ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ(Neeraj Chopra) ತೀವ್ರ ಜ್ವರ ಮತ್ತು ಬಳಲಿಕೆಯಿಂದ ಪಾಣಿಪತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 87.58 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ದೇಶಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ನೀರಜ್ ಅವರಿಗೆ ಹುಟ್ಟೂರಾದ ಹರಿಯಾಣದ ಪಾಣಿಪತ್ ಜಿಲ್ಲೆಯ ಖಂಡ್ರಾದಲ್ಲಿ ಅದ್ದೂರಿ ಸ್ವಾಗತ ಸಮಾರಂಭವನ್ನು ಆಯೋಜಿಸಲಾಗಿತ್ತು. ಬಂಗಾರದ ಮನುಷ್ಯನಿಗೆ ಗ್ರ್ಯಾಂಡ್ ವೆಲ್ಕಮ್(Grand Welcome) ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ನೀರಜ್ ಬಳಲಿಕೆ ಮತ್ತು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸಮಾರಂಭವನ್ನು ತೊರೆದಿದ್ದು, ಚಿಕಿತ್ಸೆಗಾಗಿ ಪಾಣಿಪತ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರನ್ನು ಸ್ವಾಗತಿಸಲು ಸಾಕಷ್ಟು ಜನರು ಬಂದಿದ್ದರು. ನೀರಜ್(Neeraj Chopra) ತಮ್ಮ ಹಳ್ಳಿಯ ಬಳಿ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮಕ್ಕೆ ಕುದುರೆ ಸವಾರಿ ಮೂಲಕ ತಲುಪಿದ್ದರು. ಸಮಾರಂಭ ಸ್ಥಳವನ್ನು ತಲುಪಲು ಬಹಳ ಸಮಯ ತೆಗೆದುಕೊಂಡಿತ್ತು. ಆದರೆ ಕಾರ್ಯಕ್ರಮದ ಮಧ್ಯದಲ್ಲಿ ಅವರು ಬಳಲಿದಂತೆ ಕಂಡುಬಂದರು. ಅವರನ್ನು ಆರೋಗ್ಯ ಪರಿಶೀಲಿಸಿದಾಗ ಸಣ್ಣದಾಗಿ ಜ್ವರ ಇರುವುದು ಕಂಡುಬಂದಿದೆ. ವಿಶ್ರಾಂತಿ ಅಗತ್ಯವಿದ್ದರಿಂದ ನೀರಜ್ ಸಮಾರಂಭವನ್ನು ತೊರೆದು ಹತ್ತಿರದ ಮನೆಯಲ್ಲಿ ಕೆಲಸಮಯ ವಿಶ್ರಾಂತಿ ಪಡೆದುಕೊಂಡರು ಅಂತಾ ಮೂಲಗಳು ತಿಳಿಸಿವೆ.
ಇದನ್ನೂ ಓದಿ: T20 World Cup: ಟಿ-20 ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಭಾರತ-ಪಾಕ್ ಪಂದ್ಯ ಯಾವಾಗ?
ಕೆಲಸಮಯದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನೀರಜ್ ಅವರನ್ನು ಪಾಣಿಪತ್ ಆಸ್ಪತ್ರೆ(Panipat Hospital)ಗೆ ಕರೆದೊಯ್ಯಲಾಗಿದೆ ಎಂದು ಕೆಲವು ವದಂತಿಗಳಿವೆ. ಟೋಕಿಯೊದಿಂದ ಬಂದ ನಂತರ ತಡೆರಹಿತವಾಗಿ ಅನೇಕ ಕಾರ್ಯಕ್ರಮಗಳಿಗೆ ನೀರಜ್ ಹಾಜರಾಗಿದ್ದರಿಂದ ದಣಿದಿದ್ದಾರೆ. ಅವರು ಯಾವುದೇ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿಲ್ಲ. ಅವರು ಸದ್ಯ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ ಅಂತಾ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Heartbreaking!: ಎಂ.ಎಸ್.ಧೋನಿ ಭೇಟಿಯಾಗಲು 1,400 ಕಿ.ಮೀ ನಡೆದುಹೋದ ಅಭಿಮಾನಿ..!
23 ವರ್ಷದ ಯುವಕ ನೀರಜ್ ಚೋಪ್ರಾ ಶೂಟರ್ ಅಭಿನವ್ ಬಿಂದ್ರಾ ನಂತರ ಒಲಂಪಿಕ್ಸ್(Tokyo Olympics 2020) ನ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ 2ನೇ ಭಾರತೀಯ ಮತ್ತು ಚಿನ್ನ ಗೆದ್ದ ಮೊದಲ ಭಾರತೀಯ ಟ್ರ್ಯಾಕ್ ಅಂಡ್ ಫೀಲ್ಡ್ ಅಥ್ಲೀಟ್ ಎನಿಸಿಕೊಂಡಿದ್ದಾರೆ. ಮನೆಗೆ ಹಿಂತಿರುಗಿದ ಒಂದೆರಡು ದಿನಗಳ ನಂತರ ಅವರಲ್ಲಿ ವಿಪರೀತ ಜ್ವರ ಕಾಣಿಸಿಕೊಂಡಿತ್ತು. ವೈದ್ಯರ ಸಲಹೆಯ ಮೇರೆಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ವರದಿ ನೆಗೆಟಿವ್ ಬಂದಿತ್ತು. ಸದ್ಯ ಅವರಿಗೆ ವಿಶ್ರಾಂತಿ ಅಗತ್ಯವಿರುವುದರಿಂದ ಮುಂದಿನ ಎಲ್ಲ ಸಮಾರಂಭಗಳಿಗೂ ಬ್ರೇಕ್ ಹಾಕಲಾಗಿದೆ ಅಂತಾ ಮೂಲಗಳು ತಿಳಿಸಿವೆ. ನೀರಜ್ ಅವರು ದೆಹಲಿಯಲ್ಲಿ ವಿವಿಧ ಅಭಿನಂದನಾ ಕಾರ್ಯಕ್ರಮಗಳಿಗೆ ಹಾಜರಾಗಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