ಬರ್ಮಿಂಗ್ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್ನಲ್ಲಿ ಭಾನುವಾರ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ(102) ಶತಕದ ಹೊರತಾಗಿಯೂ ಭಾರತ ತಂದ 31 ರನ್ಗಳ ಸೋಲಿನ ಕಹಿ ಅನುಭವಿಸಿದೆ.
ವಿಶ್ವಕಪ್ ಲೀಗ್ನಲ್ಲಿ ಭಾನುವಾರ ಭಾರತವನ್ನು 31 ರನ್ಗಳಿಂದ ಮಣಿಸಿದ ಇಂಗ್ಲೆಂಡ್ ತನ್ನ ಸೆಮಿಫೈನಲ್ ಕನಸನ್ನು ಜೀವಂತವಾಗಿ ಉಳಿಸಿಕೊಂಡಿದೆ. ಈ ಮೂಲಕ 27 ವರ್ಷಗಳ ಬಳಿಕ ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಮೊದಲ ಗೆಲುವನ್ನು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಆರಂಭಿಕ ಆಟಗಾರರಾದ ಜೇಸನ್ ರಾಯ್ (66) ಹಾಗೂ ಜಾನಿ ಬೇರ್ ಸ್ಟೋವ್ (111) ಮೊದಲ ವಿಕೆಟ್ ಜೊತೆಯಾಟ ಇಂಗ್ಲೆಂಡ್ ತಂಡಕ್ಕೆ ಬೃಹತ್ ಮೊತ್ತ ಕಲೆಹಾಕುವಲ್ಲಿ ನೆರವಾಯಿತು.
ಇಂಗ್ಲೆಂಡ್ನ 338 ರನ್ಗಳ ಗುರಿಯನ್ನು ಬೆನ್ನಟ್ಟಿದ ರೋಹಿತ್ (102) ಹಾಗೂ ನಾಯಕ ವಿರಾಟ್ ಕೊಹ್ಲಿ (66) ಹೋರಾಟದ ಹೊರತಾಗಿಯೂ ಐದು ವಿಕೆಟ್ಗಳಲ್ಲಿ 306 ರನ್ ಗಳಿಸಿದ ಭಾರತ ತಂಡ ಪಂದ್ಯಾವಳಿಯಲ್ಲಿ ಮೊದಲ ಸೋಲನ್ನು ಎದುರಿಸಬೇಕಾಯಿತು. ಭಾರತದ ಈ ಸೋಲು ಈಗ ವಿಶ್ವಕಪ್ನ ಸೆಮಿಫೈನಲ್ನಲ್ಲಿ ಪಾಕಿಸ್ತಾನದ ತಲೆನೋವನ್ನು ಹೆಚ್ಚಿಸಿದೆ.