ಕ್ರೈಸ್ಟ್ಚರ್ಚ್: ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯ(ICC Women's World Cup) ‘ಮಾಡು ಇಲ್ಲವೇ ಮಡಿ’ ಪಂದ್ಯದಲ್ಲಿ ಭಾರತೀಯ ವನಿತೆಯರು ದಕ್ಷಿಣ ಆಫ್ರಿಕಾಗೆ ಸವಾಲಿನ ಮೊತ್ತದ ಟಾರ್ಗೆಟ್ ನೀಡಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ಮಹಿಳಾ ತಂಡ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 274 ರನ್ ಗಳಿಸಿತು.
ಭಾರತದ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ(71) ಮತ್ತು ಶಫಾಲಿ ವರ್ಮಾ(53) ಭರ್ಜರಿ ಅರ್ಧಶತಕ ಭಾರಿಸಿ ಮಿಂಚಿದರು. ಈ ಜೋಡಿ ಮೊದಲ ವಿಕೆಟ್ ಗೆ 91 ರನ್ ಗಳ ಜೊತೆಯಾಟ ನೀಡಿತು. ಶಫಾಲಿ ವರ್ಮಾ(Shafali Verma) ಔಟಾದ ಬಳಿಕ ಬಂದ ಯಸ್ತಿಕಾ ಭಾಟಿಯಾ(4) ಬಹುಬೇಗನೆ ವಿಕೆಟ್ ಒಪ್ಪಿಸಿದರು. ಬಳಿಕ ಉತ್ತಮವಾಗಿ ಆಟವಾಡುತ್ತಿದ್ದ ಸ್ಮೃತಿ(Smriti Mandhana) ಕೂಡ ಔಟಾದರು. ನಂತರ ಬಂದ ಮಿಥಾಲಿ ರಾಜ್(68) ಆಕರ್ಷಕ ಅರ್ಧಶತಕ ಭಾರಿಸಿ ದಕ್ಷಿಣ ಆಫ್ರಿಕಾ(South Africa Women) ಬೌಲರ್ಗಳನ್ನು ಕಾಡಿದರು. ಅಲ್ಲದೆ ಹರ್ಮನ್ಪ್ರೀತ್ ಕೌರ್(48) ಭರ್ಜರಿ ಬ್ಯಾಟಿಂಗ್ ಮಾಡಿದರು.
ಇನ್ನುಳಿದಂತೆ ಪೂಜಾ ವಸ್ತ್ರಾಕರ್(3), ರಿಚಾ ಘೋಷ್(8), ಸ್ನೇಹ ರಾಣಾ ಔಟಾಗದೆ 1 ಮತ್ತು ದೀಪ್ತಿ ಶರ್ಮಾ ಅಜೇಯ 2 ರನ್ ಬಾರಿಸಿದರು. ದ.ಆಫ್ರಿಕಾ ಪರ ಬೌಲಿಂಗ್ ನಲ್ಲಿ ಶಬ್ನಿಮ್ ಇಸ್ಮಾಯಿಲ್ ಮತ್ತು ಮಸಾಬಟಾ ಕ್ಲಾಸ್ ತಲಾ 2 ವಿಕೆಟ್ ಪಡೆದು ಮಿಂಚಿದರೆ, ಕ್ಲೋಯ್ ಟ್ರೈಯಾನ್ ಮತ್ತು ಅಯಬೊಂಗ ಖಾಕಾ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಇದನ್ನೂ ಓದಿ: Mayanti Langer : ಐಪಿಎಲ್ ನಿರೂಪಣೆಗೆ ಮರಳಿದ ಮಯಾಂತಿ ಲ್ಯಾಂಗರ್!
ದ.ಆಫ್ರಿಕಾದ ಮೊದಲ ವಿಕೆಟ್ ಪತನ!
275 ರನ್ಗಳ ಗೆಲುವಿನ ಗುರಿ ಬೆನ್ನತ್ತಿರುವ ದಕ್ಷಿಣ ಆಫ್ರಿಕಾ(South Africa Women)ಗೆ ಭಾರತೀಯ ಮಹಿಳೆಯರ ಬೌಲಿಂಗ್ ಪಡೆ ಆರಂಭಿಕ ಆಘಾತ ನೀಡಿದೆ. ಸದ್ಯದ ಮಾಹಿತಿ ಪ್ರಕಾರ ದ.ಆಫ್ರಿಕಾ 9 ಓವರ್ ಆಡಿದ್ದು, 1 ವಿಕೆಟ್ ಕಳೆದುಕೊಂಡು 43 ರನ್ ಗಳಿಸಿದೆ. ತಂಡದ ಮೊತ್ತ 14 ರನ್ ಆಗಿದ್ದಾಗ ಆರಂಭಿಕ ಆಟಗಾರ್ತಿ ಲಿಜೆಲ್ಲೆ ಲೀ(6) ರನೌಟ್ಗೆ ಬಲಿಯಾದರು. ಸದ್ಯ ಲಾರಾ ವೊಲ್ವಾರ್ಡ್ಟ್(28) ಮತ್ತು ಲಾರಾ ಗುಡಾಲ್(6) ರನ್ ಗಳಿಸಿ ಆಟವಾಡುತ್ತಿದ್ದಾರೆ.
ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ!
ಭಾರತದ ಪಾಲಿಗೆ(India Women) ಸೆಮೀಸ್ಗೇರುವ ದೃಷ್ಟಿಯಿಂದ ಇದು ‘ಮಾಡು ಇಲ್ಲವೇ ಮಡಿ’ ಪಂದ್ಯ ಎನಿಸಿದೆ. ಆಡಿರುವ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿರುವ ಮಿಥಾಲಿ ರಾಜ್ ನೇತೃತ್ವದ ಭಾರತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಗೆದ್ದರೆ ಮಾತ್ರ ಸೆಮೀಸ್ಗೆ ಲಗ್ಗೆ ಇಡಲಿದೆ. ಸೋತರೆ ಟೂರ್ನಿಯಿಂದ ಹೊರಬೀಳಲಿದೆ.
ಇದನ್ನೂ ಓದಿ: CSK vs KKR: ಐಪಿಎಲ್ 2022ರ ಮೊದಲ ಬಾಲೇ ನೋ ಬಾಲ್!
ಭಾರತದ ಸೆಮಿಫೈನಲ್ ಪ್ರವೇಶಿಸುವ ಲೆಕ್ಕಾಚಾರ
ಈಗಾಗಲೇ ಆಸ್ಪ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸೆಮಿ ಫೈನಲ್ ಪ್ರವೇಶಿಸಿದ್ದು, ಉಳಿದ 2 ಸ್ಥಾನಗಳಿಗಾಗಿ ಭಾರತ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ರೌಂಡ್ ರಾಬಿನ್ ಹಂತದ ಪಂದ್ಯಗಳನ್ನು ಪೂರ್ಣಗೊಳಿಸಿರುವ ವಿಂಡೀಸ್ 7 ಅಂಕ ಸಂಪಾದಿಸಿದ್ದು, ಇಂಗ್ಲೆಂಡ್ ಬಳಿ 6 ಅಂಕ ಇದೆ. ಶನಿವಾರ ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್ ಸೆಣಸಲಿದ್ದು, ಗೆದ್ದರೆ 3ನೇ ತಂಡವಾಗಿ ಸೆಮೀಸ್ ಪ್ರವೇಶಿಸಲಿದೆ. ಆಗ 4ನೇ ಸ್ಥಾನಕ್ಕಾಗಿ ಭಾರತ ಹಾಗೂ ವಿಂಡೀಸ್ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ. ಒಂದು ವೇಳೆ ಭಾರತ-ದ.ಆಫ್ರಿಕಾ ಪಂದ್ಯ ಮಳೆಯಿಂದ ರದ್ದಾದರೆ ಭಾರತಕ್ಕೆ ಲಾಭವಾಗಲಿದೆ. ನೆಟ್ ರನ್ರೇಟ್ ಆಧಾರದಲ್ಲಿ ವಿಂಡೀಸನ್ನು ಹಿಂದಿಕ್ಕಿ ಮಿಥಾಲಿ ಪಡೆ ನಾಕೌಟ್ಗೆ ಲಗ್ಗೆ ಇಡಲಿದೆ. ಒಂದು ವೇಳೆ ಬಾಂಗ್ಲಾ ವಿರುದ್ಧ ಇಂಗ್ಲೆಂಡ್, ದ.ಆಫ್ರಿಕಾ ವಿರುದ್ಧ ಭಾರತ ಸೋತರೆ ವಿಂಡೀಸ್ ನೇರವಾಗಿ ಸೆಮೀಸ್ ತಲುಪಲಿದೆ. ನೆಟ್ ರನ್ರೇಟ್ ಅಧಾರದಲ್ಲಿ ಇಂಗ್ಲೆಂಡ್ ಅಥವಾ ಭಾರತ ಅಂತಿಮ 4ರ ಘಟ್ಟಕ್ಕೆ ಅರ್ಹತೆ ಪಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.