Shahid Afridi's Sister Died : ವಿಶ್ವಕಪ್ 2023 ರ ನಡುವೆ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ಅಕ್ಟೋಬರ್ 17 ಈ ಕ್ರಿಕೆಟಿಗನ ಪಾಲಿಗೆ ಅತ್ಯಂತ ದುರದೃಷ್ಟಕರ ದಿನ ಎಂದರೆ ತಪ್ಪಲ್ಲ. ಪಾಕಿಸ್ತಾನ ತಂಡ ಈ ವಿಶ್ವಕಪ್‌ನಲ್ಲಿ 3 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 2 ಪಂದ್ಯವನ್ನು ಗೆದ್ದಿದ್ದರೆ, ಭಾರತ ವಿರುದ್ಧದ ತನ್ನ ಕೊನೆಯ ಪಂದ್ಯದಲ್ಲಿ ಸೋತಿದೆ. ಈ ನಡುವೆ, ಪಾಕಿಸ್ತಾನದ ಮಾಜಿ ಆಟಗಾರನ ಮನೆಯಲ್ಲಿ ಶೋಕ ಮಡುಗಟ್ಟಿದೆ.
ಆಕಾಶವೇ ಕಳಚಿ ಬಿದ್ದ ಸ್ಥಿತಿ :
ಆಲ್‌ರೌಂಡರ್ ಶಾಹಿದ್ ಅಫ್ರಿದಿ ಕುಟುಂಬದಲ್ಲೀಗ ಶೋಕ ಮಡುಗಟ್ಟಿದೆ. ಇಂದು ಅಫ್ರಿದಿ ಸಹೋದರಿ ನಿಧನರಾಗಿದ್ದಾರೆ. ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಫ್ರಿದಿ ಸಹೋದರಿ, ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿಯನ್ನು ಸ್ವತಃ ಅಫ್ರಿದಿ ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : 2023ರ ಸೆಮಿಫೈನಲ್ ತಲುಪುವುದಿಲ್ಲ ಪಾಕಿಸ್ತಾನ ! ಸಂಪೂರ್ಣ ಸಮೀಕರಣ ಇಲ್ಲಿದೆ
ಅಫ್ರಿದಿ ಟ್ವೀಟ್ ನಲ್ಲಿ ಏನಿದೆ ? :
ಶಾಹಿದ್ ಅಫ್ರಿದಿ ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದಾರೆ. ಸಹೋದರಿಯ ಅಂತಿಮ ಸಂಸ್ಕಾರವನ್ನು ಯಾವಾಗ ಮತ್ತು ಎಲ್ಲಿ ನಡೆಸಲಾಗುವುದು ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ. 'ನಮ್ಮ ಪ್ರೀತಿಯ ಸಹೋದರಿ ನಿಧನರಾಗಿದ್ದು, 17.10.2023 ರಂದು ಝುಹುರ್ ನಮಾಜ್ ನಂತರ ಝಕರಿಯಾ ಮಸೀದಿ ಮುಖ್ಯ 26ನೇ ರಸ್ತೆ ಖಯ್ಬಾನ್-ಎ-ಗಾಲಿಬ್ ಡಿಎಚ್‌ಎಯಲ್ಲಿ ಅವರ ನಮಾಜ್-ಎ-ಜನಾಝಾ ನಡೆಯಲಿದೆ ಎಂದು ತಿಳಿಸಿದ್ದಾರೆ.
(إِنَّا ِلِلَّٰهِ وَإِنَّا إِلَيْهِ رَاجِعُونَ,)
Surely we belong to Allah and to him we shall return.
With Heavy hearts we inform you that our beloved Sister passed away and her Namaz e Janazah will be at 17.10.2023 after Zuhur prayer at Zakariya masjid main 26th street… https://t.co/Ly4sK6XVGT— Shahid Afridi (@SAfridiOfficial) October 17, 2023
ಆರೋಗ್ಯದ ಬಗ್ಗೆ ಈ ಹಿಂದೆಯೂ ಟ್ವೀಟ್ :
ಅಕ್ಟೋಬರ್ 16 ರಂದು ಅಫ್ರಿದಿ ತಮ್ಮ ಸಹೋದರಿಯ ಆರೋಗ್ಯ ಸ್ಥಿತಿ ಬಗ್ಗೆ ಟ್ವೀಟ್ ಮಾಡಿದ್ದರು. ನಾನು ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗಲು ಹಿಂತಿರುಗುತ್ತಿದ್ದೇನೆ. ಧೈರ್ಯದಿಂದ ಇರಿ ಎಂದು ಬರೆದುಕೊಂಡಿದ್ದರು. ಅಲ್ಲದೆ, ತನ್ನ ಸಹೋದರಿ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಕೋರಿದ್ದರು.
ಇದನ್ನೂ ಓದಿ : ಮುಂದಿನ ಪಂದ್ಯದಲ್ಲಿ ಕೊಹ್ಲಿ ಮುಡಿಗೇರಲಿದೆ ಈ ದಾಖಲೆ! ಧೋನಿ ಹಿಂದಿಕ್ಕಲಿದ್ದಾರೆ ವಿರಾಟ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.