IND vs ENG 3rd Test: ಮೊಹಮ್ಮದ್ ಸಿರಾಜ್ ಮೇಲೆ ಚೆಂಡು ಎಸೆದು ಇಂಗ್ಲೆಂಡ್ ಪ್ರೇಕ್ಷಕರ ದುರ್ವರ್ತನೆ..!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಚೆಂಡನ್ನು ಹೊರಎಸೆಯುವಂತೆ ಸಿರಾಜ್ ಗೆ ಹೇಳುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರಯಾಗಿದೆ.

Written by - Puttaraj K Alur | Last Updated : Aug 26, 2021, 11:24 AM IST
  • ಆಸ್ಟ್ರೇಲಿಯಾದಲ್ಲಿ ಜನಾಂಗೀಯ ನಿಂದನೆ ಎದುರಿಸಿದ್ದ ಮೊಹಮ್ಮದ್ ಸಿರಾಜ್ ಮೇಲೆ ಚೆಂಡು ಎಸೆದು ದುರ್ವರ್ತನೆ
  • ಇಂಗ್ಲೆಂಡ್ ಪ್ರೇಕ್ಷಕರ ವರ್ತನೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರಿಷಭ್ ಪಂತ್ ಬೇಸರ ವ್ಯಕ್ತಪಡಿಸಿದ್ದಾರೆ
  • ಲಾರ್ಡ್ಸ್ ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ ವೇಳೆ ಕೆ.ಎಲ್.ರಾಹುಲ್ ಮೇಲೆ ಶಾಂಪೇನ್ ಬಾಟಲ್ ಕಾರ್ಕ್‌ ಎಸೆಯಲಾಗಿತ್ತು
IND vs ENG 3rd Test: ಮೊಹಮ್ಮದ್ ಸಿರಾಜ್ ಮೇಲೆ  ಚೆಂಡು ಎಸೆದು ಇಂಗ್ಲೆಂಡ್ ಪ್ರೇಕ್ಷಕರ ದುರ್ವರ್ತನೆ..!   title=
ಇಂಗ್ಲೆಂಡ್ ಪ್ರೇಕ್ಷಕರು ದುರ್ವರ್ತನೆ ತೋರಿದ್ದಾರೆ. (Photo Courtesy: @Zee News)

ನವದೆಹಲಿ: ಆಸ್ಟ್ರೇಲಿಯಾದಲ್ಲಿ ಜನಾಂಗೀಯ ನಿಂದನೆಯನ್ನು ಎದುರಿಸಿದ್ದ ಟೀಂ ಇಂಡಿಯಾದ ಯುವ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಮೇಲೆ ಇಂಗ್ಲೆಂಡ್ ಪ್ರೇಕ್ಷಕರು ಚೆಂಡು ಎಸೆದು ದುರ್ವರ್ತನೆ ತೋರಿದ್ದಾರೆ. ಲೀಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯ(India vs Eng 3rd Test)ದ ಮೊದಲ ದಿನದಾಟದ ಕೊನೆಯಲ್ಲಿ ಈ ವಿಷಯವನ್ನು ತಂಡದ ಸಹ ಆಟಗಾರ ರಿಷಭ್ ಪಂತ್ ಬಹಿರಂಗಪಡಿಸಿದ್ದಾರೆ.

ಬುಧವಾರ ಬೌಂಡರಿ ಸಾಲಿನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮೊಹಮ್ಮದ್ ಸಿರಾಜ್(Mohammed Siraj) ಮೇಲೆ ಇಂಗ್ಲಿಷ್ ಪ್ರೇಕ್ಷಕರು ಚೆಂಡು ಎಸೆದು ದುರ್ವರ್ತನೆ ತೋರಿದ್ದಾರೆಂದು ಪಂತ್ ತಿಳಿಸಿದ್ದಾರೆ. ಇಂಗ್ಲೆಂಡ್ ಪ್ರೇಕ್ಷಕರ ವರ್ತನೆಗೆ ಮೈದಾನದಲ್ಲಿಯೇ ಕೋಪಿಸಿಕೊಂಡ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಚೆಂಡನ್ನು ಹೊರಎಸೆಯುವಂತೆ ಸಿರಾಜ್ ಗೆ ಹೇಳುತ್ತಿರುವುದು ಸಿಸಿಟಿವಿ ಕ್ಯಾಮೆರಾ(CCTV Camera) ದಲ್ಲಿ ಸೆರಯಾಗಿದೆ. ಈ ಬಗ್ಗೆ ಪಂತ್ ಅವರಲ್ಲಿ ವಿಚಾರಿಸಿದಾಗ ನಡೆದ ಘಟನೆಯನ್ನು ಅವರು ಬಹಿರಂಗಪಡಿಸಿದ್ದಾರೆ.   

