IND vs SA: ಮೂರನೇ ಟಿ20 ಪಂದ್ಯದಿಂದ ಈ ಆಟಗಾರರು ಔಟ್‌!

ಒಂದು ವೇಳೆ ಈ ಪಂದ್ಯದಲ್ಲೂ ಸೋತರೆ ಟೀಂ ಇಂಡಿಯಾ ಸರಣಿಯಿಂದ ಹೊರಗುಳಿಯಲಿದೆ. ಇದೀಗ ಮೂರನೇ ಟಿ-20 ಪಂದ್ಯಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಪ್ರಮುಖ ಬದಲಾವಣೆ ಮಾಡಲಾಗುತ್ತಿದೆ. 

Written by - Bhavishya Shetty | Last Updated : Jun 14, 2022, 02:59 PM IST
  • ಭಾರತ ಮತ್ತು ದಕ್ಷಿಣ ಆಫ್ರಿಕಾ T20 ಅಂತಾರಾಷ್ಟ್ರೀಯ ಸರಣಿ
  • 2-0 ಮುನ್ನಡೆ ಸಾಧಿಸಿರುವ ದಕ್ಷಿಣ ಆಫ್ರಿಕಾ ತಂಡ
  • ಪಂದ್ಯ ಗೆಲ್ಲಲೇಬೇಕಾದ ಅನಿರ್ವಾರ್ಯತೆ ಟೀಂ ಇಂಡಿಯಾಗೆ
IND vs SA: ಮೂರನೇ ಟಿ20 ಪಂದ್ಯದಿಂದ ಈ ಆಟಗಾರರು ಔಟ್‌!  title=
India Vs South Africa

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ T20 ಅಂತಾರಾಷ್ಟ್ರೀಯ ಸರಣಿಯ ಮೂರನೇ ಪಂದ್ಯ ಇಂದು ಸಂಜೆ 7 ಗಂಟೆಗೆ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಐದು ಪಂದ್ಯಗಳ ಟಿ20  ಸರಣಿಯಲ್ಲಿ ದಕ್ಷಿಣ ಆಫ್ರಿಕಾ 2-0 ಮುನ್ನಡೆ ಸಾಧಿಸಿದೆ. ಈ ಪಂದ್ಯ ಭಾರತದ ಪಾಲಿಗೆ ‘ಮಾಡು ಇಲ್ಲವೇ ಮಡಿ’ ಎಂಬಂತಾಗಿದೆ. ಒಂದು ವೇಳೆ ಈ ಪಂದ್ಯದಲ್ಲೂ ಸೋತರೆ ಟೀಂ ಇಂಡಿಯಾ ಸರಣಿಯಿಂದ ಹೊರಗುಳಿಯಲಿದೆ. ಇದೀಗ ಮೂರನೇ ಟಿ-20 ಪಂದ್ಯಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಪ್ರಮುಖ ಬದಲಾವಣೆ ಮಾಡಲಾಗುತ್ತಿದೆ. 

ಇದನ್ನು ಓದಿ: ಪಿಎಂ ಕೇರ್ ಫಂಡ್ ಹಗರಣದ ಬಗ್ಗೆ ಬಿಜೆಪಿ ಏಕೆ ತುಟಿ ಬಿಚ್ಚುವುದಿಲ್ಲ?: ಕಾಂಗ್ರೆಸ್

1. ಆರಂಭಿಕ ಫಾರ್ಮ್‌
ಕಳಪೆ ಫಾರ್ಮ್‌ನಲ್ಲಿರುವ ಆರಂಭಿಕ ಬ್ಯಾಟ್ಸ್‌ಮನ್ ರಿತುರಾಜ್ ಗಾಯಕ್ವಾಡ್ ಅವರನ್ನು ಪ್ಲೇಯಿಂಗ್‌ ಇಲೆವೆನ್‌ನಿಂದ ಕೈಬಿಡುವ ಸಾಧ್ಯತೆಯಿದೆ. ಅವರ ಸ್ಥಾನಕ್ಕೆ ವೆಂಕಟೇಶ್ ಅಯ್ಯರ್‌ನ್ನು ಮರುಆಯ್ಕೆ ಮಾಡುವ ಸಂಭವವಿದೆ. ವೆಂಕಟೇಶ್ ಅಯ್ಯರ್ ಮತ್ತು ಇಶಾನ್ ಕಿಶನ್ ಜೋಡಿ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾಗೆ ಓಪನರ್‌ ಆಗಬಹುದು. 

