Virat Kohli test runs: ಭಾರತದ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿರುವ ನ್ಯೂಜಿಲೆಂಡ್ ಸರಣಿಯಲ್ಲಿ 1-0 ನಿಂದ ಮುನ್ನಡೆ ಸಾಧಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಡಿಯಲ್ಲಿ ನಡೆಯಲಿರುವ ಸರಣಿಯಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿ ಇದಾಗಿದೆ. ಈಗಾಗಲೇ ಮೊದಲ ಪಂದ್ಯ ಸೋತಿರುವ ಟೀಂ ಇಂಡಿಯಾ ಸರಣಿ ಗೆಲ್ಲುವ ಮೂಲಕ ಐಸಿಸಿ ಡಬ್ಲ್ಯುಟಿಸಿ ಫೈನಲ್ಗೆ ಮತ್ತೊಂದು ಹೆಜ್ಜೆ ಇಡಲು ಪ್ರಯತ್ನಿಸಲಿದೆ.
ಏತನ್ಮಧ್ಯೆ ಈ ಸರಣಿಯಲ್ಲಿ ಎಲ್ಲರ ಕಣ್ಣು ವಿರಾಟ್ ಕೊಹ್ಲಿಯ ಮೇಲಿದೆ. ಅವರು ಮತ್ತೊಂದು ಮೈಲಿಗಲ್ಲು ಸಾಧಿಸಲು ಹತ್ತಿರವಾಗುತ್ತಿದ್ದಾರೆ. ವಿಶೇಷವೆಂದರೆ ಇದುವರೆಗೆ ಕೇವಲ ಮೂವರು ಬ್ಯಾಟ್ಸ್ಮನ್ಗಳು ಮಾತ್ರ ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ಅದ್ಭುತ ಸಾಧನೆ ಮಾಡಲು ಸಾಧ್ಯವಾಗಿದೆ. ಈಗ ಕೊಹ್ಲಿ ನಾಲ್ಕನೇ ಬ್ಯಾಟ್ಸ್ಮನ್ ಆಗಿ ಈ ಸಾಧನೆ ಮಾಡಬಹುದಾಗಿದೆ. ಈ ಸಾಧನೆ ಮಾಡಲು ಅವರು ಇನ್ನೂ ಕೆಲವು ರನ್ ಗಳಿಸಬೇಕಾಗಿದೆ.
ಟೆಸ್ಟ್ನಲ್ಲಿ 10 ಸಾವಿರ ರನ್ ಗಳಿಸಿದ ಸಾಧಕರು
ಭಾರತದ ಪರ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಬ್ಯಾಟ್ಸ್ಮನ್ ಮಾಸ್ಟರ್ ಬ್ಲ್ಯಾಸ್ಟರ್ ಖ್ಯಾತಿಯ ಸಚಿನ್ ತೆಂಡೂಲ್ಕರ್. 200 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 15,921 ರನ್ ಗಳಿಸಿದ್ದಾರೆ. ಅವರು ವಿಶ್ವದಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಬ್ಯಾಟ್ಸ್ಮನ್ ಕೂಡ. ಇದರ ನಂತರ ರಾಹುಲ್ ದ್ರಾವಿಡ್ ಇದ್ದು, ಟೆಸ್ಟ್ ವೃತ್ತಿಜೀವನದಲ್ಲಿ ಅವರು 163 ಪಂದ್ಯಗಳನ್ನು ಆಡುವ ಮೂಲಕ 13,265 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ನಂತರ ಸುನಿಲ್ ಗವಾಸ್ಕರ್ ಇದ್ದು, ಭಾರತದ ಪರ 10 ಸಾವಿರ ಟೆಸ್ಟ್ ರನ್ ಗಳಿಸಿದ ಮೊದಲ ಬ್ಯಾಟ್ಸ್ಮನ್ ಆಗಿದ್ದಾರೆ.
