Ricky Ponting Delhi Capitals: ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ರಿಕಿ ಪಾಂಟಿಂಗ್ 7 ವರ್ಷಗಳ ನಂತರ ತಮ್ಮ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಫ್ರಾಂಚೈಸಿ ಶನಿವಾರ ಸಾಮಾಜಿಕ ಮಾಧ್ಯಮದ ಮೂಲಕ ಈ ಘೋಷಣೆ ಮಾಡಿದೆ. ಇನ್ನು ಪಾಂಟಿಂಗ್ ನಿರ್ಗಮನದ ನಂತರ, ಪ್ರಸ್ತುತ ತಂಡದ ನಿರ್ದೇಶಕ ಸೌರವ್ ಗಂಗೂಲಿ ಮುಂದಿನ ಋತುವಿನಲ್ಲಿ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ಮಲಗುವ ಮುನ್ನ ಹೊಕ್ಕಳಿಗೆ ಈ ಎಣ್ಣೆ ಹಚ್ಚಿ: ಬೆಳಗಾಗುವಷ್ಟರಲ್ಲಿ ಯೂರಿಕ್ ಆಸಿಡ್ ಹೊರಬರುತ್ತದೆ
ಮಾಜಿ ಆಸ್ಟ್ರೇಲಿಯನ್ ಆಟಗಾರನೊಂದಿಗಿನ ತನ್ನ ಸುದೀರ್ಘ ಒಡನಾಟದ ಬಗ್ಗೆ ಫ್ರಾಂಚೈಸ್ ಭಾವನಾತ್ಮಕ ಪೋಸ್ಟ್ ಮಾಡಿದೆ.
ಆಸ್ಟ್ರೇಲಿಯಾದ ಎರಡು ಬಾರಿ ವಿಶ್ವಕಪ್ ವಿಜೇತ ನಾಯಕ ಪಾಂಟಿಂಗ್ 2019 ರಲ್ಲಿ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ಅವರ ಮೇಲ್ವಿಚಾರಣೆಯಲ್ಲಿ, ತಂಡವು 2021 ರಲ್ಲಿ ಮೊದಲ ಬಾರಿಗೆ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿತ್ತು. ಆದರೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು.
ಡೆಲ್ಲಿ ಕ್ಯಾಪಿಟಲ್ಸ್ನ ಆಡಳಿತದ ನಿಕಟ ಮೂಲವು ಪಿಟಿಐಗೆ ಅನಾಮಧೇಯತೆಯ ಷರತ್ತಿನ ಮೇಲೆ ನೀಡಿದ ಮಾಹಿತಿ ಪ್ರಕಾರ, 'ಏಳು ವರ್ಷಗಳಿಂದ ತಂಡವು ಪ್ರಶಸ್ತಿ ಗೆಲ್ಲದಿರುವ ಬಗ್ಗೆ ದೆಹಲಿ ಕ್ಯಾಪಿಟಲ್ಸ್ ಉನ್ನತ ಅಧಿಕಾರಿಗಳು ಅಸಮಾಧಾನ ಹೊಂದಿದ್ದಾರೆ. ಈ ಬಗ್ಗೆ ರಿಕಿ ಪಾಂಟಿಂಗ್’ಗೆ ತಿಳಿಸಿದ್ದಾರೆ. ತಂಡದ ನಿರ್ವಹಣೆಯು ಸಹಾಯಕ ಸಿಬ್ಬಂದಿಯಲ್ಲಿ ಬದಲಾವಣೆಗಳನ್ನು ಮಾಡಲು ಪ್ರಯತ್ನಿಸುತ್ತಿದೆ. ಮುಂದಿನ ವರ್ಷ ಅವರು ತಂಡದಲ್ಲಿ ಇರುವುದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಕಣ್ಣಿನಲ್ಲಿ ಆಗುವ ಈ ಬದಲಾವಣೆಗಳು ಮಧುಮೇಹದ ಮುನ್ಸೂಚನೆ: ಗಮನ ಹರಿಸದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ
ಸೌರವ್ ಗಂಗೂಲಿ ಹೊಸ ಕೋಚ್?
ಡೆಲ್ಲಿ ಕ್ಯಾಪಿಟಲ್ಸ್ ಹೊಸ ಮುಖ್ಯ ಕೋಚ್ ಅನ್ನು ನೇಮಿಸುತ್ತದೆಯೇ ಅಥವಾ ತಂಡದ ನಿರ್ದೇಶಕ ಸೌರವ್ ಗಂಗೂಲಿಯನ್ನು ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆಯೋ ಎಂದು ಕಾದುನೋಡಬೇಕಾಗಿದೆ. ತಂಡದ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಹುದ್ದೆಯಲ್ಲಿ ಮುಂದುವರಿಯುವುದು ಬಹುತೇಕ ಖಚಿತವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