ನವದೆಹಲಿ: ಅಬುಧಾಬಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಐಪಿಎಲ್ 2021 ರ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ಪರವಾಗಿ ವೇಗದ ಅರ್ಧಶತಕವನ್ನು ದಾಖಲಿಸಿದ್ದಾರೆ.
ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಈ ಟೂರ್ನಿಯಲ್ಲಿ ವೇಗವಾಗಿ ಗಳಿಸಿದ ಮುಂಬೈ ಇಂಡಿಯನ್ಸ್ (Mumbai Indians) ಆಟಗಾರ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: IPL 2021: Playoff ಗೆ ಎಂಟ್ರಿ ಕೊಡಲು ಮುಂಬೈ ಇಂಡಿಯನ್ಸ್ ತಂಡವು ಮಾಡಬೇಕಾಗಿರುವುದೇನು ಗೊತ್ತೇ?
ಕಿಶನ್ ಈಗ ಜಂಟಿಯಾಗಿ ಹಾರ್ದಿಕ್ ಪಾಂಡ್ಯ ಮತ್ತು ಕೀರನ್ ಪೊಲ್ಲಾರ್ಡ್ ಜೊತೆಗೆ ವೇಗದ ಅರ್ಧಶತಕ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.
This is मुंबई ची spirit! We. Keep. Fighting. On. 💙
Ishan, you beauty ➡️ 84 (32)#OneFamily #MumbaiIndians #IPL2021 #SRHvMI @ishankishan51 pic.twitter.com/ZWn9KxGsmg
— Mumbai Indians (@mipaltan) October 8, 2021
2018 ರಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಗಳಿಸಲು ಕೇವಲ 14 ಎಸೆತಗಳನ್ನು ತೆಗೆದುಕೊಂಡ ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಅವರ ಹೆಸರಿನಲ್ಲಿ ಐಪಿಎಲ್ ವೇಗದ ಅರ್ಧಶತಕದ ದಾಖಲೆಯಾಗಿದೆ.ಈಗ ಕಿಶನ್ ಅವರು ಐಪಿಎಲ್ ಇತಿಹಾಸದಲ್ಲಿ ಜಂಟಿ ಮೂರನೇ ಅತಿ ವೇಗದ ಅರ್ಧಶತಕವನ್ನು ಗಳಿಸಿದ್ದಾರೆ.
ಇದನ್ನೂ ಓದಿ: "ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡಕ್ಕೆ ಪೂರ್ಣಾವಧಿ ಕೋಚ್ ಆಗಬಾರದು"
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.