ನವದೆಹಲಿ: ವಿಶ್ವಕಪ್ ಟೂರ್ನಿಯ ಅಂಗವಾಗಿ ನ್ಯಾಟಿಂಗ್ಹ್ಯಾಮ್ ನ ಟ್ರೆಂಟ್ ಬಿಡ್ಜ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಪಾಕ್ ಗೆ ಬ್ಯಾಟಿಂಗ್ ಅವಕಾಶ ನೀಡಿದ ವೆಸ್ಟ್ ಇಂಡೀಸ್ ತಂಡವು ತನ್ನ ನಿರ್ಧಾರಕ್ಕೆ ತಕ್ಕಂತೆ ಬೌಲಿಂಗ್ ದಾಳಿ ಮಾಡಿತು.
50 runs
34 balls
6 fours
3 sixes@henrygayle began his #CWC19 campaign in style with a quick fifty in West Indies' opener against Pakistan. https://t.co/ct1k9kmKkw— Cricket World Cup (@cricketworldcup) May 31, 2019
ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಪಾಕ್ ತಂಡವು 21.4 ಓವರ್ ಗಳಲ್ಲಿ 105 ಆಲೌಟ್ ಆಗುವ ಮೂಲಕ ಭಾರಿ ನಿರಾಸೆ ಅನುಭವಿಸಿತು. ಪಾಕ್ ಪರವಾಗಿ ಫಕಾರ್ ಜಮಾನ್, ಬಾಬರ್ ಅಜಂ ಅವರು ಕ್ರಮವಾಗಿ 22, 22 ರನ್ ಗಳಿಸಿದ್ದು ಬಿಟ್ಟರೆ ಬಹುತೇಕ ಆಟಗಾರು ಏಕ ಅಂಕಿಗೆ ಪೆವಲಿನ್ ಗೆ ತೆರಳಿದರು. ವೆಸ್ಟ್ ಇಂಡೀಸ್ ತಂಡದ ಬೌಲರ್ ಗಳಾದ ಒಶಾನೆ ತಾಮಸ್ ನಾಲ್ಕು, ಜಾಸನ್ ಹೋಲ್ಡರ್ ಮೂರು ಹಾಗೂ ಆಂಡ್ರೆ ರಸೆಲ್ ಎರಡು ವಿಕೆಟ್ ತೆಗೆದುಕೊಳ್ಳುವ ಮೂಲಕ ಪಾಕಿಸ್ತಾನ ತಂಡದ ಬ್ಯಾಟಿಂಗ್ ಬೆನ್ನಲುಬು ಮುರಿದರು.
A World Cup debut to remember! 🙌
For his brilliant return of 4/27 in West Indies' #CWC19 opener against Pakistan, paceman Oshane Thomas is adjudged Player of the Match. #WIvPAK #MenInMaroon pic.twitter.com/dmyUY7zQ5o
— Cricket World Cup (@cricketworldcup) May 31, 2019
106 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ್ದ ವೆಸ್ಟ್ ಇಂಡೀಸ್ ತಂಡವು ಮೂರು ವಿಕೆಟ್ ಗಳ ನಷ್ಟಕ್ಕೆ 13.4 ಓವರ್ ಗಳಲ್ಲಿ 108 ರನ್ ಗಳನ್ನು ಗಳಿಸಿತು. ವೆಸ್ಟ್ ಇಂಡೀಸ್ ತಂಡದ ಪರವಾಗಿ ಕ್ರಿಸ್ ಗೇಲ್ (50) ಹಾಗೂ ನಿಕೊಲಸ್ ಪೂರಾನ್ (34) ರನ್ ಗಳನ್ನೂ ಗಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ನಾಲ್ಕು ವಿಕೆಟ್ ಗಳನ್ನು ಪಡೆದ ವಿಂಡಿಸ್ ಒಶಾನೆ ತಾಮಸ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು.