IND vs PAK : ಟಾಸ್‌ ಗೆದ್ದ ಪಾಕಿಸ್ತಾನ ಬೌಲಿಂಗ್‌ ಆಯ್ಕೆ

Asia Cup Live : 2023ರ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡನೇ ಬಾರಿಗೆ ಮುಖಾಮುಖಿಯಾಗಿವೆ. ಟಾಸ್‌ ಗೆದ್ದು, ಪಾಕಿಸ್ತಾನ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

Written by - Zee Kannada News Desk | Last Updated : Sep 10, 2023, 04:05 PM IST
  • ಭಾರತ ಮತ್ತು ಪಾಕಿಸ್ತಾನ ಎರಡನೇ ಬಾರಿಗೆ ಮುಖಾಮುಖಿ.
  • ಪಂದ್ಯದಲ್ಲಿ ಟಾಸ್‌ ಗೆದ್ದು, ಪಾಕಿಸ್ತಾನ ಬೌಲಿಂಗ್‌ ಆಯ್ಕೆ.
  • ಕಳೆದ ಬಾರಿ ಉಭಯ ತಂಡಗಳಿಗೂ ತಲಾ ಒಂದು ಅಂಕವನ್ನು ನೀಡಲಾಗಿತ್ತು.
IND vs PAK : ಟಾಸ್‌ ಗೆದ್ದ ಪಾಕಿಸ್ತಾನ ಬೌಲಿಂಗ್‌ ಆಯ್ಕೆ title=

IND vs PAK Asia Cup 2023 : ಕೊಲೊಂಬೋದ ಆರ್‌.ಪ್ರೇಮದಾಸ ಸ್ಟೇಡಿಯಂನಲ್ಲಿ 2023ರ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡನೇ ಬಾರಿಗೆ ಮುಖಾಮುಖಿಯಾಗಿದ್ದು, ಟೂರ್ನಿಯ ಸೂಪರ್‌ ಫೋರ್‌ ಹಂತದ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಟಾಸ್‌ ಗೆದ್ದು, ಪಾಕಿಸ್ತಾನ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಪಾಕಿಸ್ತಾನ ಶನಿವಾರ ತಂಡವನ್ನು ಬಹಿರಂಗಪಡಿಸಿದ್ದರೆ, ಭಾರತವು ಟಾಸ್‌ನಲ್ಲಿ ತನ್ನ ತಂಡವನ್ನು ಪ್ರಕಟಿಸಿತು. ಭಾರತವು ತನ್ನ ಪ್ಲೇಯಿಂಗ್ XI ಗೆ ಎರಡು ಬದಲಾವಣೆಗಳನ್ನು ಮಾಡಿಕೊಂಡಿದೆ. ಗಾಯಗೊಂಡ ಶ್ರೇಯಸ್ ಅಯ್ಯರ್ ಬದಲಿಗೆ ಕೆಎಲ್ ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಸ್ಥಾನವನ್ನು ತಂಡದಲ್ಲಿ ಮರಳಿ ಪಡೆದುಕೊಂಡಿದ್ದಾರೆ. 

ಇದನ್ನು ಓದಿ : ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ಬ್ರೇಕ್ ಮಾಡಲು ಅಸಾಧ್ಯವಾದ ಟಾಪ್ 10 ಅಂತಾರಾಷ್ಟ್ರೀಯ ದಾಖಲೆಗಳು ಯಾವುವು ಗೊತ್ತಾ?

ಕಳೆದ ಪಂದ್ಯದಲ್ಲಿ ಪಾಕಿಸ್ತಾನವು ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಭಾರತ ಮತ್ತು ಪಾಕಿಸ್ತಾನದ ಕಳೆದ ಪಂದ್ಯವು ಮಳೆಯಿಂದ ಯಾವುದೇ ಫಲಿತಾಂಶವಿಲ್ಲದೇ ಅರ್ಧದಲ್ಲೇ ನಿಂತಿತು. ಆ ಕಾರಣದಿಂದಾಗಿ ಉಭಯ ತಂಡಗಳಿಗೂ ತಲಾ ಒಂದು ಅಂಕವನ್ನು ನೀಡಲಾಗಿತ್ತು. ಇದೀಗ ಸೂಪರ್‌ ಫೋರ್‌ ಹಂತದಲ್ಲಿ ಭಾರತ ತಂಡವು ತನ್ನ ಪಾಲಿನ ಮೂರು ಪಂದ್ಯಗಳಲ್ಲಿ ಮೊದಲ ಪಂದ್ಯವನ್ನು ಪಾಕಿಸ್ತಾನದ ಎದುರಿಗೆ ಆಡುತ್ತಿದೆ. 

ತಂಡಗಳು 
ಭಾರತ : ರೋಹಿತ್‌ ಶರ್ಮಾ(ನಾಯಕ), ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ, ಶಾರ್ದೂಲ್‌, ಕುಲ್‌ದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಶುಭಮನ್‌ ಗಿಲ್‌, ಜಸ್‌ಪ್ರೀತ್‌ ಬೂಮ್ರಾ, ಇಶಾನ್‌ ಕಿಶನ್‌

ಪಾಕಿಸ್ತಾನ : ಬಾಬರ್‌ ಅಜಂ(ನಾಯಕ), ಹ್ಯಾರಿಸ್‌ ರವೂಫ್‌, ಇಮಾಮ್‌ ಉಲ್‌ ಹಕ್‌, ನಸೀಮ್‌ ಷಾ, ಶಾಹೀನ್‌ ಆಫ್ರಿದಿ, ಶಾದಾಭ್‌ ಖಾನ್‌, ಇಫ್ತಿಕಾರ್‌ ಅಹಮದ್‌, ಆಘಾ ಸಲ್ಮಾನ್‌, ಫಕರ್‌ ಜಮಾನ್‌, ಮೊಹಮದ್‌ ರಿಜ್ವಾನ್‌, ನಸೀಮ್‌ ಷಾ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News