ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರು ಕ್ರಮವಾಗಿ ಮಹಿಳೆಯರು ಮತ್ತು ಪುರುಷರ ವಿಭಾಗದಲ್ಲಿ ಸೆಪ್ಟೆಂಬರ್‌ನ ಐಸಿಸಿ ತಿಂಗಳ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ಸರಣಿಯಲ್ಲಿನ ಸ್ಮರಣೀಯ ಪ್ರದರ್ಶನಕ್ಕಾಗಿ ಹರ್ಮನ್‌ಪ್ರೀತ್ ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ಭಾರತದ ನಾಯಕಿ ಕೌರ್ ಜೊತೆಗೆ, ಉಪನಾಯಕಿ ಸ್ಮೃತಿ ಮಂಧಾನ ಮತ್ತು ಬಾಂಗ್ಲಾದೇಶದ ಪ್ರನಿಗರ್ ಸುಲ್ತಾನಾ ಕೂಡ ಈ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದರು.
ಇದನ್ನೂ ಓದಿ: ಮಹಿಳಾ ಏಷ್ಯಾಕಪ್ 2022: ಥಾಯ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ: ಸೆಮಿ ಫೈನಲ್ ಪ್ರವೇಶ
"ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ಸಂತಸವಾಗಿದೆ. ಈ ಪ್ರಶಸ್ತಿ ಗೆದ್ದಿರುವುದು ಅದ್ಭುತ ಭಾವನೆ. ಸ್ಮೃತಿ ಮತ್ತು ಪ್ರನಿಗರ್ ಅವರೊಂದಿಗೆ ನಾಮನಿರ್ದೇಶನಗೊಂಡಾಗ ವಿಜೇತರಾಗಿ ಹೊರಹೊಮ್ಮುವುದು ತುಂಬಾ ವಿನಮ್ರವಾಗಿದೆ" ಎಂದು ಪ್ರಶಸ್ತಿ ಗೆದ್ದ ನಂತರ ಹರ್ಮನ್‌ಪ್ರೀತ್ ಹೇಳಿದರು.
"ನನ್ನ ದೇಶವನ್ನು ಪ್ರತಿನಿಧಿಸುವಲ್ಲಿ ನಾನು ಯಾವಾಗಲೂ ಅಪಾರ ಹೆಮ್ಮೆಪಡುತ್ತೇನೆ. ಇಂಗ್ಲೆಂಡ್‌ನಲ್ಲಿ ಐತಿಹಾಸಿಕ ODI ಸರಣಿಯನ್ನು ಗೆದ್ದಿರುವುದು ನನ್ನ ವೃತ್ತಿಜೀವನದಲ್ಲಿ ಹೆಗ್ಗುರುತಿನ ಕ್ಷಣವಾಗಿ ಉಳಿಯುತ್ತದೆ" ಎಂದು ಅವರು ಹೇಳಿದರು.
ಹರ್ಮನ್‌ಪ್ರೀತ್ ಅವರು ಬ್ಯಾಟ್‌ನಲ್ಲಿ ಮಾತ್ರವಲ್ಲದೆ ನಾಯಕರಾಗಿಯೂ ಛಾಪು ಮೂಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ 3-0 ODI ಸರಣಿಯನ್ನು ಸ್ಮರಣೀಯವಾಗಿ ಮುನ್ನಡೆಸಿದರು. ಇದು 1999ರ ನಂತರ ಭಾರತಕ್ಕೆ ಇಂಗ್ಲೆಂಡ್‌ನಲ್ಲಿ ಮೊದಲ ಸರಣಿ ಜಯವಾಗಿದೆ.
221 ರ ಸರಾಸರಿಯಲ್ಲಿ 221 ರನ್‌ಗಳೊಂದಿಗೆ ಮತ್ತು 103.27 ರ ಸ್ಟ್ರೈಕ್ ರೇಟ್‌ನೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿ ಹೊರಹೊಮ್ಮಿದರು.
ಇದನ್ನೂ ಓದಿ: T20 World Cup : ಟೆನ್ಶನ್ ಫ್ರೀಯಾದ ಟೀಂ ಇಂಡಿಯಾ, ಬುಮ್ರಾ ಕೊರತೆ ನೀಗಿಸಲಿದ್ದಾನೆ ಈ ಬೌಲರ್!
ಪುರುಷರಲ್ಲಿ ರಿಜ್ವಾನ್ ಭಾರತದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಮತ್ತು ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆದರು. ಸೆಪ್ಟೆಂಬರ್‌ನಲ್ಲಿ ರಿಜ್ವಾನ್ ಅದ್ಭುತ ಫಾರ್ಮ್‌ನಲ್ಲಿದ್ದರು, T20I ಗಳಲ್ಲಿ ಕೆಲವು ಅದ್ಭುತ ಪ್ರದರ್ಶನಗಳನ್ನು ನೀಡಿದರು.
ಕನ್ನಡ ಭಾಷೆಯಲ್ಲ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.