2027 ICC T20 World Cup: ಟಿ20 ವಿಶ್ವಕಪ್ 2024 ಕಪ್ ಗೆದ್ದು ಟೀಂ ಇಂಡಿಯಾ ಚಾಂಪಿಯನ್ಶಿಪ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ವಿಶ್ವಕಪ್ ಗೆಲ್ಲುತ್ತಿದ್ದಂತೆ ಪಂದ್ಯದ ನಂತರ ತಂಡದ ಸ್ಟಾರ್ ಆಟಗಾರರು ಟಿ20 ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಕಪ್ ಗೆದ್ದ ಭಾರತ ತಂಡದ ಆಟಗಾರರು ಗೆಲುವಿನ ಕುಷಿಯಿಂದ ಒಬ್ಬರನ್ನೊಬ್ಬರು ಅಪ್ಪಿ ಕಣ್ಣೀರು ಹಾಕಿದರು. ನೋಡುಗರಿಗೆ ಇದೊಂದು ಸಿನಿಮೀಯ ಕ್ಷಣದಂತೆ ಗೋಚರವಾಯಿತು.
ಟಿ20 ಮಾದರಿಯ ಕ್ರಿಕೆಟ್ಗೆ ರೋಹಿತ್ ಹಾಗೂ ಕೊಹ್ಲಿ ನಿವೃತ್ತಿ ಘೋಷಿಸುತ್ತಿದ್ದಂತೆ. ಈ ಇಬ್ಬರು ದಿಗ್ಗಜ ಆಟಗಾರರು ಅಂತರಾಷ್ಟ್ರೀಯ ಕ್ರಿಕೆಟ್ಗೂ ಕೂಡ ವಿದಾಯ ಹೇಳಲಿದ್ದಾರಾ ಎನ್ನುವ ಪ್ರಶ್ನೆಗಳು ಎದ್ದಿತ್ತು. ಹಾಗಾದರೆ ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ...
ಅಂತರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಸರಿಯುವ ಮೊದಲು ಮೂಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕೊಹ್ಲಿ ಹಾಗೂ ರೋಹಿತ್ ಅವರ ವಯಸ್ಸು. ಹೌದು ಕೊಹ್ಲಿ ಅವರಿಗೆ ಇದೀಗ 36 ವರ್ಷ ಹಾಗೂ ರೋಹಿತ್ ಅವರಿಗೆ 39 ವರ್ಷ ತುಂಬಿದೆ. ಹೀಗಿರುವಾಗ 2027ರ ವೇಳೆಗೆ ರೋಹಿತ್ ಅವರಿಗೆ 40 ವರ್ಷ ತುಂಬಿರುತ್ತದೆ. ಮತ್ತು ಕೊಹ್ಲಿಗೆ 39 ವರ್ಷ ವಯಾಸ್ಸಾಗಿರುತ್ತದೆ.
ಇದನ್ನೂ ಓದಿ: ರೋಹಿತ್ ನಂತರ ಯಾರಾಗಲಿದ್ದಾರೆ ಟಿ20 ಕ್ಯಾಪ್ಟನ್..? ಹಾರ್ದಿಕ್ಗೆ ಶಾಕ್, ಆ ಆಟಗಾರನಿಗೆ ಒಲಿದ ಲಕ್..!
ಈ ಕುರಿತು ಯುಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿರುವ ಶುಭಂಕರ್ ಮಿಶ್ರಾ ಈ ಕುರಿತು ಮಾತನಾಡಿದ್ದು "ಇನ್ನೊಂದು 2-3 ವರ್ಷಗಳಲ್ಲಿ ವಿಶ್ವಕಪ್(2027) ಆಡುವುದು ಕಠಿಣವಾಗಿದೆ" ಎಂದಿದ್ದಾರೆ. ರೋಹಿತ್ ಅವರ ನಿವೃತ್ತಿಯ ಬಗ್ಗೆ ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಿಶ್ರಾ " ರೋಹಿತ್ ಅವರಿಗೆ ಇನ್ನು 3-4 ವರ್ಷಗಳ ಅವಧಿ ಉಳಿದಿದೆ, ಆದರೆ ಅವರು ಭಾರತಕ್ಕೆ ಆಡುವುದಿಲ್ಲ ಹೊರತಾಗಿ ಐಪಿಎಲ್ನಲ್ಲಿ ಮಾತ್ರ ಕಣಕ್ಕಿಳಿಯಲಿದ್ದಾರೆ, ರೋಹಿತ್ ಮಾತ್ರ ಅಲ್ಲ ವಿರಾಟ್ ಕೊಹ್ಲಿಯ ಕಥೆ ಕೂಡ ಅಷ್ಟೆ ಇದೇ ರೀತಿ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದು ಐಪಿಎಲ್ ಆಡಲಿದ್ದಾರೆ. ಈಗಿರುವಾಗ ಮಾತ್ರ ಹೊಸ ಯುವಕರಿಗೆ ಅವಕಾಶ ಸಿಗಲು ಸಾಧ್ಯ, ಸಾಮಾನ್ಯವಾಗಿ ಆಟಗಾರರು 40 ವರ್ಷಕ್ಕೆ ನಿವೃತ್ತಿ ಘೋಷಿಸುತ್ತಾರೆ ಹಾಗೆ ನೋಡಿದರೆ ಈ ಇಬ್ಬರು ಆಟಗಾರರು ಇನ್ನೂ 2-3 ವರ್ಷಗಳ ಕಾಲ ಭಾರತ ತಂಡಕ್ಕೆ ಆಡುವುದು ಹೆಚ್ಚು" ಎಂದಿದ್ದಾರೆ.
ಟಿ20 ಗೆದ್ದ ಖುಷಿಯಲ್ಲಿ ಈ ಇಬ್ಬರು ಸ್ಟಾರ್ ಆಟಗಾರರು ಸಧ್ಯಕ್ಕೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದು, ಕೊಹ್ಲಿ ಪತ್ನಿ ಅನುಷ್ಕಾ ಜೊತೆ ಲಂಡನ್ ಪ್ರವಾಸಕ್ಕೆ ಹಾರಿದ್ದಾರೆ.
ರೋಹಿತ್ ಪ್ರತಿನಿತ್ಯದ ತಮ್ಮ ಬದುಕಿನ ಜೊತೆ ಬ್ಯೂಸಿಯಾಗಿದ್ದು, ಇತ್ತೀಚೆಗೆ ವಿಂಬಲ್ಡನ್ ಸೆಮಿಫೈನಲ್ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಈ ಸಮಯದಲ್ಲಿ ರೋಹಿತ್ರನ್ನು ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೋಹಿತ್ ಈ ಎಲ್ಲಾ ನಿವೃತ್ತಿ ಕುರಿತ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.
" ಈ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ಕೇವಲ ಇನ್ನೂ ಕೆಲವು ಆಟಗಳಲ್ಲಿ ನಾನು ಆಡುವುದನ್ನು ನೀವು ಕಾಣಬಹುದು"ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