IPL 2022: ಮೆಗಾ ಹರಾಜಿನಲ್ಲಿ ಈ 3 ಅಪಾಯಕಾರಿ ಬೌಲರ್‌ಗಳನ್ನು ಖರೀದಿಸಲಿದೆ ಮುಂಬೈ!

2022ರ ಐಪಿಎಲ್ ಟೂರ್ನಿಯ ಮೆಗಾ ಹರಾಜು ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು 13ರಂದು ನಡೆಯಲಿದೆ. ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡವು 3 ಅಪಾಯಕಾರಿ ಬೌಲರ್‌ಗಳನ್ನು ಖರೀದಿಸಲು ಆಸಕ್ತಿ ಹೊಂದಿದೆ. ಈ ಮೂವರು ಬೌಲರ್ ಗಳನ್ನು ಖರೀದಿಸುವುದು ಮುಂಬೈಗೆ ದೊಡ್ಡ ಸವಾಲಾಗಿದೆ.   

Written by - Puttaraj K Alur | Last Updated : Feb 7, 2022, 02:50 PM IST
  • 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೆಗಾ ಹರಾಜು ಬೆಂಗಳೂರಿನಲ್ಲಿ ಫೆ.12, 13ರಂದು ನಡೆಯಲಿದೆ
  • ಮೂವರು ಅಪಾಯಕಾರಿ ಬೌಲರ್ ಗಳನ್ನು ಖರೀದಲು ಮುಂಬೈ ಇಂಡಿಯನ್ಸ್ ಆಸಕ್ತಿಯನ್ನು ಹೊಂದಿದೆ
  • ಟ್ರೆಂಟ್ ಬೌಲ್ಟ್, ಪ್ಯಾಟ್ ಕಮ್ಮಿನ್ಸ್ ಮತ್ತು ಯುಜ್ವೇಂದ್ರ ಚಹಾಲ್ ಖರೀದಿಸಲು ಮುಂಬೈ ಉತ್ಸುಕ
IPL 2022: ಮೆಗಾ ಹರಾಜಿನಲ್ಲಿ ಈ 3 ಅಪಾಯಕಾರಿ ಬೌಲರ್‌ಗಳನ್ನು ಖರೀದಿಸಲಿದೆ ಮುಂಬೈ!  title=
3 ಅಪಾಯಕಾರಿ ಬೌಲರ್‌ಗಳನ್ನು ಖರೀದಿಸಲಿದೆ ಮುಂಬೈ!

ನವದೆಹಲಿ: 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೆಗಾ ಹರಾಜು ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು 13ರಂದು ನಡೆಯಲಿದೆ. ಈ ಬಾರಿ ಆಟಗಾರರ ಭವಿಷ್ಯ 10 ತಂಡಗಳ ಕೈಯಲ್ಲಿರಲಿದೆ. ಒಟ್ಟು 590 ಆಟಗಾರರ ಭವಿಷ್ಯ ಈ 2 ದಿನಗಳಲ್ಲಿ ನಿರ್ಧಾರವಾಗಲಿದೆ. ಮುಂಬೈ ಇಂಡಿಯನ್ಸ್(Mumbai Indians) 2022ರ ಐಪಿಎಲ್ ಟೂರ್ನಿಗಾಗಿ ತಮ್ಮ ತಂಡದಲ್ಲಿ ರೋಹಿತ್ ಶರ್ಮಾ(Rohit Sharma), ಜಸ್ಪ್ರೀತ್ ಬುಮ್ರಾ(Jasprit Bumrah), ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ಕೀರಾನ್ ಪೊಲಾರ್ಡ್(Kieron Pollard) ಅವರನ್ನು ಉಳಿಸಿಕೊಂಡಿದೆ. ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡವು 3 ಅಪಾಯಕಾರಿ ಬೌಲರ್‌ಗಳನ್ನು ಖರೀದಿಸಲು ಆಸಕ್ತಿ ಹೊಂದಿದೆ. ಆ 3 ಬೌಲರ್‌ಗಳು ಯಾರು ಅಂತೀರಾ..?  

1. ಟ್ರೆಂಟ್ ಬೌಲ್ಟ್

ಟ್ರೆಂಟ್ ಬೌಲ್ಟ್(Trent Boultಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರಾಗಿದ್ದು, ಅವರನ್ನು ಈ ವರ್ಷ ಉಳಿಸಿಕೊಳ್ಳಲಾಗಿಲ್ಲ. ಆದರೆ ತಂಡವು ತನ್ನ ಹಳೆಯ ಆಟಗಾರರ ಮೇಲೆ ಅವಲಂಬಿಸಿರುವುದರಿಂದ ಫ್ರಾಂಚೈಸಿ ಅವರನ್ನು ಮತ್ತೆ ಖರೀದಿಸಲು ಪ್ರಯತ್ನಿಸಲಿದೆ ಎಂದು ಹೇಳಲಾಗುತ್ತಿದೆ. 2020ರ ಋತುವಿನಲ್ಲಿ 25 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಮುಂಬೈಗೆ 5ನೇ ಬಾರಿ ಪ್ರಶಸ್ತಿ ಗೆಲ್ಲಿಸಿಕೊಡುವಲ್ಲಿ ಬೋಲ್ಟ್ ಪ್ರಮುಖ ಪಾತ್ರ ವಹಿಸಿದ್ದರು. ವಾಂಖೆಡೆ ಸ್ಟೇಡಿಯಂನ ಸ್ಥಿತಿ ಅವರ ಬೌಲಿಂಗ್‌ಗೆ ವರದಾನವಾಗಿದೆ, ಇದು ತಂಡಕ್ಕೂ ಲಾಭದಾಯಕವಾಗಿದೆ.

