ಮುಂಬೈ: ಇಲ್ಲಿನ ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ಏಕದಿನ ಪಂದ್ಯ ಆಡುತ್ತಿರುವ ಭಾರತ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಭಾರತ ತಂಡವು ರೋಹಿತ್ ಶರ್ಮಾ (162) ಮತ್ತು ಅಂಬಟಿ ರಾಯಡು(100) ಅವರ ಭರ್ಜರಿ ಶತಕದ ನೆರವಿನಿಂದ 50 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 377 ರನ್‌ಗಳ ಬೃಹತ್ ಮೊತ್ತ ಗಳಿಸಿದೆ.
Going strong and how 💪
150 up for the HITMAN. pic.twitter.com/zJfl5zygB1
— BCCI (@BCCI) October 29, 2018
ರೋಹಿತ್ ಶರ್ಮಾ ಅವರು ಒಟ್ಟು 20 ಬೌಂಡರಿ ಹಾಗೂ 4 ಸಿಕ್ಸರ್ ಬಾರಿಸುವ ಮೂಲಕ ತಮ್ಮ 21 ನೆ ಏಕದಿನ ಶತಕವನ್ನು ಗಳಿಸಿದರು.ಇದಕ್ಕೂ ಮೊದಲು ಕೊಹ್ಲಿ ಈ ಬಾರಿಯೂ ಸತತ ಶತಕ ದಾಖಲಿಸುತ್ತಾರೆ ಎಂದು ತಿಳಿದಿದ್ದ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು ರೊಚ್ ಅವರ ಅದ್ಬುತ ಬೌಲಿಂಗ್ ಬಲಿಯಾಗಿ ಪೆವಲಿನ್ ಗೆ ತೆರಳಿದರು.ನಂತರ ಬಂದಂತಹ ಅಂಬಟಿ ರಾಯ್ಡು ಕೇವಲ 81 ಎಸೆತಗಳಲ್ಲಿ ಶತಕಗಳಿಸುವ ಮೂಲಕ ಭಾರತ ಬೃಹತ್ ಮೊತ್ತ ಗಳಿಸಲು ನೆರವಾದರು.
.@RayuduAmbati departs after scoring his 3rd 💯 off 80 deliveries #INDvWI.
What an innings from Rayudu this has been! pic.twitter.com/0flMaT1Cbc
— BCCI (@BCCI) October 29, 2018
ಈಗಾಗಲೇ ಒಟ್ಟು ಮೂರು ಏಕದಿನ ಪಂದ್ಯಗಳಲ್ಲಿ ಉಭಯತಂಡಗಳು ಸಮಬಲ ಸಾಧಿಸಿವೆ.ಮೂರು ಪಂದ್ಯಗಳಲ್ಲಿ ಒಂದು ಪಂದ್ಯ ಟೈ ಆಗಿರುವುದರಿಂದ ಇಂದಿನ ಪಂದ್ಯ ಎರಡು ತಂಡಗಳಿಗೆ ಮಹತ್ವದ್ದಾಗಿದೆ.