ನವದೆಹಲಿ: ವಿಶ್ವಕಪ್ ಟೂರ್ನಿ ಹಿನ್ನಲೆಯಲ್ಲಿ ಕಾರ್ಡಿಪ್ ನ ಸೋಪಿಯಾ ಗಾರ್ಡನ್ ನಲ್ಲಿ ಬಾಂಗ್ಲಾ ವಿರುದ್ದ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು ಧೋನಿ ಹಾಗೂ ಕೆ.ಎಲ್.ರಾಹುಲ್ ಅವರ ಬ್ಯಾಟಿಂಗ್ ನೆರವಿನಿಂದ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿದೆ.
India finish their 50 overs on 359/7 – MS Dhoni and KL Rahul both got to three figures, helping their side to recovery with a vital fifth-wicket partnership of 164. #BANvIND | #CWC19
FOLLOW ➡️ https://t.co/LynTb9hg0c pic.twitter.com/2ePek3RShm— ICC (@ICC) May 28, 2019
ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಭಾರತಕ್ಕೆ ಬ್ಯಾಟಿಂಗ್ ನೀಡಿತು.ಇದರ ಲಾಭ ಪಡೆದ ಭಾರತ ತಂಡವು ಆರಂಭದಲ್ಲಿ ಶಿಖರ್ ಧವನ್, ರೋಹಿತ್ ಶರ್ಮಾ, ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ವಿಕೆಟ್ ಗಳನ್ನು 83 ರನ್ ಗಳಾಗುವಷ್ಟರಲ್ಲಿ ಕಳೆದುಕೊಂಡಿತು. ಇದಾದ ನಂತರ ಬ್ಯಾಟಿಂಗ್ ಗೆ ಇಳಿದ ಧೋನಿ ಹಾಗೂ ಕೆ.ಎಲ್ ರಾಹುಲ್ ರ ನಡುವಿನ ಶತಕದ ಜೊತೆಯಾಟ ಪಂದ್ಯದ ಚಿತ್ರವನ್ನೇ ಬದಲಾಯಿಸಿತು. ಕೆ.ಎಲ್.ರಾಹುಲ್ 99 ಎಸೆತಗಳಲ್ಲಿ 108 ರನ್ ಗಳಿಸಿದರೆ. ಧೋನಿ ಕೇವಲ 78 ರನ್ ಗಳಲ್ಲಿ 113 ರನ್ ಗಳಿಸಿ ಔಟಾದರು.
ಇನ್ನು ಕೊನೆಯಲ್ಲಿ ಬಂದಂತಹ ಹಾರ್ದಿಕ್ ಪಾಂಡ್ಯ ಕೇವಲ 11 ಎಸೆತಗಳಲ್ಲಿ 21 ರನ್ ಗಳಿಸಿದರು.ಆ ಮೂಲಕ ತಂಡವು ಐವತ್ತು ಓವರ್ ಗಳಲ್ಲಿ 359 ರನ್ ಗಳಿಸಿತು.