ಚಿಕ್ಕಬಳ್ಳಾಪುರ: ಸಾಮಾಜಿಕ ಕಳಕಳಿಯ ಉದ್ದೇಶದಿಂದ ಚಿಕ್ಕಬಳ್ಳಾಪುರದ ಸತ್ಯಸಾಯಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ ಟಿ20 ಟಿ20 ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ನಾಯಕತ್ವದ ಒನ್ ವಲ್ಡ್ ತಂಡ ಗೆಲುವು ಸಾಧಿಸಿದೆ.
ಇಲ್ಲಿನ ಸಾಯಿಕೃಷ್ಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಸಚಿನ್ ನಾಯಕತ್ವದ ತಂಡ ಒನ್ ಫ್ಯಾಮಿಲಿ ತಂಡ ನೀಡಿದ 182 ರನ್ ಗಳನ್ನ ಒಂದು ಎಸೆತ ಬಾಕಿ ಇರುವಂತೆ ಮುಟ್ಟಿತು. ಕೊನೆಯ ಎರಡು ಎಸೆತಗಳಲ್ಲಿ ಮೂರು ರನ್ ಇರುವಾಗ ಸ್ಟ್ರೇಕ್ ನಲ್ಲಿದ್ದ ಇರ್ಫಾನ್ ಪಠಾಣ್ ಚೆಂಡನ್ನು ಸಿಕ್ಸರ್ ಗೆ ಅಟ್ಟಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದನ್ನೂ ಓದಿ:ಪಂದ್ಯದ ವೇಳೆ ಅಂಪೈರ್ಗೆ ಕಿಚಾಯಿಸಿದ ರೋಹಿತ್ ಶರ್ಮಾ, ವಿಡಿಯೋ ವೈರಲ್!
ಇದಕ್ಕೂ ಮುನ್ನ ಯುವರಾಜ್ ಸಿಂಗ್ ನಾಯಕತ್ವದ ಒನ್ ಫ್ಯಾಮಿಲಿ ತಂಡವು ಬ್ಯಾಟಿಂಗ್ ಮಾಡಿ 181 ರನ್ ಗಳ ಸ್ಪರ್ಧಾತಕ ಮೊತ್ತ ಕಲೆ ಹಾಕಿತು. ಆರಂಭಿಕ ದಾಂಡಿಗರಾಗಿ ಕಣಕ್ಕಿಳಿದ ಡಾರೇನ್ ಮ್ಯಾಡಿ ಹಾಗೂ ರಮೇಶ್ ಕಲವಿತರಂಗ ಉತ್ತಮ ಆರಂಭ ಒದಗಿಸಿದರು. ತಂಡವು 39 ರನ್ ಗಳಿಸಿದ್ದಾಗ ರಮೇಶ್ ಔಟಾದರು.
ನಂತರ ಬಂದ ಮೊಹಮ್ಮದ್ ಕೈಫ್ 8 ರನ್ ಗೆ ಕ್ಯಾಚ್ ಇತ್ತು ನಿರ್ಗಮಿಸಿದರು. ಇನ್ನೊಂದು ತುದಿಯಲ್ಲಿ ಡಾರೇನ್ ಮ್ಯಾಡಿ ಸೊಗಸಾದ ಅರ್ಧಶತಕ ಗಳಿಸಿ ಪೆವಿಲಿಯನ್ ಸೇರಿದರು. ಪಾರ್ಥಿವ್ ಪಟೇಲ್ (19) ಹೆಚ್ಚು ಒತ್ತು ನಿಲ್ಲಲಿಲ್ಲ. ಈ ವೇಳೆ ಯುಸೂಫ್ ಪಠಾಣ್ ಹಾಗೂ ಯುವರಾಜ್ ಸಿಂಗ್ ರನ್ ಗತಿ ಹೆಚ್ಚಿಸಿದರು. ಯೂಸುಫ್ ಆಕರ್ಷಕ ಸಿಕ್ಸರ್ ಗಳನ್ನ ಸಿಡಿಸಿ 38 ರನ್ ಗೆ ಔಟಾದರೆ, ಯುವರಾಜ್ ಸಿಂಗ್ 23 ರನ್ ಬಾರಿಸಿ ಅಶೋಕ್ ದಿಂಡಾ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ:ಚೆಸ್ ಮಾಸ್ಟರ್ ವಿಶ್ವನಾಥ್ ಆನಂದ್ ಜೊತೆ ಚೆಸ್ ಆಡಿದ ಸಿಎಂ ಸಿದ್ದರಾಮಯ್ಯ
