ಐಸಿಸಿ ಟೆಸ್ಟ್ ರ್ಯಾಂಕಿಂಗ್: ಭಾರತ ಸೋತರು ಕೊಹ್ಲಿ ಅಗ್ರಸ್ಥಾನ ಅಭಾದಿತ

 ಭಾರತ ನಾಲ್ಕನೇ  ಟೆಸ್ಟ್ ಪಂದ್ಯದಲ್ಲಿ ಸೋತರು ಸಹಿತ  ತಂಡದ ನಾಯಕ ವಿರಾಟ್ ಕೊಹ್ಲಿ ರ್ಯಾಂಕಿಂಗ್ ನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

Last Updated : Sep 3, 2018, 03:28 PM IST
 ಐಸಿಸಿ ಟೆಸ್ಟ್ ರ್ಯಾಂಕಿಂಗ್: ಭಾರತ ಸೋತರು ಕೊಹ್ಲಿ ಅಗ್ರಸ್ಥಾನ ಅಭಾದಿತ title=

ನವದೆಹಲಿ: ಭಾರತ ನಾಲ್ಕನೇ  ಟೆಸ್ಟ್ ಪಂದ್ಯದಲ್ಲಿ ಸೋತರು ಸಹಿತ  ತಂಡದ ನಾಯಕ ವಿರಾಟ್ ಕೊಹ್ಲಿ ರ್ಯಾಂಕಿಂಗ್ ನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಕ್ರಮವಾಗಿ ಎರಡು ಇನ್ನಿಂಗ್ಸ್ ಗಳಲ್ಲಿ  46, 58 ರನ್  ಗಳಿಸಿದ್ದರು.ಆ ಮೂಲಕ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ  544 ರನ್ ಗಳಿಸಿ 937 ರೇಟಿಂಗ್ ಅಂಕಗಳ ಮೂಲಕ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇವರ ನಂತರರ ಸ್ಟೀವ್ ಸ್ಮಿತ್, ಕೆನ್ ವಿಲಿಯಮ್ಸ್ನ್ ದ್ವೀತಿಯ ಮತ್ತು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.ಬೌಲಿಂಗ್ ವಿಭಾಗದಲ್ಲಿ ಇಂಗ್ಲೆಂಡ್ ನ  ಜೇಮ್ಸ್ ಆಂಡರ್ಸನ್ 896 ಅಂಕಗಳನ್ನು ಪಡೆಯುವ ಮೂಲಕ ಅಗ್ರಸ್ಥಾನವನು ಕಾಯ್ದುಕೊಂಡಿದ್ದಾರೆ. ಭಾರತದ ಪರ  ರವಿಂದ್ರ ಜಡೇಜಾ 3 ಹಾಗೂ ಆರ್ ಅಶ್ವಿನ್ ಅವರು 8 ನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

 ಬ್ಯಾಟ್ಸ್ ಮನ್ ಗಳ ಐಸಿಸಿ ಟೆಸ್ಟ್ ರ್ಯಾಂಕಿಂಗ್:

1 ವಿರಾಟ್ ಕೊಹ್ಲಿ - 937 ಅಂಕ

2 ಸ್ಟೀವ್ ಸ್ಮಿತ್ - 929 ಅಂಕ

3 ಕೇನ್ ವಿಲಿಯಮ್ಸನ್ - 847 ಅಂಕ

4 ಡೇವಿಡ್ ವಾರ್ನರ್ - 820 ಅಂಕ

5 ಜೋ ರೂಟ್ - 809 ಅಂಕ

6 ಚೇತೇಶ್ವರ್ ಪೂಜಾರಾ - 798 ಅಂಕ

7 ಡಿಮತ್ ಕರುನಾರತ್ನೆ - 754 ಅಂಕ

8 ದಿನೇಶ್ ಚಂಡಿಮಾಲ್ - 733 ಅಂಕಗಳು

9 ಡೀನ್ ಎಲ್ಗರ್ - 724 ಅಂಕ

10 ಐಡೆನ್ ಮಾರ್ಕ್ರಾಮ್ - 703 ಅಂಕಗಳು

ಬೌಲರ್ ಗಳ ಟೆಸ್ಟ್ ರ್ಯಾಂಕಿಂಗ್ ಪಟ್ಟಿ 

1 ಜೇಮ್ಸ್ ಆಂಡರ್ಸನ್ - 896 ಅಂಕ

2 ಕಾಗಿಸೊ ರಬಾಡಾ - 882 ಅಂಕ

3 ರವೀಂದ್ರ ಜಡೇಜಾ - 832 ಅಂಕ

4 ವರ್ನನ್ ಫಿಲಾಂಡರ್ - 826 ಅಂಕ

5 ಪ್ಯಾಟ್ ಕಮ್ಮಿನ್ಸ್ - 800 ಅಂಕ

6 ಟ್ರೆಂಟ್ ಬೌಲ್ಟ್ - 795 ಅಂಕಗಳು

7 ರಂಗನಾ ಹೆರಾತ್ - 791 ಅಂಕ

8 ಆರ್ ಅಶ್ವಿನ್ - 777 ಅಂಕ

9 ನೀಲ್ ವ್ಯಾಗ್ನರ್ - 765 ಅಂಕ

10 ಜೋಶ್ ಹ್ಯಾಝೆಲ್ವುಡ್ - 759 ಅಂಕ
 

Trending News