ಲಿಯ ಈ ನಡೆಯು ಭಾರತದ ಜನರನ್ನು ಮಾತ್ರವಲ್ಲದೆ ಪಾಕಿಸ್ತಾನದ ಜನರ ಮನಸ್ಸನ್ನು ಗೆದ್ದಿದೆ.
Spirit of cricket! We are brothers. So good to see Virat Kohli & Naseem Shah 🇮🇳🇵🇰❤️ #ChampionsTrophy2025#PAKvIND pic.twitter.com/zjvkK39Kh5
— Muhammad Zaid 🇵🇰🇵🇸 (@iammalickzayd) February 23, 2025
ಪಂದ್ಯದ ಸಮಯದಲ್ಲಿ, ನಸೀಮ್ ಶಾ ವಿರಾಟ್ ಕೊಹ್ಲಿಗೆ ತಮ್ಮ ಶೂ ಲೇಸ್ ಕಟ್ಟಲು ವಿನಂತಿಸಿದರು. ಆಗ ವಿರಾಟ್ ಕೊಹ್ಲಿ ನಸೀಮ್ ಶಾ ಅವರ ಶೂಗಳ ಲೇಸ್ಗಳನ್ನು ಕಟ್ಟುವ ಮೂಲಕ ಉತ್ತಮ ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದರು.ವಿರಾಟ್ ಕೊಹ್ಲಿ ಬಹಳಷ್ಟು ನಮ್ರತೆ ಮತ್ತು ಸಭ್ಯತೆಯನ್ನು ತೋರಿಸಿದರು ಮತ್ತು ತಮ್ಮ ಹಾವಭಾವಗಳಿಂದ ಎಲ್ಲರ ಹೃದಯವನ್ನು ಗೆದ್ದರು. ಕುತೂಹಲಕಾರಿ ವಿಷಯವೆಂದರೆ ವಿರಾಟ್ ಕೊಹ್ಲಿ ಸ್ವತಃ ಕ್ಯಾಚ್ ತೆಗೆದುಕೊಳ್ಳುವ ಮೂಲಕ ನಸೀಮ್ ಶಾ ಅವರ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು.47ನೇ ಓವರ್ನ ನಾಲ್ಕನೇ ಎಸೆತದಲ್ಲಿ ಕುಲದೀಪ್ ಯಾದವ್ ನಸೀಮ್ ಶಾಗೆ ಫುಲ್ಲಿಶ್ ಎಸೆತ ಎಸೆದರು. ಆಗ ನಸೀಮ್ ಶಾ ಚೆಂಡನ್ನು ವಿರಾಟ್ ಕೊಹ್ಲಿ ಕಡೆಗೆ ಹೊಡೆದರು, ಆಗ ಅವರು ಅದ್ಭುತ ರನ್ನಿಂಗ್ ಕ್ಯಾಚ್ ಹಿಡಿದರು.
ವಿರಾಟ್ ಕೊಹ್ಲಿ ಭರ್ಜರಿ ಶತಕ
ಭಾನುವಾರ ಪಾಕಿಸ್ತಾನ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಶತಕ ಗಳಿಸಿ ಭಾರತಕ್ಕೆ 6 ವಿಕೆಟ್ಗಳ ಜಯ ತಂದುಕೊಟ್ಟರು. ವಿರಾಟ್ ಕೊಹ್ಲಿ 111 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದರು. ಪಾಕಿಸ್ತಾನದ 241 ರನ್ ಗಳ ಸವಾಲಿಗೆ ಪ್ರತಿಯಾಗಿ ಟೀಮ್ ಇಂಡಿಯಾ ಕೇವಲ 42.3 ಓವರ್ಗಳಲ್ಲಿ 244 ರನ್ಗಳನ್ನು ಗಳಿಸುವ ಮೂಲಕ ಗೆಲುವಿನ ಗುರಿ ತಲುಪಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.