ಕೊಲ್ಕತ್ತಾ : ಕರುಣ್ ನಾಯರ್ ರವರ ಭರ್ಜರಿ ಅಜೇಯ 148 ರನ್ ಗಳ ನೆರವಿನಿಂದ ಇಲ್ಲಿನ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ವಿದರ್ಭ ವಿರುದ್ದ ಸೆಮಿಫೈನಲ್ ಪಂದ್ಯದಲ್ಲಿ ಸೋಮವಾರದಂದು ಎರಡನೇಯ ದಿನದಾಟದ ಅಂತ್ಯಕ್ಕೆ ಕರ್ನಾಟಕ 109 ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ,
ಕರುಣ್ ನಾಯರ್ ರವರ ಶತಕ ಮತ್ತು ನಾಯಕ ವಿನಯಕುಮಾರ್ ತಮ್ಮ ಗಾಯದ ಹೊರತಾಗಿಯೂ ಬ್ಯಾಟಿಂಗ್ ಮಾಡುವ ಮೂಲಕ 9ನೇ ವಿಕೆಟ್ ಗೆ 69 ರನ್ ಗಳ ಜೊತೆಯಾಟದಿಂದಾಗಿ ಕರ್ನಾಟಕ ವಿದರ್ಭದ ವಿರುದ್ದ ಗೌರವಯುತ ಮುನ್ನಡೆಯನ್ನು ಕಾಯ್ದುಕೊಳ್ಳಲು ಯಶಸ್ವಿಯಾಗಿದೆ.
ಕರ್ನಾಟಕ ಎರಡನೇಯ ದಿನದ ಅಂತ್ಯಕ್ಕೆ ಕರುಣ್ 148, ಸಿ ಎಂ ಗೌತಮ್ 73, ವಿನಯಕುಮಾರ್ 20 ರನ್ ಗಳ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 294 ರನ್ ಗಳನ್ನು ಗಳಿಸಿದೆ. ವಿದರ್ಭ ತಂಡದ ಪರ ರಜನೀಶ ಗುರ್ಬಾನಿ ಕರ್ನಾಟಕದ ಐದು ವಿಕೆಟ್ ಗಳನ್ನು ತೆಗೆದುಕೊಳ್ಳುವ ಮೂಲಕ ರನ್ ಗತಿಗೆ ಕಡಿವಾಣ ಹಾಕಿದರು.
ಇದಕ್ಕೂ ಮೊದಲು ವಿದರ್ಭ ತಂಡ ತನ್ನ ಮೊದಲ ಇನಿಂಗ್ಸ್ ನಲ್ಲಿ 185 ರನ್ ಗಳಿಗೆ ಆಲೌಟ್ ಆಗಿತ್ತು.