ICC Champions Trophy 2025: ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಪ್ರಸಕ್ತ ಟೂರ್ನಿಯಲ್ಲಿ ಗರಿಷ್ಠ ಮೊತ್ತ ಕಲೆ ಹಾಕಿದ್ದ ಆಂಗ್ಲರಿಗೆ ಆಸೀಸ್ ಶಾಕ್ ನೀಡಿತು. ಜೋಶ್ ಇಂಗ್ಲಿಸ್ (ಔಟಾಗದೆ 120) ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸಿತು.
ಟಾಸ್ ಗೆದ್ದ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ಫೀಲ್ಡಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಬೆನ್ ಡಕೆಟ್ ಗಳಿಸಿದ ಅಮೋಘ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 351 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.
ಇದನ್ನೂ ಓದಿ: ಕ್ರಿಕೆಟಿಗ ಧವನ್ ಜೊತೆ ವೈರಲ್ ಆದ ಲೇಡಿ ಯಾರು? ಅತಿ ಹೆಚ್ಚು ಇಂಟರ್ನೆಟ್ ಸರ್ಚ್ ಆಗಿದ್ದು ಈಕೆ ನೋಡಿ
Josh Inglis’ century scripted a remarkable chase for Australia against England and earned him the @aramco POTM award 👏 #ChampionsTrophy pic.twitter.com/B5reS4kgxo
— ICC (@ICC) February 22, 2025
ಇಂಗ್ಲೆಂಡ್ ಪರ ಬೆನ್ ಟಕೆಟ್ (165), ಜೋ ರೂಟ್ (68), ಜೋಸ್ ಬಟ್ಲರ್ (23) ಮತ್ತು ಜೋಫ್ರಾ ಅರ್ಚರ್ ಔಟಾಗದೆ 21 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಬೌಲಿಂಗ್‌ನಲ್ಲಿ ಬೆನ್ ದ್ವಾರ್ಶುಯಿಸ್ 66ಕ್ಕೆ3, ಜಂಪಾ 64ಕ್ಕೆ2 ಮತ್ತು ಮಾರ್ನಸ್ ಲಾಬುಷೇನ್ 41ಕ್ಕೆ2 ವಿಕೆಟ್ ಪಡೆದು ಮಿಂಚಿದರು.
ಬೃಹತ್ ಮೊತ್ತದ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿದರೂ ನಂತರ ಅತ್ಯುತ್ತಮ ಆಟ ಪ್ರದರ್ಶಿಸಿತು. ಆಸ್ಟ್ರೇಲಿಯಾ ಪರ ಸ್ಫೋಟಕ ಆಟವಾಡಿದ ಜೋಶ್ ಇಂಗ್ಲಿಸ್ (120) ಭರ್ಜರಿ ಶತಕ ಸಿಡಿಸಿ ಮಿಂಚಿದರು. ಆರಂಭಿಕ ಆಟಗಾರ ಮ್ಯಾಥ್ಯೂ ಶಾರ್ಟ್ (63), ಅಲೆಕ್ಸ್ ಕ್ಯಾರಿ (69), ಮಾರ್ನಸ್ ಲ್ಯಾಬುಶೇನ್ (47) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಔಟಾಗದೆ 32 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಒಂದು ಅಮೋಘ ಗೆಲುವಿನ ಮೂಲಕ ಆಸ್ಟ್ರೇಲಿಯಾ ಬೃಹತ್ ಮೊತ್ತದ ರನ್ ಚೇಸಿಂಗ್‌ನಲ್ಲಿ ಹೊಸದೊಂದು ದಾಖಲೆಯನ್ನು ನಿರ್ಮಿಸಿದೆ.
Josh Inglis' thumping 💯 turns it around for Australia as they create history in a run-fest in Lahore 🔥#ChampionsTrophy #AUSvENG ✍️: https://t.co/DBjsJNDgkY pic.twitter.com/lGbeqtTHy2
— ICC (@ICC) February 22, 2025
ಇದನ್ನೂ ಓದಿ: IND vs PAK ಪಂದ್ಯಕ್ಕೂ ಮುನ್ನ ಟೀಂ ಸೇರಿದ ಸ್ಪೋಟಕ ಆಟಗಾರ..! ಗೇಮ್ ಚೆಂಜರ್ ಆಗ್ತಾರಾ ಈ ಪ್ಲೇಯರ್..?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.