ಇದನ್ನೂ ಓದಿ: U19 Cricket World Cup: ವಿಶ್ವಕಪ್ ವಿಜೇತ ಪ್ರತಿಯೊಬ್ಬ ಆಟಗಾರನಿಗೆ 40 ಲಕ್ಷ ರೂ. ನಗದು ಬಹುಮಾನ!

2. ಪ್ಯಾಟ್ ಕಮ್ಮಿನ್ಸ್

ಮುಂಬೈ ಇಂಡಿಯನ್ಸ್ ಕನಿಷ್ಠ 2 ಸ್ಟಾರ್ ವಿದೇಶಿ ವೇಗದ ಬೌಲರ್‌ಗಳನ್ನು ತಮ್ಮ ತಂಡದಲ್ಲಿ ಇರಿಸಿಕೊಳ್ಳಲು ಬಯಸುತ್ತದೆ. ಈ ಕಾರಣದಿಂದ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್(Pat Cummins)  ಖರೀದಿಗೆ ತಂಡವು ಆಸಕ್ತಿ ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ಆಟಗಾರನ ಮೇಲೆ ಫ್ರಾಂಚೈಸಿ ನೀರಿನಂತೆ ಹಣ ಸುರಿಯಲು ಸಿದ್ಧವಾಗಿದೆ. ಕಮ್ಮಿನ್ಸ್ ಕಳೆದ ವರ್ಷದವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್‌ನ ಭಾಗವಾಗಿದ್ದರು. ಇವರನ್ನು 15.5 ಕೋಟಿ ರೂ. ಕೊಟ್ಟು ಹೆಚ್ಚಿನ ಬೆಲೆಗೆ ಖರೀದಿಸಲಾಗಿತ್ತು.

3. ಯುಜ್ವೇಂದ್ರ ಚಹಾಲ್

ಯುಜ್ವೇಂದ್ರ ಚಹಾಲ್(Yuzvendra Chahal) ಇಲ್ಲಿಯವರೆಗೆ ಆರ್‌ಸಿಬಿಯಲ್ಲಿದ್ದರು, ಅವರನ್ನು ವಿರಾಟ್ ಕೊಹ್ಲಿಯ ನೆಚ್ಚಿನ ಆಟಗಾರನೆಂದು ಪರಿಗಣಿಸಲಾಗಿದೆ. ಚಹಾಲ್ ಐಪಿಎಲ್‌ನಲ್ಲಿ 139 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2011 ಮತ್ತು 2013ರ ನಡುವೆ ಚಹಾಲ್ ಮುಂಬೈ ಇಂಡಿಯನ್ಸ್‌ ನ ಭಾಗವಾಗಿದ್ದರು. ಇದೀಗ ರೋಹಿತ್ ಶರ್ಮಾ ತಂಡ ಅವರನ್ನು ಮರಳಿ ತಂಡಕ್ಕೆ ಕರೆತರಲು ಉತ್ಸುಕವಾಗಿದೆ. ಈ ಸ್ಪಿನ್ನರ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ ಮತ್ತು ನಿರ್ಣಾಯಕ ಸಂದರ್ಭಗಳಲ್ಲಿ ಅದ್ಭುತ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಈಗ ಹರಾಜಿನ ವೇಳೆ ಮುಂಬೈ ಚಹಾಲ್ ನನ್ನು ಖರೀದಿಸಲು ಹರಸಾಹಸ ಪಡಬೇಕಾಗುತ್ತದೋ ಕಾದು ನೋಡಬೇಕಿದೆ.

ಇದನ್ನೂ ಓದಿ: India vs West Indies, 1st ODI: ಭಾರತಕ್ಕೆ ಆರು ವಿಕೆಟ್ ಗಳ ಗೆಲುವು

ಮುಂಬೈನ ಬಳಿ ಇರುವ ಒಟ್ಟು ಹಣವೆಷ್ಟು..?

ಈ 3 ಆಟಗಾರರನ್ನು ಖರೀದಿಸುವುದು ಮುಂಬೈ ಇಂಡಿಯನ್ಸ್‌ ಗೆ ಸುಲಭವಲ್ಲ. 4 ಅಗ್ರ ಆಟಗಾರರನ್ನು ಉಳಿಸಿಕೊಂಡ ನಂತರ ಮುಂಬೈ ತಂಡದ ಪರ್ಸ್‌ನಲ್ಲಿ ಕೇವಲ 48 ಕೋಟಿ ರೂ. ಮಾತ್ರ ಉಳಿದಿದೆ. ಹೀಗಾಗಿ ಮೆಗಾ ಹರಾಜಿನ(IPL 2022 Mega Auction) ಸಮಯದಲ್ಲಿ ಯೋಚಿಸಿ ಆಟಗಾರರನ್ನು ಖರೀಸುವ ಹೊರೆ ತಂಡದ ಮೇಲಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News