Virat Kohli: ಸದ್ಯ ಮೈದಾನದಿಂದ ಹೊರಗುಳಿದ ಕಿಂಗ್ ಕೊಹ್ಲಿ ತಮ್ಮ ಎರಡನೇ ಮಗುವಿನ ಸಂತಸದಲ್ಲಿದ್ದಾರೆ. ವಿರಾಟ್ ದಂಪತಿ ಇತ್ತೀಚೆಗೆ ಅಕಾಯ್‌ಗೆ ಜನ್ಮ ನೀಡಿದರು.. ಫೆಬ್ರವರಿ 15ರಂದು ಪೋಷಕರಾದ ಸೆಲೆಬ್ರಿಟಿ ಜೋಡಿ 5 ದಿನಗಳ ನಂತರ ಸಾಮಾಜಿಕ ಮಾಧ್ಯಮದ ಮೂಲಕ ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದರು.
ಅನುಷ್ಕಾ ಶರ್ಮಾ ಗರ್ಭಿಣಿಯಾಗಿರುವ ವಿಚಾರವನ್ನು ರಹಸ್ಯವಾಗಿಡಲಾಗಿತ್ತು.. ಆದರೂ ಈ ಸುದ್ದಿಯನ್ನು ಎಬಿ ಡಿವಿಲಿಯರ್ಸ್ ಬಹಿರಂಗಪಡಿಸಿ ನಂತರ ಸುಳ್ಳು ಎಂದು ವಿರಾಟ್‌ಗೆ ಕ್ಷಮೆ ಕೇಳಿದ್ದರು.. ಆದಾಗ್ಯೂ ವರ್ಷಗಳ ಹಿಂದೆಯೇ ಈ ಮಗು ಜನನದ ಬಗ್ಗೆ ಇನ್ನೊಬ್ಬ ವ್ಯಕ್ತಿ ಊಹಿಸಿದ್ದರು.. 2024ರಲ್ಲಿ ಕೊಹ್ಲಿ ಮತ್ತೊಮ್ಮೆ ತಂದೆಯಾಗುತ್ತಾರೆ ಎಂದು ಭವಿಷ್ಯ ಹೇಳಲಾಗಿತ್ತು..
ಇದನ್ನೂ ಓದಿ-IPL 2024: ಧೋನಿ ಬಳಿಕ ಚೆನ್ನೈ ತಂಡದ ನಾಯಕತ್ವಕ್ಕಾಗಿ 3 ಆಟಗಾರರ ನಡುವೆ ಶುರುವಾಯ್ತು ಫೈಟ್!?
ಎಂಟು ವರ್ಷಗಳ ಹಿಂದೆ ‘ಸ್ಟಾರ್ಸ್ ಅಂಡ್ ಜ್ಯೋತಿಷ್ಯ’ ಫೇಸ್‌ಬುಕ್ ಪೇಜ್‌ನಲ್ಲಿ ಶೇರ್ ಮಾಡಲಾದ ಪೋಸ್ಟ್ ಕೊಹ್ಲಿಯ ಜಾತಕದ ವಿವರಣೆಯನ್ನು ನೀಡಿತ್ತು.. ಹೌದು 2017ರ ಕೊನೆಯಲ್ಲಿ ವಿರಾಟ್ ಮದುವೆಯಾಗುತ್ತಾರೆ ಎನ್ನಲಾಗಿತ್ತು.. ಅದೇ ರೀತಿ ಡಿಸೆಂಬರ್ 11, 2017ರಲ್ಲಿ ವಿರಾಟ್-ಅನುಷ್ಕಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು.. ಅದೇ ಭವಿಷ್ಯ ವಿವರಣೆಯಲ್ಲಿ ಮಾರ್ಚ್ 2028ಕ್ಕೂ ಮೊದಲೇ ಉನ್ನತ ಮಟ್ಟದಲ್ಲಿ ವಿರಾಟ್ ನಿವೃತ್ತಿ ಹೊಂದುತ್ತಾರೆ ಎಂದು ಬರೆಯಲಾಗಿದೆ..