ಇದನ್ನೂ ಓದಿ: ಮಣಿಕಟ್ಟಿನ ನೋವಿನಿಂದಾಗಿ ಯುಎಸ್ ಓಪನ್‌ನಿಂದ ಹಿಂದೆ ಸರಿದ ಸೆರೆನಾ ವಿಲಿಯಮ್ಸ್

‘ಬೌಂಡರಿ ಸಾಲಿನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮೊಹಮ್ಮದ್ ಸಿರಾಜ್ ಮೇಲೆ ಯಾರೋ ಒಬ್ಬರು ಚೆಂಡನ್ನು ಎಸೆದರು. ಇದರಿಂದ ಕೊಹ್ಲಿ ಅಸಮಾಧನಗೊಂಡರು. ‘ನೀವು ಏನೂ ಬೇಕಾದರೂ ಹೇಳಿಕೊಂಡು ಕೂಗಾಡಿ, ಆದರೆ ಫೀಲ್ಡರ್‌ಗಳಿಗೆ ಈ ರೀತಿ ವಸ್ತುಗಳನ್ನು ಎಸೆಯಬೇಡಿ. ಇದು ಕ್ರಿಕೆಟ್ ಗೆ ಒಳ್ಳೆಯದಲ್ಲ’ ಅಂತಾ ಪಂತ್ ಇಂಗ್ಲೆಂಡ್(England) ಪ್ರೇಕ್ಷಕರ ವಿರುದ್ಧ ಬೇಸರ ಹೊರಹಾಕಿದ್ದಾರೆ.

3ನೇ ಟೆಸ್ಟ್ ನ ಮೊದಲನೇ ಇನ್ನಿಂಗ್ಸ್ ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಟೀಂ ಇಂಡಿಯಾ(Team India) 40.4 ಓವರ್ ಗಳಲ್ಲಿ ಕೇವಲ 78 ರನ್ ಗೆ ಆಲೌಟ್ ಆಗಿದೆ. ಮೊದಲ ದಿನದಾಟದ ಕೊನೆಯಲ್ಲಿ 42 ಓವರ್ ಆಡಿರುವ ಇಂಗ್ಲೆಂಡ್ ಯಾವುದೇ ವಿಕೆಟ್ ನಷ್ಟವಿಲ್ಲದೆ  120 ರನ್ ಗಳಿಸಿದ್ದು, 42 ರನ್ ಗಳ ಮುನ್ನಡೆ ಸಾಧಿಸಿದೆ. ಟೀಂ ಇಂಡಿಯಾದ ಕಳಪೆ ಬ್ಯಾಟಿಂಗ್ ಪ್ರದರ್ಶನಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಪುಟ್ಟ ಹುಡುಗಿಯ ಜಿಮ್ನಾಸ್ಟಿಕ್ಸ್ ಕೌಶಲ್ಯಕ್ಕೆ ವೀರೇಂದ್ರ ಸೆಹ್ವಾಗ್ ಫಿದಾ..!

ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿತ್ತು. ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ 27 ವರ್ಷದ ಸಿರಾಜ್ ಎರಡೂ ಇನ್ನಿಂಗ್ಸ್ ನಲ್ಲಿ ಒಟ್ಟು 8 ವಿಕೆಟ್ ಪಡೆದು ಮಿಂಚಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಿರಾಜ್ ಜನಾಂಗಿಯ ನಿಂದನೆ ಅನುಭವಿಸಿದ್ದರು. ಈ ಬಗ್ಗೆ ಸಿರಾಜ್ ಅಂಪೈರ್‌ಗಳಿಗೆ ದೂರು ನೀಡಿದ್ದರು. ಲಾರ್ಡ್ಸ್ ಟೆಸ್ಟ್ ನಲ್ಲಿ ಬೌಂಡರಿ ಗ್ಯಾಲರಿಯ ಬಳಿ ಕೆಲ ಇಂಗ್ಲೆಂಡ್ ಪ್ರೇಕ್ಷಕರು ಕೆ.ಎಲ್.ರಾಹುಲ್ ಮೇಲೆ ಶಾಂಪೇನ್ ಬಾಟಲ್ ಕಾರ್ಕ್‌ಗಳು ಎಸೆದಿದ್ದರು. ಆಂಗ್ಲ ಪ್ರೇಕ್ಷಕರ ಈ ದುರ್ವರ್ತನೆಗೆ ವಿರಾಟ್ ಕೊಹ್ಲಿ(Virat Kohli) ಕಿಡಿಕಾರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News