182 ರನ್ ಗಳ ಗುರಿ ಪಡೆದ ಒನ್ ವಲ್ಡ್ ತಂಡಕ್ಕೆ ಸಚಿನ್ ಹಾಗೂ ನಮನ್ ಒಜಾ ಆರಂಭದಲ್ಲಿ ಭದ್ರ ಬುನಾದಿ ಹಾಕಿಕೊಟ್ಟರು. ರನ್ ಗತಿ ಹೆಚ್ಚಿಸುವ ಭರದಲ್ಲಿ 28 ರನ್ ಗಳಿಸಿದ್ದ ನಮನ್ ಒಜಾ ದೊಡ್ಡ ಹೊಡೆತಕ್ಕೆ ಕೈ ಹಾಕಿ ಪೆವಿಲಿಯನ್ ಗೆ ಮರಳಿದರು. ಇನ್ನೊಂದೆಡೆ ತಮ್ಮದೆ ಸ್ಟೈಲ್ ನಲ್ಲಿ ಬೌಂಡರಿ- ಸಿಕ್ಸರ್ ಅಟ್ಟಿ ಉತ್ತಮ ಅಡಿಪಾಯ ಹಾಕಿದ್ದ ಸಚಿನ್ ಮುತ್ಯಯ್ಯ ಮುರುಳಿಧರನ್ ಬೌಲಿಂಗ್ ನ ಮೊದಲ ಎಸೆತದಲ್ಲೇ ಮೊಹಮ್ಮದ್ ಕೈಫ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ನಂತರ ಅಂಕಣಕ್ಕೆ ಬಂದ ಆಲ್ಫೇರ್ ಪೀಟರ್ ಸನ್ ಸ್ಕ್ರೀಸ್ ಗೆ ಅಂಟಿಕೊಂಡು ಭರ್ಜರಿ ಬ್ಯಾಂಟಿಗ್ ಮಾಡಿದ್ರು. ಈ ವೇಳೆ ಉಪುಲ್ ತರಂಗ ಉಪಯುಕ್ತ 23 ರನ್ ಗಳಿಸಿ ಔಡ್ ಆದರು. ಕೊನೆಯ ಎರಡು ಓವರ್ ಗಳಲ್ಲಿ 17 ರನ್ ಅವಶ್ಯಕತೆ ಇದ್ದಾಗ ಚಮಿಂದಾ ವಾಸ್ ಬೌಲಿಂಗ್ ನಲ್ಲಿ ಎರಡನೇ ಎಸೆತವನ್ನು ಸಿಕ್ಸರ್ ಅಟ್ಟಿದರು. ನಂತರ ದೊಡ್ಡ ಶಾಟ್ ಗೆ ಕೈ ಹಾಕಿದ ಪಿಟರ್ ಸನ್ (74) ಕೈಫ್ ಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು.
ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ ಮಾಜಿ ಕ್ರಿಕೆಟಿಗರಿಂದ ಸುದ್ದಿಗೋಷ್ಠಿ
ಕೊನೆಯ ಓವರ್ ನಲ್ಲಿ 7 ರನ್ ಬೇಕಿದ್ದಾಗ ಇರ್ಫಾನ್ ಪಠಾಣ್ ಸಿಕ್ಸ್ ಚಚ್ಚಿ ಗೆಲುವಿಗೆ ಕಾರಣರಾದರು. ಪಂದ್ಯ ಪುರುಷೋತ್ತಮರಾಗಿ ಆಲ್ಪೇರ್ ಪೀಟರ್ ಸನ್,ಬೆಸ್ಟ್ ಬ್ಯಾಟರ್ ಆಗಿ ಡಾರೇನ್ ಮ್ಯಾಡಿ ಹಾಗೂ ಬೆಸ್ಟ್ ಬೌಲರ್ ಆಗಿ ಚಮಿಂದಾ ವಾಸ್ ಪ್ರಶಸ್ತಿ ಪಡೆದರು. ಬೆಸ್ಟ್ ಫಿಲ್ಡರ್ ಆಗಿ ಮೂರು ಕ್ಯಾಚ್ ಪಡೆದ ಮಹಮ್ಮದ್ ಕೈಫ್ ಅರ್ಹವಾಗಿ ಪ್ರಶಸ್ತಿ ಪಡೆದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.