ಇದೀಗ ಪುತ್ರ ಅಕಾಯ್ ಜನನದ ನಂತರ ಈ ಪೋಸ್ಟ್ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.. ಹಾಗಾದ್ರೆ ಆ ಭವಿಷ್ಯ ವಿವರಣೆಯ ಪೋಸ್ಟ್‌ನಲ್ಲಿ ಏನಿದೆ ಎನ್ನುವುದನ್ನು ಇದೀಗ ತಿಳಿಯೋಣ ಬನ್ನಿ.
2016ರಲ್ಲಿ ನುಡಿದಂತಹ ಕೊಹ್ಲಿ ಭವಿಷ್ಯ ಸಂಪೂರ್ಣವಾಗಿ ಸರಿಯಿದೆ.. ಫೇಸ್‌ಬುಕ್ ಪೋಸ್ಟ್ ಪ್ರಕಾರ, 2024ರಲ್ಲಿ ಕೊಹ್ಲಿ ಮತ್ತೊಮ್ಮೆ ತಂದೆಯಾಗಲಿದ್ದಾರೆ ಎಂದು ಬರೆಯಲಾಗಿತ್ತು.. ಅದರಂತೆ ವಿರಾಟ್ ಅನುಷ್ಕಾ ಅಕಾಯ್‌ಗೆ ಜನ್ಮ ನೀಡಿದ್ದಾರೆ..
ಇದನ್ನೂ ಓದಿ-IND vs ENG: ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲಿಯೇ ಅಬ್ಬರಿಸಿದ ಕನ್ನಡಿಗ ದೇವದತ್ ಪಡಿಕಲ್
2025ರಿಂದ ಫೆಬ್ರವರಿ 2027ರವರೆಗೆ ವಿರಾಟ್‌ಗೆ ಕಷ್ಟದ ದಿನಗಳು ಎದುರಾಗಲಿವೆ.. 2027ರ ಫೆಬ್ರವರಿ ನಂತರ ಅವರು ತಮ್ಮ ಕ್ರಿಕೆಟ್ ಜೀವನದಲ್ಲಿ ಉತ್ತುಂಗಕ್ಕೆ ಏರಿ.. 2028ರ ಮಾರ್ಚ್ನಲ್ಲಿ ನಿವೃತ್ತಿ ಘೋಷಿಸಲಿದ್ದಾರೆ ಎಂದು ಭವಿಷ್ಯ ನುಡಿಯಲಾಗಿದೆ.
ಇನ್ನು ವಿರಾಟ್ 2021ರಿಂದ 2025ರ ಸೆಪ್ಟೆಂಬರ್ ವರೆಗೆ ಕ್ರಿಕೆಟ್ ವೃತ್ತಿಜೀವನದಲ್ಲಿ ದೊಡ್ಡ ಸ್ಥಾನಕ್ಕೇರಲಿದ್ದಾರೆ.. ಅದೇ ವೇಳೆ ಅವರಿಗೆ ಯಶಸ್ಸು ಖುಡ ದೊರಕಲಿದೆ ಎನ್ನಲಾಗಿದೆ.. ಒಟ್ಟಾರೆಯಾಗಿ ಈ ಭವಿಷ್ಯ ಕಳೆದ 8 ವರ್ಷಗಳ ಹಿಂದೆಯೇ ನುಡಿಯಲಾಗಿದ್ದರೂ ಕೊಹ್ಲಿ ಜೀವನದಲ್ಲಿ ನಡೆದ ಘಟನೆಗಳಿಗೆ ಹೋಲಿಕೆಯಿದೆ.. ಹೀಗಾಗಿ ವಿರಾಟ್ ಮುಂದಿನ ಭವಿಷ್ಯ ಏನಾಗಲಿದೆ ಎಂದು ಕಾದುನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.