ನವದೆಹಲಿ: ವಿಶಾಖ್ ಪಟ್ಟಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮಾಯಾಂಕ್ ಅಗರ್ವಾಲ್ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ದ್ವಿಶತಕಕ್ಕೆ ಪರಿವರ್ತಿಸಿದ ನಂತರ 502 /7 ಕ್ಕೆ ನಾಯಕ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು.
That will be Tea on Day 2 of the 1st Test.#TeamIndia 450/5
Updates - https://t.co/67i9pBSlAp #FreedomSeries #INDvSA pic.twitter.com/jcCkq3qvlB
— BCCI (@BCCI) October 3, 2019
ಮಾಯಂಕ್ ವೈಯಕ್ತಿಕ ಮೊತ್ತ 215 ಆಗಿದ್ದಾಗ ಡೀನ್ ಎಲ್ಗರ್ ಗೆ ವಿಕೆಟ್ ಒಪ್ಪಿಸಿದರು. ಇದಕ್ಕೂ ಮೊದಲು ರೋಹಿತ್ ಶರ್ಮಾ 176 ರನ್ ಗಳಿಸಿ ಕೇಶವ್ ಮಹಾರಾಜ್ ಅವರ ಬೌಲಿಂಗ್ ನಲ್ಲಿ ಸ್ಟಂಪ್ ಔಟ್ ಆದರು.
Almost immediately, with 502/7 on the board!
What an effort from Virat Kohli's men 👏#INDvSA
— ICC (@ICC) October 3, 2019
ಇನ್ನೊಂದೆಡೆಗೆ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಸೆನುರಾನ್ ಮುತ್ತುಸಾಮಿಯ ಕೈಗೆ ನೇರವಾಗಿ ಕ್ಯಾಚ್ ನೀಡಿ ನಿರ್ಗಮಿಸಿದರು. ವಿಶೇಷವೆಂದರೆ ಈ ಪಂದ್ಯದಲ್ಲಿ ಮಾಯಂಕ್ ಅಗರವಾಲ್ ಮತ್ತು ರೋಹಿತ್ ಶರ್ಮಾ ಅವರು ಮೊದಲ ವಿಕೆಟ್ ಗೆ 317 ರನ್ ಗಳಿಸುವ ಮೂಲಕ ಇದಕ್ಕೂ ಮೊದಲು 2004 ರಲ್ಲಿ ವೀರೇಂದ್ರ ಸೆಹ್ವಾಗ್-ಗೌತಮ್ ಗಂಭೀರ್ ಗಳಿಸಿದ್ದ 218 ರನ್ ದಾಖಲೆಯನ್ನು ಮುರಿದರು.
Innings Break!
Here comes the declaration from #TeamIndia after they post a total of 502/7 in the first innings of the 1st Test.
Live - https://t.co/67i9pBSlAp #FreedomSeries #INDvSA pic.twitter.com/tatbE37FlI
— BCCI (@BCCI) October 3, 2019
ದಕ್ಷಿಣ ಆಫ್ರಿಕಾದ ಪರವಾಗಿ ಕೇಶವ್ ಮಹಾರಾಜ್ ಅವರು ವಿಕೆಟ್ ಗಳನ್ನು ಪಡೆಯುವ ಮೂಲಕ ರನ್ ಗತಿಗೆ ಕಡಿವಾಣ ಹಾಕಿದರು.