10 ಸಾವಿರ ರನ್ ಸಮೀಪಿಸಿದ ಕೊಹ್ಲಿ
ಸುನಿಲ್ ಗವಾಸ್ಕರ್ ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಒಟ್ಟು 125 ಪಂದ್ಯಗಳನ್ನು ಆಡಿದ್ದು, 10,122 ರನ್ ಗಳಿಸಿದ್ದಾರೆ. ಭಾರತೀಯ ಕ್ರಿಕೆಟ್ನಲ್ಲಿ ಅನೇಕ ಶ್ರೇಷ್ಠ ಬ್ಯಾಟ್ಸ್ಮನ್ಗಳಿದ್ದರೂ, ಈ ಮಾದರಿಯಲ್ಲಿ ಕೇವಲ ಮೂವರು ಬ್ಯಾಟ್ಸ್ಮನ್ಗಳು ಮಾತ್ರ 10 ಸಾವಿರ ರನ್ಗಳನ್ನು ದಾಟಲು ಸಮರ್ಥರಾಗಿದ್ದಾರೆ. ಈಗ ವಿರಾಟ್ ಕೊಹ್ಲಿ ಕೂಡ ಆ ಪಟ್ಟಿಗೆ ಸೇರಬಹುದು, ಈ ಸಾಧನೆಗೆ ಅವರು ತುಂಬಾ ಹತ್ತಿರವಾಗಿದ್ದಾರೆ. ವಿರಾಟ್ ಕೊಹ್ಲಿ ಇದುವರೆಗೆ 115 ಟೆಸ್ಟ್ ಪಂದ್ಯಗಳಲ್ಲಿ 9,017 ರನ್ ಗಳಿಸಿದ್ದಾರೆ. ಅಂದರೆ 10 ಸಾವಿರದ ಗಡಿ ಮುಟ್ಟಲು ಇನ್ನೂ ಅವರಿಗೆ 983 ರನ್ಗಳ ಅಗತ್ಯವಿದೆ. ಅಂದರೆ ಈ ಸಾಧನೆ ಮಾಡಲು ಅವರಿಗೆ ಹೆಚ್ಚಿನ ಪಂದ್ಯಗಳು ಬೇಕಾಗಬಹುದು. ಸದ್ಯಕ್ಕೆ ಅವರು ಈ ಮೈಲಿಗಲ್ಲು ಸಾಧಿಸುವ ಲಕ್ಷಣ ಕಾಣುತ್ತಿಲ್ಲ, ಆದರೆ ಅವರು ಉತ್ತಮ ಆಟವನ್ನು ಮುಂದುವರಿಸಿದರೆ 10 ಸಾವಿರ ರನ್ಗಳನ್ನು ಪೂರೈಸುವುದು ಖಚಿತ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಜೊತೆ ಕಾಣಿಸಿಕೊಂಡ ಈ ಸ್ಟಾರ್ ಕ್ರಿಕೆಟಿಗನ ಮಗ ಯಾರು ಗೊತ್ತಾ?
9 ಸಾವಿರ ರನ್ ಪೂರೈಸಿದ ಕೊಹ್ಲಿ
ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಈಗಾಗಲೇ 9000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಇನ್ನೂ ೨ ಪಂದ್ಯಗಳಿದ್ದು, ಅವರು ಉತ್ತಮ ಫಾರ್ಮ್ ತೋರಿದರೆ ಮತ್ತಷ್ಟು ರನ್ ಗಳಿಸಬಹುದು. ಇದೀಗ ವಿರಾಟ್ ಕೊಹ್ಲಿ ಗುರುತಿಸಿಕೊಳ್ಳುವಂತಹ ಫಾರ್ಮ್ನಲ್ಲಿಲ್ಲ. ಆದರೆ ಕೊಹ್ಲಿಯಂತಹ ಬ್ಯಾಟ್ಸ್ಮನ್ನನ್ನು ಹೆಚ್ಚು ಹೊತ್ತು ಮೌನವಾಗಿರಿಸಲು ಸಾಧ್ಯವಿಲ್ಲ. ಒಂದು ವೇಳೆ ಅವರು ಮೊದಲಿನ ಫಾರ್ಮ್ಗೆ ಬಂದರೆ ಇನ್ನೂ ಕೆಲವೇ ಪಂದ್ಯಗಳಲ್ಲಿ 10 ಸಾವಿರದ ಗಡಿ ದಾಟಬಹುದು. ಶೀಘ್ರವೇ ಅವರು ಈ ಸಾಧನೆಯನ್ನು ಮಾಡಲಿ ಎಂದು ನಾವು ಹಾರೈಸೋಣ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.