ನವದೆಹಲಿ: 2022ರ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ(Indian Premier League 2022) ಮೆಗಾ ಹರಾಜಿಗೂ ಮುನ್ನ ವಿವಿಧ ಫ್ರಾಂಚೈಸಿಗಳು ತಮ್ಮ ಅಗ್ರಮಾನ್ಯ ಆಟಗಾರರನ್ನು ಉಳಿಸಿಕೊಳ್ಳಲು ಆರಂಭಿಸಿವೆ. ಕೆಲ ವರದಿಗಳ ಪ್ರಕಾರ ಕನ್ನಡಿಗ ಕೆ.ಎಲ್.ರಾಹುಲ್ ಪಂಜಾಬ್ ಕಿಂಗ್ಸ್ ನಿಂದ ದೂರವಾಗಲು ನಿರ್ಧರಿಸಿದ್ದಾರಂತೆ. ಪ್ರಸ್ತುತ ಭಾರತೀಯ ಬ್ಯಾಟಿಂಗ್ನ ಪ್ರಮುಖ ಆಧಾರ ಸ್ತಂಭಗಳಲ್ಲಿ ಒಂದಾಗಿರುವ ರಾಹುಲ್, ಸಂಜೀವ್ ಗೋಯೆಂಕಾರ ಆರ್ಪಿಎಸ್ ಗ್ರೂಪ್ ಒಡೆತನದ ಹೊಸತಂಡ ಲಕ್ನೋ ಫ್ರಾಂಚೈಸಿ(Lucknow Franchise)ಯೊಂದಿಗೆ ಮಾತುಕತೆ ನಡೆಸುತ್ತಿದ್ದಾರಂತೆ.
14ನೇ ಆವೃತ್ತಿಯ ಐಪಿಎಲ್(IPL 2021) ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನೆಡೆಸಿದ್ದ ಕೆ.ಎಲ್.ರಾಹುಲ್(KL Rahul) ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಐಪಿಎಲ್ ಋತುವಿನಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಅವರು ನಿಯಮಿತವಾಗಿ ಕಾಣಿಸಿಕೊಂಡಿದ್ದಾರೆ. ರಾಹುಲ್ ಅವರ ನಾಯಕತ್ವದ ಬಗ್ಗೆಯೂ ಹಿರಿಯ ಆಟಗಾರರಿಂದ ಹೆಚ್ಚಿನ ಪ್ರಶಂಸೆ ಸಿಕ್ಕಿದೆ. ಹೀಗಾಗಿ ಹೊಸ ಫ್ರಾಂಚೈಸಿಯನ್ನು ಮುನ್ನಡೆಸಲು ರಾಹುಲ್ ಅವರೇ ಸೂಕ್ತವೆಂಬುದು RPS ಗ್ರೂಪ್ ಅನ್ನು ಪ್ರೇರೇಪಿಸಿದೆ. ಆದರೆ ರಾಹುಲ್ ನಾಯಕನಾಗಿ ಯಾವುದೇ ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿಲ್ಲ.
ಇದನ್ನೂ ಓದಿ: Rohit Sharma : ಹೆಚ್ಚು ದಿನ ಉಳಿಯಲ್ಲ ರೋಹಿತ್ ನಾಯಕತ್ವ : ಶೀಘ್ರದಲ್ಲೇ ಈ ಆಟಗಾರ ಟೀಂ ಇಂಡಿಯಾ ಕ್ಯಾಪ್ಟನ್!
ಲಕ್ನೋ ಫ್ರಾಂಚೈಸಿಗೆ ರಾಹುಲ್ ನಾಯಕರಾಗುತ್ತಾರೆಂಬ ಸುದ್ದಿ ತಿಳಿದು ಸೋಷಿಯಲ್ ಮೀಡಿಯಾ(Social Media)ದಲ್ಲಿ ಅವರ ಅಭಿಮಾನಿಗಳು ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಕಾನ್ಪುರ ಟೆಸ್ಟ್ನ ಪಾದಾರ್ಪಣೆ ಪಂದ್ಯದಲ್ಲಿಯೇ ಶತಕ ಸಿಡಿಸಿರುವ ಶ್ರೇಯಸ್ ಅಯ್ಯರ್ ಕೂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತಮ್ಮನ್ನು ಉಳಿಸಿಕೊಳ್ಳದ ಹಿನ್ನೆಲೆ ಫ್ರಾಂಚೈಸಿ ಜೊತೆ ಮಾತುಕತೆ ನಡೆಸುತ್ತಿದ್ದಾರಂತೆ.
ಈ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡವು ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ರಿಷಭ್ ಪಂತ್, ಆಲ್ ರೌಂಡರ್ ಅಕ್ಷರ್ ಪಟೇಲ್, ಪೃಥ್ವಿ ಶಾ ಮತ್ತು ವೇಗಿ ಅನ್ರಿಚ್ ನಾರ್ಟ್ಜೆಯನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ. ವರದಿಯ ಪ್ರಕಾರ ಶ್ರೇಯಸ್ ಅಯ್ಯರ್ ದೆಹಲಿ ತಂಡವನ್ನು ಮುನ್ನಡೆಸಲು ಬಯಸಿದ್ದರು. ಆದರೆ ಫ್ರಾಂಚೈಸಿಯು ಪಂತ್ ಅವರ ನಾಯಕರಾಗಿ ಮುಂದುವರಿಯಲು ಉತ್ಸುಕವಾಗಿತ್ತು. ಹೀಗಾಗಿ ಅಯ್ಯರ್ ಕೂಡ ಈಗ ಹೊಸ ತಂಡದತ್ತ ಮುಖ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: IPL 2022 ರ ಮೆಗಾ ಹರಾಜಿನಲ್ಲಿ CSK, MI, DC, RCB, KKR ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಇಲ್ಲಿದೆ
2 ಹೊಸ ಫ್ರಾಂಚೈಸಿಗಳು ಹೊಸದಾಗಿ ಸೇರ್ಪಡೆಗೊಂಡಿರುವುದು ಐಪಿಎಲ್ನ ಜನಪ್ರಿಯತೆಯನ್ನು ಹೆಚ್ಚಿಸುತ್ತದೆ. ಮೆಗಾ ಹರಾಜಿನ ಸಮಯದಲ್ಲಿ ಮಾರಾಟವಾಗದೆ ಉಳಿದಿದ್ದ ಹಲವಾರು ಪ್ರತಿಭಾವಂತ ಭಾರತೀಯ ಮತ್ತು ವಿದೇಶಿ ಆಟಗಾರರು ಅಂತಿಮವಾಗಿ ಶ್ರೀಮಂತ ಲೀಗ್ನಲ್ಲಿ ಕಾಣಿಸಿಕೊಳ್ಳಲು ಸುವರ್ಣಾವಕಾಶ ಸಿಕ್ಕಂತಾಗಿದೆ. ಹೊಸ ತಂಡಗಳಿಂದ ಅನೇಕ ಆಟಗಾರರಿಗೆ ಅವಕಾಶ ಲಭಿಸಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.