2. ಮಧ್ಯಮ ಮತ್ತು ಕೆಳ ಕ್ರಮಾಂಕ
ಶ್ರೇಯಸ್ ಅಯ್ಯರ್ ಮೂರನೇ ಕ್ರಮಾಂಕದಲ್ಲಿ ಅವಕಾಶ ಪಡೆಯಬಹುದು. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಮತ್ತು ನಾಯಕ ರಿಷಬ್ ಪಂತ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರಬಹುದು. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 5ನೇ ಸ್ಥಾನಕ್ಕೆ ಇಳಿಯುವ ಸಾಧ್ಯತೆ ಇದೆ. ಫಿನಿಶರ್ ದಿನೇಶ್ ಕಾರ್ತಿಕ್ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರಬಹುದು. ಈ ನಂತರ ಅಕ್ಷರ್ ಪಟೇಲ್ 7 ನೇ ಸ್ಥಾನದಲ್ಲಿ ಆಡಬಹುದು. 

3. ಸ್ಪಿನ್ ಬೌಲರ್: 
ಕಳೆದ ಎರಡು ಟಿ20 ಪಂದ್ಯಗಳಲ್ಲಿ ಯುಜುವೇಂದ್ರ ಚಹಾಲ್ ಅವರ ಪ್ರದರ್ಶನ ತೀರಾ ಕಳಪೆಯಾಗಿತ್ತು. ಯುಜುವೇಂದ್ರ ಚಾಹಲ್ ಅವರ ಎಕಾನಮಿ ರೇಟ್‌ 12.20 ಇನ್ನು ಇವರು ಮೊದಲ ಟಿ20ಯಲ್ಲಿ 2.1 ಓವರ್‌ಗಳಲ್ಲಿ 26 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯುಜ್ವೇಂದ್ರ ಚಹಾಲ್ ಬದಲಿಗೆ ಸ್ಥಾನ ಪಡೆಯಲು ಅರ್ಹರಾಗಿದ್ದಾರೆ.

4. ವೇಗದ ಬೌಲರ್
ಮೂರನೇ ಟಿ20 ಪಂದ್ಯದಲ್ಲಿ ವೇಗದ ಬೌಲರ್ ಅವೇಶ್ ಖಾನ್ ಅವರನ್ನು ಹೊರಗಿಟ್ಟು ಅವರ ಸ್ಥಾನದಲ್ಲಿ ಉಮ್ರಾನ್ ಮಲಿಕ್ ಅವರಿಗೆ ಅವಕಾಶ ನೀಡಬಹುದು. ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾದ ವೇಗದ ಬೌಲರ್ ಅವೇಶ್ ಖಾನ್ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ. ಮೊದಲ ಟಿ20 ಪಂದ್ಯದಲ್ಲಿ ಅವೇಶ್ ಖಾನ್ 4 ಓವರ್ ಬೌಲಿಂಗ್ ನಲ್ಲಿ ವಿಕೆಟ್ ಪಡೆಯದೇ 35 ರನ್ ಬಿಟ್ಟುಕೊಟ್ಟಿದ್ದರು. ಇದಾದ ಬಳಿಕ ಎರಡನೇ ಟಿ20 ಪಂದ್ಯದಲ್ಲೂ ಅವೇಶ್ ಖಾನ್ 3 ಓವರ್‌ಗಳ ಬೌಲಿಂಗ್‌ನಲ್ಲಿ 17 ರನ್ ನೀಡಿ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್ ಮತ್ತು ಉಮ್ರಾನ್ ಮಲಿಕ್ ಅವರಿಗೆ ಆಡುವ XI ನಲ್ಲಿ ಅವಕಾಶ ನೀಡಬಹುದು.

ಇದನ್ನು ಓದಿ: ಮೀರತ್‌ನಿಂದ ಕೇವಲ 60 ನಿಮಿಷದಲ್ಲಿ ದೆಹಲಿ ತಲುಪಲಿದೆ ಈ ಕ್ಷಿಪ್ರ ಟ್ರೈನ್‌!

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯಕ್ಕೆ ಆಟಗಾರರ ಸಂಭಾವ್ಯ ಪಟ್ಟಿ:
ವೆಂಕಟೇಶ್ ಅಯ್ಯರ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ರವಿ ಬಿಷ್ಣೋಯ್, ಉಮ್ರಾನ್ ಮಲಿಕ್ ಮತ್ತು ಭುವನೇಶ್ವರ್ ಕುಮಾರ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News