ICC Cricket World Cup 2019 :ಚಹಾಲ್ ಕೈಚಳಕಕ್ಕೆ ಹರಿಣಗಳು ಕಂಗಾಲು, 227-9

ಸೌತಾಂಪ್ಟನ್ ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡವು 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿದೆ.

Last Updated : Jun 5, 2019, 07:02 PM IST
ICC Cricket World Cup 2019 :ಚಹಾಲ್ ಕೈಚಳಕಕ್ಕೆ ಹರಿಣಗಳು ಕಂಗಾಲು, 227-9 title=
Photo courtesy: Twitter

ನವದೆಹಲಿ: ಸೌತಾಂಪ್ಟನ್ ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡವು 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರತದ ಬೌಲರ್ ಗಳು ಆರಂಭಿಕ ಆಘಾತ ನೀಡಿದರು.ಕೇವಲ 89 ರನ್ ಗಳಿಗೆ ಐದು ವಿಕೆಟ್ ಕಳೆದು ಕೊಂಡಿದ್ದ ಆಫ್ರಿಕಾ ತಂಡಕ್ಕೆ ಬೇಗನೆ ಆಲೌಟ್ ಆಗುವ ಸಂಭವ ಎದುರಾಗಿತ್ತು. ಈ  ಹಂತದಲ್ಲಿ ಅಂಡಿಲೇ 34 ಹಾಗೂ ಕ್ರಿಸ್ ಮೊರಿಸ್ 42 ರನ್ ಗಳನ್ನೂ ತಂಡದ ಮೊತ್ತ 200 ರ ಗಡಿ ದಾಟಲು ಸಾಧ್ಯವಾಯಿತು.ಇದಕ್ಕೂ ಮೊದಲು ಫ್ಯಾಫ್ ದುಫ್ಲೆಸಿಸ್ ಅವರು 38 ರನ್ ಗಳಿಸಿ ತಂಡವನ್ನು ಕಡಿಮೆ ರನ್ ಗಳಿಗೆ ಕುಸಿಯದಂತೆ ನೋಡಿಕೊಂಡರು. 

ಇನ್ನೊಂದೆಡೆ ಭಾರತದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಬೌಲರ್ ಗಳು ಅದರಲ್ಲೂ ಆರಂಭದಲ್ಲಿ ಜಸ್ಪ್ರೀತ್ ಬುಮ್ರಾ ಅವರು ಡಿಕಾಕ್ ಹಾಗೂ ಹಸಿಂ ಆಮ್ಲಾ ಅವರ ವಿಕೆಟ್ ಗಳನ್ನು ಪಡೆದುಕೊಂಡರೆ ಯಜುವೆಂದ್ರ ಚಹಾಲ್ ಅವರು ಡುಪ್ಲೆಸಿಸ್, ರಾಸಿ ವ್ಯಾನ್ ಡೇರ್ ದುಸ್ಸೇನ್ ಹಾಗೂ ಡೇವಿಡ್ ಮಿಲ್ಲರ್ ಗಳನ್ನು 89 ರನ್ ಗಳಾಗುವಷ್ಟರಲ್ಲಿ ಪಡೆಯುವ ಮೂಲಕ ತಂಡದ ಗತಿಯನ್ನೇ ಬದಲಿಸಿದರು. ಇನ್ನು ಕೊನೆಯಲ್ಲಿ ಭುವನೇಶ್ವರ ಅವರು ಎರಡು ವಿಕೆಟ್ ಗಳನ್ನು ಪಡೆದು ದಕ್ಷಿಣ ಆಫ್ರಿಕಾ ತಂಡವನ್ನು 50 ಓವರ್ ಗಳಲ್ಲಿ 9 ವಿಕೆಟ್ ಗೆ 227 ರನ್ ಗಳಿಗೆ ನಿಯಂತ್ರಿಸಿದರು.

Trending News